ಹೌದು ಇತ್ತೀಚಿಗೆ ಕೆಲವರಲ್ಲಿ ಈ ರೋಗ ಕಂಡು ಬರುತ್ತಿದೆ. ಇದು ನಮ್ಮ ಪ್ರಾಣಕ್ಕೆ ಕುತ್ತು ತರುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಇದು ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಇಂತಹ ಸಮಶ್ಯೆಗಳಿಗೆ ನಿಮ್ಮ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಪರಿಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ.

ಒಂದು ಚಮಚ ಹಸಿಶುಂಠಿಯ ರಸದಲ್ಲಿ 20 ಗ್ರಾಂ ಈರುಳ್ಳಿ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಸಕ್ಕರೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಈ ಸಮಸ್ಯೆಯು ನಿವಾರಣೆಯಾಗುವುದು.

ಒಂದು ಚಮಚ ಹಸಿಶುಂಠಿ ರಸ, ಅರ್ಧ ಕಪ್ ನಿಂಬೆರಸ ಮತ್ತು ಒಂದು ಚಮಚ ಈರುಳ್ಳಿ ರಸ ಗಳನ್ನೂ ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ೪ ಗುಂಜಿ ಕಲ್ಮಿಶೋರ ಮತ್ತು ಅರ್ಧ ಚಮಚ ಎಳ್ಳು ಚೂರ್ಣವನ್ನು ಸೇರಿಸಿ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸಿದರೆ ಉತ್ತಮ.

ಈ ಸಮಸ್ಯೆ ಇರುವವರು ಸ್ವಲ್ಪ ಮೂಲಂಗಿ ರಸಕ್ಕೆ ಒಂದು ಗ್ರಾಂ ಯಾವಕ್ಷರ ಸೇರಿಸಿ ಬೆಳಗ್ಗೆ ಸಾಯಂಕಾಲ ಸೇವಿಸುವುದು ಒಳ್ಳೆಯದು.

ಬಾಳೆದಿಂಡಿನ ರಸ ೩೦ ಗ್ರಾಂ , ಹಸಿಶುಂಠಿಯ ರಸ ಒಂದು ಚಮಚ, ಕಲ್ಮಿಶೋರ ೨೫ ಗ್ರಾಂ ಮತ್ತು ಕುಡಿಸಿ ಗಟ್ಟಿಯಾಗಿಸಿದ ೨೫೦ ಗ್ರಾಂ ಹಾಲನ್ನು ಮಿಶ್ರಣ ಮಾಡಿ ದಿನಕ್ಕೆ ಮೂರೂ ಸಲ ಸೇವಿಸಿ ಒಂದು ತಿಂಗಳವರೆಗೆ ಮಾಡುತ್ತ ಬಂದರೆ ಮೂತ್ರ ಸಂಬಂಧಿ ಕಲ್ಲುಗಳು ಕರಗಿ ಹೋಗುತ್ತವೆ.

ಮೂತ್ರದ ಕಲ್ಲುಗಳನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯಿರಿ ಮತ್ತು ಮುಟ್ರ್ಯಾಂಗಗಳಿಗೆ ರೋಗಾಣುಬಾಧೆ ಬರದಂತೆ ಎಚ್ಚರವಹಿಸಿ.

ಮೂತ್ರದ ರಾಸಾಯನಿಕತೆಯಲ್ಲಿ ಸೂಕ್ತ ಬದಲಾವಣೆಗಳನ್ನು ಔಷಧ ಹಾಗು ಆಹಾರ ಪಥ್ಯದ ಮೂಲಕ ಸರಿ ಮಾಡುವುದರಿಂದ ಈ ಕಲ್ಲುಗಳು ಪದೇ ಪದೇ ಉಂಟಾಗುವುದನ್ನು ತಡೆಗಟ್ಟಬಹುದಾಗಿದೆ.

Leave a Reply

Your email address will not be published. Required fields are marked *