ಹೌದು ನಾವು ಕೆಲವೊಂದು ಧರಿಸುವ ವಸ್ತುವು ಪ್ಯಾಷನ್ ಆದರೂ ಕಾಕತಾಳೀಯ ಎಂಬಂತೆ ಅದಕ್ಕೊಂದು ಅರ್ಥ ಇರುತ್ತೆ ಅಥವಾ ಅದರಿಂದ ಕೆಲವೊಂದು ಅನುಕೂಲ ಇರುತ್ತೆ ಆದರೆ ನಮಗೆ ತಿಳಿದಿರುವುದಿಲ್ಲ ಅದೇ ರೀತಿ ಗಂಡುಮಕ್ಕಳು ಕಿವಿಯಲ್ಲಿ ಓಲೆ ಧರಿಸುವುದರಿಂದ ಈ ರೀತಿ ಎಲ್ಲ ಲಾಭಗಳಿರುತ್ತಾ.

ಮಹಿಳೆಯರಿಗೆ ಮೂಗುತಿ ಹಾಗು ಕಿವಿಯೋಲೆ ದೇಹದ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಲ್ಲದೇ ವೇದ ಶಾಸ್ತ್ರಗಳ ಪ್ರಕಾರ ಅದರಿಂದ ಹೆಣ್ಣಿನ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬಿರುವುದಲ್ಲದೆ ಹಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು.

ಅದೇ ರೀತಿ ಆಭರಣ ತೊಡುವುದು ಕೆಲವರಿಗೆ ಸಂಪ್ರದಾಯವಾದರೆ ಮತ್ತೆ ಕೆಲವರಿಗೆ ಇದೊಂದು ಫ್ಯಾಷನ್ ಆಗಿರುತ್ತದೆ. ಆದರೆ ಮಕ್ಕಳು ಕಿವಿ ಓಲೆ ಧರಿಸುವುದರಿಂದ ಅವರ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೇ, ಬೆಳವಣಿಗೆಗೆ ಸಂಬಂಧಿಸಿರೋ ತೊಂದರೆಯನ್ನೂ ಸಹ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಅಷ್ಟಕ್ಕೂ ಕಿವಿಗೆ ಓಲೆ ಧರಿಸುವುದರಿಂದ ಪ್ರಯೋಜನವೇನು: ಸಂತಾನೋತ್ಪತ್ತಿಗೆ ಸಹಕರಿಸುತ್ತದೆ: ಎಡ ಭಾಗದಲ್ಲಿ ಮೂಗುತಿ ಧರಿಸುವುದರಿಂದ ಹೆಣ್ಣುಮಕ್ಕಳು ತನ್ನ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಬೇಕಾದ ಮಾನಸಿಕ ಹಾಗೂ ದೈಹಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆಯಂತೆ.ಅಷ್ಟೇ ಅಲ್ಲದೆ ಮಗುವಿಗೆ ಜನ್ಮ ನೀಡುವಾಗ ಯಾವುದೇ ನೋವಾಗದಂತೆ ತಡೆಯುತ್ತದೆಯಂತೆ.

ರಕ್ತ ಸಂಚಾರಕ್ಕೆ ಸಹಕರಿಸುತ್ತದೆ: ಕಿವಿ ಓಲೆ ದೇಹದಲ್ಲಿ ರಕ್ತ ಸಂಚಾರ ಸುಗಮ ಮಾಡಲು ಸಹಾಯ ಮಾಡುತ್ತದೆ. ರಕ್ತ ಸಂಚಾರ ಸರಿಯಾದಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗ ನೀರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ವೀರ್ಯ ಪ್ರಮಾಣ ವೃದ್ಧಿಸುತ್ತದೆಯಂತೆ: ಹೌದು ಗಂಡು ಮಕ್ಕಳು ಓಲೆ ಧರಿಸುವುದರಿಂದ ವೀರ್ಯದ ಪ್ರಮಾಣವೂ ಹೆಚ್ಚಾಗುತ್ತದೆಯಂತೆ.

Leave a Reply

Your email address will not be published. Required fields are marked *