ಹೌದು ಒಂದು ಎಳನೀರು ಒಂದು ಇಂಜೆಕ್ಷನ್ ಗೆ ಸಮ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಕೆಳಗೆ ಇರುವ ಸಮಸ್ಯೆಗಳಿಗೆ ಪರಿಹಾರ ಅಂದ್ರೆ ಅದು ಎಳನೀರು ಮಾತ್ರ ಪ್ರತಿದಿನ ಒಂದು ಎಳನೀರು ಸೇವನೆ ಮಾಡಿ ಈ ಸಮಸ್ಯೆಗಳಿಂದ ದೂರವಿರಿ.

ಹೃದಯದ ಆರೋಗ್ಯಕ್ಕೆ ಎಳನೀರು: ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟಾಲ್ ಹೆಚ್ಚು ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ಹ್ಯಾಂಗೋವರ್‌: ವೀಕೆಂಡ್‌ ಪಾರ್ಟಿ ಮುಗಿಸಿ ಬೆಳಗ್ಗೆ ಏಳುವಾಗ ಹ್ಯಾಂಗೋವರ್‌ ಕಾಡುತ್ತಿದೆಯೇ? ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿದರೆ ಸಾಕು, ರಿಫ್ರೆಶ್‌ ಆಗುವಿರಿ.

ಬೊಜ್ಜು ಕರಗಲು: ಬೊಜ್ಜು ಕರಗಲು ದಿನಾ ಅರ್ಧ ಗಂಟೆ ವ್ಯಾಯಾಮ ಹಾಗೂ ಒಂದು ಎಳನೀರು ಕುಡಿಯಿರಿ, ಬೊಜ್ಜು ಕರಗುವುದು, ಮುಖದ ಕಾಂತಿ ಕೂಡ ಹೆಚ್ಚುವುದು.

ಮೈಗ್ರೇನ್‌: ದೇಹದಲ್ಲಿ ಮೆಗ್ನಿಷಿಯಂ ಅಂಶ ಕಡಿಮೆಯಾದರೆ ಮೈಗ್ರೇನ್‌ ಕಾಣಿಸುವುದು. ಮೈಗ್ರೇನ್‌ಗೆ ಎಳನೀರಿನಲ್ಲಿರುವ ಮೆಗ್ನಿಷಿಯಂ ಒಳ್ಳೆಯದೆಂದು ಎಕ್ಸ್‌ಪರ್ಟ್ಸ್‌ ಕೂಡ ಸಲಹೆ ನೀಡುತ್ತಾರೆ.

ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ: ಇದರಲ್ಲಿ ಅಮೈನೋ ಆ್ಯಸಿಡ್‌ ಇದ್ದು ಸಕ್ಕರೆಯಂಶವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಯೌವನದ ಲುಕ್ ಬೇಕೆ: ವಯಸ್ಸಾದಂತೆ ಸುಕ್ಕಾಗುವುದು ನೈಸರ್ಗಿಕ ನಿಯಮವಾದರೂ ಯೌವನ ಕಳೆ ಬೇಗನೆ ಮಾಸದಿರಲು ಎಳನೀರು ಸಹಾಯ ಮಾಡುತ್ತದೆ.

ಬಿಪಿ ನಿಯಂತ್ರಣ: ವೆಸ್ಟ್‌ ಇಂಡಿಯಾ ಮೆಡಿಕಲ್ ಜರ್ನಲ್‌ ಮಾಡಿರುವ ಅಧ್ಯಯನದಲ್ಲಿ ಎಳನೀರಿನಲ್ಲಿರುವ ಪೊಟಾಷ್ಯಿಯಂ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ ಎಂದು ಸಾಬೀತಾಗಿದೆ.

ನ್ಯಾಚುರಲ್‌ ಎನರ್ಜಿ ಡ್ರಿಂಕ್ಸ್‌: ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತುಂಬಾ ಸುಸ್ತು ಅನಿಸುವುದು. ಒಂದು ಎಳನೀರು ದಿನಪೂರ್ತಿ ಚಟುವಟಿಕೆಯಿಂದ ಇರಲು ಚೈತನ್ಯ ನೋಡುವುದು.

Leave a Reply

Your email address will not be published. Required fields are marked *