ನುಗ್ಗೆ ಸೊಪ್ಪಿನಲ್ಲಿ ಸಾಕಷ್ಟು ನಮ್ಮ ಆರೋಗ್ಯಕ್ಕೆ ಬೇಕಾಗಿರುವ ಅಂಶವನ್ನು ಹೊಂದಿದೆ ಮತ್ತು ಈ ಕೆಳಗಿನ ಎಂಟು ಅರೋಗ್ಯ ಸಮಸ್ಯೆಗಳಿಗೆ ಈ ನುಗ್ಗೆ ಸೊಪ್ಪು ರಾಮಬಾಣವಾಗಿದೆ.

ಆಗಾಗ ತಲೆಸುತ್ತು ಬರುತ್ತಿದ್ದರೆ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆರಸ ಹಿಂಡಿ ಒಂದು ವಾರ ಬೆಳಗ್ಗೆ ಕುಡಿದರೆ ಸಾಕು, ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಒಂದೇ ಪಾರ್ಶ್ವದಲ್ಲಿ ತಲೆ ನೋಯುತ್ತಿದ್ದರೆ ನಾಲ್ಕರಿಂದ ಐದು ಹನಿ ನುಗ್ಗೆ ಸೊಪ್ಪಿನ ರಸವನ್ನು ಬಲಗಡೆ ನೋಯುತ್ತಿದ್ದರೆ ಎಡಕಿವಿಗೆ, ಎಡತಲೆ ನೋಯುತ್ತಿದ್ದರೆ ಬಲಕಿವಿಗೆ ಹಾಕಿದರೆ ತಲೆನೋವು ಕಡಿಮೆಯಾಗುವುದು.

ನುಗ್ಗೆ ಸೊಪ್ಪು ಬಳಕೆಯಿಂದ ಈ ಸಮಸ್ಯೆಯಿಂದ ದೂರವಿರಬಹುದು ಬಾಣಂತಿಯರು ಎದೆ ಹಾಲು ಕಮ್ಮಿಯಿದ್ದರೆ ನುಗ್ಗೆ ಸೊಪ್ಪನ್ನು ತಿಂದರೆ ಸಾಕು, ಸಮಸ್ಯೆ ನಿವಾರಣೆಯಯಾಗುವುದು. ಲೈಂಗಿಕ ನಿಶ್ಯಕ್ತಿ ಇರುವವರು ಪ್ರತಿದಿನ ಇದನ್ನು ತಿಂದರೆ ಲೈಂಗಿಕ ಸಾಮರ್ಥ್ಯ ಹೆಚ್ಚಾಗುವುದು.

ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ನುಗ್ಗೆಸೊಪ್ಪು ತಿಂದು ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡಬಹುದು. ಮಧುಮೇಹಿಗಳು ಈ ಸೊಪ್ಪು ತಿಂದರೆ ದೇಹದಲ್ಲಿ ಇನ್ಸುಲಿನ್‌ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಅಧಿಕ ರಕ್ತದೊತ್ತಡ ಸಮಸ್ಯೆಗೆ ರಾಮಬಾಣ, ನುಗ್ಗೆ ಸೊಪ್ಪಿನ ರಸವನ್ನು ತೆಗೆದು ಅದಕ್ಕೆ ಒಂದು ಚಮಚ ಜೇನು ತುಪ್ಪ್ಪ ಹಾಕಿ ಕುಡಿದರೆ, ಮುಟ್ಟಿನ ಸಮಯದ ನೋವು ಕಡಿಮೆ ಆಗುವುದು.

Leave a Reply

Your email address will not be published. Required fields are marked *