ವಿದ್ಯೆ ಜಗತ್ತಿನ ಪ್ರಮುಖ ಅಸ್ತ್ರ. ಹಣ, ಆಸ್ತಿ, ಬಂಗಾರಕ್ಕಿಂತ ಹೆಚ್ಚಿನ ಬೇಡಿಕೆ ಇರುವುದು ವಿದ್ಯೆಗೆ. ಹಣ ಕೊಟ್ಟು ಏನಾದರು ಕೊಂಡುಕೊಳ್ಳಬಹುದು ಆದರೆ ವಿದ್ಯೆಯನ್ನಲ್ಲ. ವಿದ್ಯೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಕಲಿಬೇಕು, ಓದಬೇಕು ಅನ್ನುವ ಮನಸ್ಸಿದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು ಅನುವುದಕ್ಕೆ 21ರ ಹರೆಯದ ಈ ಯುವಕನೇ ಎಲ್ಲರಿಗು ಮಾದರಿ. ತಮ್ಮ ಬಡತನವನ್ನು ಲೆಕ್ಕಿಸದೆ ಯುವಕ ಮೊದಲ ಯುಪಿಎಸ್‌ಸಿ ಪರೀಕ್ಷೆಯಲ್ಲಿಯೇ 361ನೇ ರ‍್ಯಾಂಕ್‌ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದ್ದಾನೆ.

ಈತನ ಕುಟುಂಬ ತುಂಬಾ ಬಡಕುಟುಂಬ.ತಂದೆ ಸಾಮಾನ್ಯ ಆಟೋ ಡ್ರೈವರ್. ಮಹಾರಾಷ್ಟ್ರದ ಮಾರಥವಾಡ ಪ್ರದೇಶದ ಜಲ್ನಾ ಶೆಲಗಾಂವ್ ಹಳ್ಳಿಯ ಅನ್ಸರ್ ಅಹಮ್ಮದ್ ಈ ಸಾಧನೆ ಮಾಡಿರುವ ಯುವಕ. ತಂದೆ ಸಾಮಾನ್ಯ ಆಟೋ ಡ್ರೈವರ್ ಆದರೂ ಕೂಡ ಮಗನನ್ನು IAS ಓದಿಸುವ ಕನಸು ಹೊಂದಿದ್ದರು. ತುಂಬಾ ಬಡ ಕುಟುಂಬ ಆದ್ದರಿಂದ IAS ಮಾಡಿಸುವುದು ತುಂಬಾ ಕಷ್ಟವಾಗಿತ್ತು. ಇವರು ತಮ್ಮ ಆಸೆಯನ್ನು ಬೇರೆಯವರ ಬಳಿ ಹೇಳಿದಾಗ ಜನರು ಲೇವಡಿ ಮಾಡಿದ್ದರು. ಇವರಿಗೆ ಮುಂಬೈ ನಲ್ಲಿ ಮನೆ ಇರಲಿಲ್ಲ ಒಂದು ಚಿಕ್ಕ ಮನೆಯಲ್ಲೇ ಕಷ್ಟ ಪಟ್ಟು ತನ್ನ ಛಲ ಬಿಡದೆ ಹಲವಾರು ಕಷ್ಟಗಳನ್ನು ಅನುಭವಿಸಿ ಮಗನ IAS ಓದಿಗಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಮಗನ ಆಸೆಯಂತೆ ಓದಿಸಿ ಅದರಲ್ಲಿ ಯಶಸ್ವೀ ಕೂಡ ಆಗಿದ್ದಾರೆ.

ಆರ್ಥಿಕವಾಗಿ ಬಡ ಕುಟುಂಬದಿಂದ ಬಂದಿದ್ದ ಅನ್ಸರ್ ಅಹಮ್ಮದ್ ತನ್ನ ತಂದೆಯ ಆಸೆಯಂತೆ ಅಣ್ಣ ಹಾಗೂ ಅಮ್ಮನ ಸಹಾಯದಿಂದ ಕಷ್ಟಪಟ್ಟು ಮುಂಬೈಲಿದ್ದುಕ್ಕೊಂಡು ಓದಿ ಯುಪಿಎಸ್‌‌‌ಸಿ ನೆಡೆಸಿದ 2015ರ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶದಲ್ಲಿ 361 ನೇ ರ‍್ಯಾಂಕ್‌ ಪಡೆದು ಅವರ ತಂದೆ ತಾಯಿಯ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿ. ದೇಶದ ಅತ್ಯುನ್ನತ ಹುದ್ದೆಗಳನ್ನು ಕೂಡ ಬಡ ಮಕ್ಕಳು ಪಡೆದುಕೊಳ್ಳಬಹುದು ಎಂದು ತೋರಿಸಿ ಕೊಟ್ಟ ಈ ಸಾಧಕನಿಗೆ ನಮ್ಮ ನಮನ.

ಇವರ ಈ ಸಾಧನೆ ಇಡೀ ದೇಶದ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ. ಸಾಧಿಸುವ ಹಠ, ಛಲ, ಶ್ರಮ ಹೊಂದಿದ್ದಾರೆ ಏನಾದರು ಸಾಧಿಸಬಹುದು ಎಂಬುದಕ್ಕೆ ಈ ಯುವಕನ ಸಾಧನೆಯೇ ಸ್ಫೂರ್ತಿ.

Leave a Reply

Your email address will not be published. Required fields are marked *