ಸಂಜೆ ಸಮಯದ ಸ್ನಾಕ್ಸ್ ಅಂದ್ರೆ ಮೊದಲು ತಲೆಯಲ್ಲಿ ಬರುವುದು ಚೈನೀಸ್ ಫುಡ್ ಅದರಲ್ಲೂ ಗೋಬಿ ಎಲ್ಲರ ಮೆಚ್ಚುಗೆಯ ಅಹಾರ ಎಂದರೆ ತಪ್ಪಾಗಲಾರದು, ಹೊರಗೆ ತಿಂದು ಅರೋಗ್ಯ ಹಾಳುಮಾಡಿಕೊಳ್ಳುವ ಬದ್ಫಲು ಮನೆಯಲ್ಲೇ ರುಚಿಯಾಗಿ ಮಾಡುವ ಸುಲಭ ವಿಧಾನವನ್ನು ತಿಳಿಸುತ್ತೇವೆ.

ಮೊದಲು ಗೋಬಿಯನ್ನು ಬಿಡಿಸಿಕೋ0ಡು ಬಿಸಿ ನೀರಿನಲ್ಲಿ 10 ನಿಮಿಷ ಬಿಡಿ, ಒಂದು ಪಾತ್ರೆಗೆ 1 ಕಪ್ ಮೈದಾ ಹಿಟ್ಟು, 1/2 ಕಪ್ corn flour, 1 ಸ್ಪೋನ್ ಶುಂಠಿಬೆಳ್ಳುಳ್ಳಿ ಪೇಸ್ಟ್, 1/2 ಸ್ಪೋನ್ ಚಿಲ್ಲಿ ಪುಡಿ, ಉಪ್ಪು, ನೀರು ಹಾಕಿ ಚೆನ್ನಾಗಿ ಕಲೆಸಿಕೋಳ್ಳಿ, ಇದಕ್ಕೆ ಗೋಬಿಯನ್ನು ಹಾಕಿ ಕಾದ ಎಣ್ಣೆಯಲ್ಲಿ ಕರಿದು ಇಟ್ಟುಕೊಳ್ಳಿ.

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಉದ್ದಕ್ಕೆ ಸೀಳಿದ ಹಸಿಮೆಣಸಿನ ಕಾಯಿ ಹಾಕಿ ಬಾಡಿಸಿ, ಅದಕ್ಕೆ ಉಪ್ಪು, ಸೋಯಾಸಾಸ್, ಟೊಮೇಟೊ ಸಾಸ್, ರೆಡ್ ಚಿಲ್ಲಿ ಸಾಸ್, 1/2 ಸ್ಪೋನ್ ಕಷ್ಮಿರಿ ಲಾಲ್ ಮಿರ್ಚಿ ಪುಡಿ ಹಾಗೂ ವಿನೆಗರ್ ಸೇರಿಸಿ ಮತ್ತೆ ಬಾಡಿಸಿ.

ಒಂದು ಪಾತ್ರೆಯಲ್ಲಿ 1 ಚಮಚ ಕಾರ್ನ್ ಫ್ಲೋರ್ ಹಾಗೂ ಸ್ವಲ್ಪ ನೀರು ಸೇರಿಸಿ ಆ ಮಿಶ್ರಣವನ್ನು ಗ0ಟಿಲ್ಲದತೆ ಕಲೆಸಿಕೋಂಡು ಒಗ್ಗರಣೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಕರಿದ ಗೋಬಿಗಳನ್ನು ಸೇರಿಸಿ ಚೆನ್ನಾಗಿ fry ಮಾಡಿ.

ಕೊನೆಯಲ್ಲಿ ಈರುಳ್ಳಿ ಹೂವು ಹಾಗೂ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ ಟೋಮೆಟೋ ಕೆಚೆಪ್ ಜೊತೆ ತಿನ್ನಲು ರೆಡಿ.

Leave a Reply

Your email address will not be published. Required fields are marked *