ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಂವೃದ್ದಿ ಮತ್ತು ಶಾಂತಿ ನೆಲೆಸಿರಬೇಕೆಂದು ಬಯಸುತ್ತಾರೆ, ಇವುಗಳ ಕೊರತೆ ಕಂಡರೆ ವಾಸ್ತುಶಾಸ್ತ್ರದ ಈ ವಿಷಯದ ಬಗ್ಗೆ ಮುಖ್ಯವಾಗಿ ಗಮನ ಹರಿಸಿ.

ವಾಸ್ತು ಪ್ರಕಾರ ಮನೆಯಲ್ಲಿ ಬಳಕೆಗೆ ಬಾರದ ಯಾವುದೇ ವಸ್ತುಗಳು ಇರಬಾರದು, ಆ ವಸ್ತುಗಳ ಮನೆಯಲ್ಲಿ ಇದ್ದರೆ ಲಕ್ಷ್ಮಿ ಕೋಪಗೊಂಡು ದಾರಿದ್ರ್ಯ ನೀಡುತ್ತಾಳಂತೆ ಹಾಗಾಗಿ ಈ ಕೆಳಗೆ ಹೇಳುವ ವಿಷಯಗಳ ಬಗ್ಗೆ ಗಮನ ಇರಲಿ.

ಮನೆಯಲ್ಲಿ ಮುರಿದ ಮಡಿಕೆಗಳು ಇಡಬೇಡಿ, ಶಾಸ್ತ್ರದ ಪ್ರಕಾರ ಇದು ಮನೆಯಲ್ಲಿದರೆ ಲಕ್ಷ್ಮಿ ಪ್ರಸನ್ನಳಾಗುವುದಿಲ್ಲ ಹಾಗೂ ಬಡತನ ಮನೆಯನ್ನು ಪ್ರವೇಶ ಮಾಡುತ್ತದೆ.

ಶಾಸ್ತ್ರದ ಪ್ರಕಾರ ಮನೆಯಲ್ಲಿ ಒಡೆದ ಗಾಜುಗಳನ್ನು ಇಡುವುದು ಯೋಗ್ಯವಲ್ಲ ಇದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ ಮನೆಯಲ್ಲಿರುವ ಸದಸ್ಯರು ಇದರ ಪ್ರರಿಣಾಮವನ್ನು ಎದುರಿಸಬೇಕಾಗ್ಗುತ್ತದೆ.

ಮನೆಯಲ್ಲಿರುವ ಗಡಿಯಾರದಿಂದ ಕುಟುಂಬದ ಅಭಿವೃದ್ದಿ ಸಾಧ್ಯ ಹಾಗಾಗಿ ನಿಂತ, ಕೆಲಸ ಮಾಡದ ಗಡಿಯಾರವನ್ನು ಮನೆಯಲ್ಲಿ ಇಡಬೇಡಿ.

ಮನೆಯಲ್ಲಿರುವ ಫೋಟೋ ಒಡೆದು ಹೋದರೆ ತಕ್ಷಣ ಹೊರಗೆ ಬಿಸಾಕಿ ಅದು ಎಸ್ಟೇ ನಿಮಗೆ ಇಷ್ಟವಾಗಿದ್ದರು ನೀವು ಈ ಕೆಲಸ ಮಾಡಲೇಬೇಕು ಒಡೆದ ಫೋಟೋ ಮನೆಯಲ್ಲಿಡುವುದು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ.

ಮನೆಯ ಮುಖ್ಯ ಬಾಗಿಲು ಅಥವಾ ಇನ್ನಾವುದಾದರೂ ಬಾಗಿಲು ಹಾಳಾಗಿದ್ದಲ್ಲಿ ತಕ್ಷಣ ಸರಿಮಾಡಿಸಿ.

ಮಲಗುವ ಹಾಸಿಗೆ ಕೂಡ ಮನೆಯ ಶಾಂತಿ ಕೆಡಿಸಬಹುದು ಹಾಸಿಗೆ ಅಥವಾ ಮಂಚ ಹಾಳಾಗಿದ್ದಲ್ಲಿ ಅದನ್ನು ಬಳಸಬೇಡಿ ಇದು ದಂಪತಿ ನಡುವೆ ಬಿರುಕು ಮೂಡಿಸಲು ಕಾರಣವಾಗಬಹುದು.

ಮನೆಯಲ್ಲಿ ಪೀಠೋಪಕರಣಗಳು ಅತಿ ಮುಖ್ಯ ವಾಸ್ತು ಪ್ರಕಾರ ಮುರಿದ ಪೀಠೋಪಕರಣಗಳು ಮನೆಯಲ್ಲಿ ಇರಬಾರದು, ವಾಸ್ತು ದೋಷವಾದರೆ ಮನೆಯಲ್ಲಿ ಹಣದ ಕೊರತೆ ಎದುರಾಗುತ್ತದೆ, ಹಾಗಾಗಿ ವಾಸ್ತು ಶಾಸ್ತ್ರದ ಈ ಅಂಶಗಳ ಬಗ್ಗೆ ಗಮನ ಹರಿಸುವುದು ಅತೀ ಮುಖ್ಯ.

Leave a Reply

Your email address will not be published. Required fields are marked *