ಹೌದು ಈ ಮಹಿಳೆ ಕಥೆ ಕೇಳಿದರೆ ಒಂದು ಕ್ಷಣ ಕಣ್ಣಂಚಲ್ಲಿ ನೀರು ಬರುತ್ತದೆ. ಈ ಮಹಿಳೆ ಸಾವಿರಾರು ಕನಸು ಕಟ್ಟಿಕೊಂಡು ಹಸೆಮಣೆ ಏರಿದ್ದಳು. ಆದರೆ ಈ ಮಹಿಳೆಯ ಕನಸು ಮದುವೆಯಾದ 2 ವಾರದಲ್ಲಿ ನುಚ್ಚು ನೂರಾಗಿದೆ. ಆದರೆ ದೃತಿಗೆಡದೆ ಈ ಮಹಿಳೆ ಇಂದು ತಾನು ಅಂದುಕೊಂಡದ್ದನ್ನು ಸಾಧಿಸಿ ಇಡೀ ಯುವ ಜನಾಂಗಕ್ಕೆ ಮಾದರಿಯಾಗಿದ್ದಾಳೆ.

ಇದು 2012ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆ ಇದೆ. ಆನಿವಾಸಿ ಭಾರತೀಯನಾಗಿದ್ದ ಆಕೆಯ ಪತಿ ಮದುವೆಯಾದ 2 ವಾರಗಳಲ್ಲಿಯೇ ಆಕೆಯನ್ನು ತ್ಯಜಿಸಿದ್ದ. ಆತ ನ್ಯೂಜಿಲ್ಯಾಂಡ್‌ನಲ್ಲಿ ಉದ್ಯಮಿಯಾಗಿದ್ದು ಆತನನ್ನು ಹುಡುಕಿಕೊಂಡು ಆಕೆ ಅಲ್ಲಿಗೂ ಹೋದಳು. ಆದರೆ ಪ್ರಯೋಜನವಾಗಲಿಲ್ಲ. ನೂರಾರು ಸಮಸ್ಯೆಗಳೆಲ್ಲವನ್ನು ಎದುರಿಸಿ ಆಕೆ ನ್ಯೂಜಿಲ್ಯಾಂಡ್‌ನಿಂದ ಭಾರತಕ್ಕೆ ವಾಪಸ್ಸಾಗಲು ಸಫಲಳಾದಳು.

ಬಳಿಕ ಆಕೆ ಒಂದು ಸರಕಾರಿ ಶಿಕ್ಷಕಿ ಕೆಲಸವನ್ನು ತೆಗೆದುಕೊಂಡಳು. ತದನಂತರ UPSC ಪರೀಕ್ಷೆಗಾಗಿ ತಯಾರಿಯನ್ನು ಆರಂಭಿಸಿದರು. ಅಂತರ್ಜಾಲ ಅಷ್ಟೇ ಅಲ್ಲ ದಿನಪತ್ರಿಕೆ ಸಹ ಬರದಂತ ಅತಿ ಹಿಂದುಳಿದ ಗ್ರಾಮದಲ್ಲಿ ಅವರ ಪರೀಕ್ಷಾ ತಯಾರಿ ನಡೆದಿತ್ತು. ಆದರೆ ತನ್ನ ಗುರಿಯ ಬೆನ್ನು ಹತ್ತಿದ ಇವರು ಕಠಿಣ ಅಭ್ಯಾಸ ನಡೆಸಿ ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆ ಪಾಸು ಮಾಡಿ ಈಗ IRS ಅಧಿಕಾರಿಯಾಗಿದ್ದಾರೆ.

ಇದಕ್ಕೆ ಹೇಳುವುದು ಕಠಿಣ ಪರಿಶ್ರಮ ಇದ್ದರೆ ಏನಾದರು ಸಾಧಿಸಬಹುದು ಅನ್ನುವುದಕ್ಕೆ ಈ ಕೋಮಲ್ ಅವರ ಸಾಧನೆ ಸ್ಫೂರ್ತಿಯಾಗಿದೆ.

Leave a Reply

Your email address will not be published. Required fields are marked *