ಲಕ್ಷಾಂತರ ಮಂದಿ ಐಟಿ ಉದ್ಯೋಗದ ಕನಸು ಕಾಣುತ್ತಾರೆ.ಆದರೆ ಪ್ರತಿಯೊಬ್ಬರು ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಇಂದಿನ ನಮ್ಮ ಅತಿಥಿ ಪಿ ಮನೋಜ್ ಕುಮಾರ್ ಶರ್ಮ ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಯಶಸ್ಸಿನ ಮಟ್ಟವನ್ನು ತಲುಪಿದ್ದಾರೆ. ಅವರ ಜೀವನದ ಕಥೆ ಯಾರಿಗಾದರೂ ಸ್ಪೂರ್ತಿ ನೀಡುವಂತದ್ದು.ಮನೋಜ್ ಕುಮಾರ್ ಶರ್ಮ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ನಿವಾಸಿ.ಬಾಲ್ಯದಿಂದಲೂ ಅವರು ಓದಿನಲ್ಲಿ ಚುರುಕಾಗಿರಲಿಲ್ಲ. ಬಡ ಕುಟುಂಬ ದಲ್ಲಿ ಬೆಳೆದಿರುವ ಅವರು ಇಂದು ದೇಶದ ಅತ್ಯಂತ ಕಠಿಣ, ಸ್ಪರ್ಧಾತ್ಮಕ ಪರೀಕ್ಷೆಯ ಯುಪಿಎಸ್‌ಸಿಯಲ್ಲಿ ಉತ್ತೀರ್ಣ ರಾಗುವ ಮೂಲಕ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.

ಮನೋಜ್ ಕುಮಾರ್ ಶರ್ಮ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿ ಆಗಿದ್ದರು.ಹಿಂದಿ ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲಿ 12 ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು.ಅವರ ತಂದೆ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೋಜ್ ಕುಮಾರ್ ಶರ್ಮಾ ಅವರ ಮನೆಯ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಅವರಿಗೂ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಇರಲಿಲ್ಲ ಮತ್ತು ಹೇಗಾದರೂ ಮಾಡಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಒಂಬತ್ತು ಮತ್ತು 10 ನೇ ತರಗತಿಯಲ್ಲಿ ಜಸ್ಟ್ ಪಾಸಾಗಿದ್ದರು. ಬಾಲ್ಯದಿಂದಲೂ ಓದಿನ ವೈಫಲ್ಯಗಳನ್ನು ನೋಡಿದ್ದರು.ಇದರ ಹೊರತಾಗಿಯೂ ಮನೋಜ್ ಎಂದಿಗೂ ಛಲ ಬಿಡಲಿಲ್ಲ.

ಮನೋಜ್ ಬಡವರಾದ ಕಾರಣ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಟೆಂಪೋ ಓಡಿಸುತ್ತಿದ್ದರು.ಹಲವು ಬಾರಿ ರಾತ್ರಿ ಭಿಕ್ಷುಕರ ಮಧ್ಯೆ ರಸ್ತೆಯಲ್ಲಿ ಮಲಗುತ್ತಿದ್ದರಂತೆ. ಇನ್ನು ಮನೋಜ್ 12 ನೇ ತರಗತಿಯಲ್ಲಿ ಓದುತ್ತಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದರು.ಹುಡುಗಿಯ ಬಳಿ ಪ್ರೀತಿ ವ್ಯಕ್ತಪಡಿಸಲು ಹಿಂದೇಟು ಹಾಕಿದ್ದರು.ಕೊನೆಗೆ ಪ್ರೀತಿಯನ್ನು ಹೇಳಿಕೊಂಡಾಗ ಶ್ರದ್ಧಾ ಅವರು ಮನೋಜ್ ಬಾಳಿನ ಬೆಳಕಾದರು. ಅವರು ನೀವು ನನ್ನ ಮದುವೆಯಾಗ ಬೇಕೆಂದರೆ ನೀವು IAS ಆಗಲೇ ಬೇಕು ಅಂತ ಹೇಳಿದ್ದರಂತೆ. ಈ ಶರತ್ತಿನ ಮೇಲೆ ಮನೋಜ್ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಈಗ ಅವರ ಪತ್ನಿ ಆಗಿರುವ ಶ್ರದ್ಧಾ ಪರೀಕ್ಷಾ ತಯಾರಿ ಸಮಯದಲ್ಲಿ ಮನೋಜ್ ಅವರಿಗೆ ಸಾಕಷ್ಟು ಸಹಾಯ ಮಾಡಿದ್ದರು.

ಯುಪಿಎಸ್‌ಸಿ ಪರೀಕ್ಷೆಯ ಮೂರು ಪ್ರಯತ್ನಗಳಲ್ಲಿ ಮನೋಜ್ ಕುಮಾರ್ ಶರ್ಮ ವಿಫಲರಾಗಿದ್ದರು.ಶಿಕ್ಷಕರು ಮತ್ತು ಪ್ರಾಂಶುಪಾಲರಿಗಿಂತ ಮೇಲು ಯಾರೋ ಇದ್ದಾರೆ ಎಂದು ಮನೋಜ್ ಕುಮಾರ್ ಶರ್ಮಾಗೆ ಆಗ ಅರಿವಾಯಿತು. ನಂತರ ಅವರು ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಡೆಪ್ಯೂಟಿ ಎಸ್ಪಿ ಆಗಲು ನಿರ್ಧರಿಸಿದರು. 12ನೇ ತೇರ್ಗಡೆಯಾಗಿ ಗ್ವಾಲಿಯರ್ ಗೆ ಬಂದಾಗ ಡಿಎಂ ಎಸ್ ಡಿಎಂಗಿಂತ ಮೇಲಿರುವುದು ಗೊತ್ತಾಯಿತು. ಇದಕ್ಕಾಗಿ ನೀವು UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ಬಂದಿದ್ದರು.ನಂತರ ನಾಲ್ಕನೇ ಪ್ರಯತ್ನದಲ್ಲಿ 121 ನೇ ರ‌್ಯಾಂಕ್ಗಳಿಸಿ ಐಪಿಎಸ್ ಅಧಿಕಾರಿಯಾದರು.

Leave a Reply

Your email address will not be published. Required fields are marked *