ಇನ್ನೇನು ಶಿವರಾತ್ರಿ ಹಬ್ಬ ಬಂದಿದೆ ಇದನ್ನು ನಾವು ಬಹಳ ಅದ್ದೂರಿನಿಂದ ಆಚರಣೆ ಮಾಡುತ್ತೇವೆ ಮಹಾಶಿವರಾತ್ರಿಯು ಶಿವಭಕ್ತರು ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ ಈ ಮಹಾಶಿವರಾತ್ರಿಯ ಶಿವನ ಪ್ರಮುಖ ಉಪವಾಸಗಳಲ್ಲಿ ಒಂದಾಗಿದೆ ಜಾಗರಣೆ ಮಾಡಿ ಉಪವಾಸವಿದ್ದು ಶಿವನ ಕೃಪೆಗೆ ಪಾತ್ರರಾಗುತ್ತಾರೆ ಈ ಮಹಾಶಿವರಾತ್ರಿಯ ದಿನವೇ ಪಾರ್ವತಿ ದೇವಿ ಮತ್ತು ದೇವತೆಗಳು ಶಿವನ ಸ್ಮರಣಾರ್ಥ ಉಪವಾಸದ ವರವನ್ನು ಪಡೆದರು ಎಂದು ಪುರಾಣಗಳು ಹೇಳುತ್ತವೆ ಆದುದರಿಂದ ಈ ದಿನದಂದು ಶಿವನನ್ನು ಮನಪೂರ್ವಕವಾಗಿ ಪೂಜಿಸಿದರೆ ಇವನು ಭಕ್ತರ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಾನೆ ಎಂದು ನಂಬಲಾಗುತ್ತದೆ.

ಅಂತಹ ಮಹಾ ಶಿವರಾತ್ರಿ ಎಂದು ಕೆಲವು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳಿವೆ ಆದರೆ ಅವುಗಳು ಅನೇಕರಿಗೆ ತಿಳಿದಿಲ್ಲ ಇದನ್ನು ತಿಳಿಯದೆ ಮಹಾಶಿವರಾತ್ರಿಯ ದಿನ ಮಾಡುವ ಕೆಲವು ತಪ್ಪುಗಳು ಶಿವನ ಕೋಪಕ್ಕೆ ಗುರಿಯಾಗಬಹುದು ಹಾಗಾದರೆ ಮಹಾಶಿವರಾತ್ರಿಯ ದಿನ ಮಾಡಬೇಕಾದ ಸಂಗತಿಗಳೇನು ಎಂಬುದನ್ನು ನೋಡೋಣ ಬನ್ನಿ. ಮಹಾಶಿವರಾತ್ರಿ ದಿನದಂದು ಮಾಡಬೇಕಾದ ಕೆಲಸಗಳು ಮಹಾಶಿವರಾತ್ರಿಯ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಒಳ್ಳೆಯ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು ಸ್ವಚ್ಛವಾಗಿರಬೇಕು.

ಈ ದಿನ ಭಕ್ತರು ಅಲ್ಪ ಆಹಾರ ಸೇವಿಸುವ ಮೂಲಕ ಉಪವಾಸ ಆಚರಿಸುವ ಇನ್ನೂ ಕೆಲವರು ನೀರು ಕುಡಿಯದೆ ಉಪವಾಸ ಮಾಡುತ್ತಾರೆ ಉಪವಾಸದ ಸಮಯದಲ್ಲಿ ಕೆಲವು ಆಹಾರಗಳನ್ನು ತಿನ್ನಲು ಅನುಮತಿಸಲಾಗಿದೆ ಅದರಲ್ಲಿ ಹಾಲಿನ ಉತ್ಪನ್ನಗಳು ಜೋಳ ಪಾಯಸ ಇತ್ಯಾದಿಗಳನ್ನು ತಿನ್ನಬಹುದು ನೀವು ಹಣ್ಣುಗಳನ್ನು ಸಹ ತಿನ್ನಬಹುದು ಆದರೆ ಇವೆಲ್ಲವನ್ನು ದಿನದಲ್ಲಿ ತಿನ್ನಬಹುದು ಸೂರ್ಯಾಸ್ತದ ನಂತರ ಅಂದರೆ ಜಾಗರಣೆ ಸಮಯದಲ್ಲಿ ಯಾವುದೇ ಆಹಾರವನ್ನು ಸೇವಿಸಬಾರದು ಮಹಾಶಿವರಾತ್ರಿಯ ದಿನದಂದು ಶಿವನನ್ನು ಪೂಜಿಸಲು ಹತ್ತಿರದ ಶಿವ ದೇವಾಲಯಕ್ಕೆ ಭೇಟಿ ನೀಡಿ ಇಲ್ಲವಾದರೆ ಮನೆಯಲ್ಲಿ ಶಿವಲಿಂಗ ವಿದ್ದರೆ ಪೂಜಿಸಬಹುದು.

ಶಿವನು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಇಷ್ಟಪಡುತ್ತಾನೆ ಎಂದು ಹೇಳುತ್ತದೆ ಹಾಗಾಗಿ ಶಿವರಾತ್ರಿಯ ದಿನ ರಾತ್ರಿ ಶಿವಲಿಂಗಕ್ಕೆ ಹಾಲು ಅಥವಾ ಮೊಸರಿನಿಂದ ಅಭಿಷೇಕ ಮಾಡಬೇಕು ಇಷ್ಟೇ ಅಲ್ಲದೆ ಅಭಿಷೇಕವನ್ನು ಜೇನುತುಪ್ಪದಲ್ಲಿ ಮಾಡಬೇಕು. ಮುಖ್ಯವಾಗಿ ಮಹಾಶಿವರಾತ್ರಿಯ ದಿನದಂದು ಉಪವಾಸ ಮಾಡುವವರು ದಿನವಿಡಿ ಶಿವನ ಮಂತ್ರಗಳನ್ನು ಪಠಿಸಬೇಕು ಶಿವ ಮಂತ್ರಗಳಿಗೆ ನಿರ್ದಿಷ್ಟ ಶಕ್ತಿಗಳಿಂದ ಎಂದು ಹೇಳಲಾಗುತ್ತದೆ ಆದ್ದರಿಂದ ಶಿವನ ಮಂತ್ರಗಳನ್ನು ಪಠಿಸಿ ಅತ್ಯಂತ ಶಕ್ತಿಶಾಲಿ ಶಿವ ಮಂತ್ರಗಳಲ್ಲಿ ಒಂದಾದ ಓಂ ನಮಃ ಶಿವಾಯ ಎಂಬ ಮಂತ್ರವನ್ನು ತಪ್ಪದೆ ಪಠೀಸಿ ಹಾಲಿನ ಉತ್ಪನ್ನಗಳು ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳ ಸಿಹಿ ತಿಂಡಿಗಳನ್ನು ಮಾಡಿ ಶಿವನನ್ನು ಪೂಜಿಸುವುದು ಒಳ್ಳೆಯದು ಮುಖ್ಯವಾಗಿ ಮಹಶಿವರಾತ್ರಿ ಎಂದು ಉಪವಾಸ ಮಾಡುವವರು ರಾತ್ರಿ ಜಾಗರಣೆ ಮಾಡಿ ಶಿವನನ್ನು ಪೂಜಿಸಬೇಕು.

Leave a Reply

Your email address will not be published. Required fields are marked *