ಬಡತನದಲ್ಲಿ ಬೆಳೆದು, ಜೀವನೋಪಾಯಕ್ಕಾಗಿ ಬೀಡಿಗಳನ್ನು ಉರುಳಿಸುತ್ತಿದ್ದಾರೆ ಮತ್ತು ಈಗ ಯುನೈಟೆಡ್ ಸ್ಟೇಟ್ಸ್ ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಜೀವನದಲ್ಲಿ ಮುಂದೆ ಬರಲು ಪರಿಶ್ರಮ ಹಾಗೂ ಗುರಿ ಸಾಕು ಎಂತ ವ್ಯಕ್ತಿಗಳು ಕೂಡ ಮುಂದೆ ಬರುತ್ತಾರೆ ಇದರ ಬಗ್ಗೆ ನಮಗೆ ಬಹಳಷ್ಟು ಉದಾಹರಣೆಗಳು ಕೂಡ ನಿಮ್ಮ ಕಣ್ಣ ಮುಂದೆ ಇದೆ ಕೆಲವೊಬ್ಬರು ಕಡುಬಡತನದಿಂದ ಮುಂದೆ ಕೋಟ್ಯಾಧಿಪತಿ ಆಗಿರುವುದನ್ನು ಕೂಡ ನಾವು ನೋಡಿದ್ದೇವೆ. ಅದೇ ರೀತಿ ಇವತ್ತಿನ ಮಾಹಿತಿ ಕೂಡ ನೀವು ಖಂಡಿತ ನಿಮಗೆ ನಿಮ್ಮ ಗುರಿಯನ್ನು ಮುಟ್ಟಲು ಹೊಸ ದಾರಿಯನ್ನು ಕೊಡುತ್ತದೆ.ಸುರೇಂದ್ರನ್ ಕೆ ಪಟೇಲ್ ಅವರ ಜೀವನವು 1970 ರ ದಶಕದ ಹಿಂದಿ ಚಲನಚಿತ್ರ ಸ್ಕ್ರಿಪ್ಟ್‌ಗಿಂತ ಕಡಿಮೆಯಿಲ್ಲ.

ಹೌದು ಇವರ ಬಗ್ಗೆ ಒಂದು ಚಲನಚಿತ್ರವನ್ನು ಮಾಡಿದರೆ ಖಂಡಿತವಾಗಿಯೂ ಒಂದು ಅದ್ಭುತವಾದ ಚಿತ್ರವಾಗುತ್ತದೆ.ಕೇರಳದ ಕಾಸರಗೋಡಿನಲ್ಲಿ ದಿನಗೂಲಿಗಾರರಿಗೆ ಜನಿಸಿದ ಪಟೇಲ್ ಅವರು ಜನವರಿ 1, ಭಾನುವಾರದಂದು ಟೆಕ್ಸಾಸ್‌ನ ಫೋರ್ಟ್ ಬೆಂಡ್ ಕೌಂಟಿಯ 240 ನೇ ನ್ಯಾಯಾಂಗ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಆರ್ಥಿಕ ಸಮಸ್ಯೆಯಿಂದಾಗಿ ಎಳೆ ವಯಸ್ಸಿನಲ್ಲಿ ವಿದ್ಯಾಭ್ಯಾಸ ತೊರೆದು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ಕಾಸರಗೋಡಿನ ಸುರೇಂದ್ರನ್.ಕೆ.ಪಟೀಲ್, ಇದೀಗ ಅಮೆರಿಕದ ಟೆಕ್ಸಾಸ್ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ಸುರೇಂದ್ರನ್ ಕಡು ಬಡತನದಲ್ಲೇ ಬೆಳೆದುಬಂದಿದ್ದು, ಹಣಕ್ಕಾಗಿ ವಿದ್ಯಾಭ್ಯಾಸವನ್ನು ತೊರೆದು ಬೀಡಿ ಕಟ್ಟುವುದು, ಹೌಸ್‌ಕೀಪಿಂಗ್‌ನಂತಹ ದಿನಗೂಲಿ ಕೆಲಸ ಮಾಡುತ್ತಿದ್ದರು. ಹೀಗೆ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ತೊರೆದು ಮಾಡುತ್ತಿದ್ದ ದಿನಗೂಲಿ ಕೆಲಸಗಳು ಜೀವನದ ಬಗ್ಗೆ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿತ್ತು ಎಂದು ಸುರೇಂದ್ರನ್ ಹೇಳಿದ್ದಾರೆ. ತಮ್ಮ ಗ್ರಾಮಸ್ಥರ ಆರ್ಥಿಕ ಸಹಾಯದಿಂದಾಗಿ ಎಲ್‌ಎಲ್‌ಬಿ ಶಿಕ್ಷಣ ಪೂರೈಸಿ, ಜೀವನ ಕಟ್ಟಿಕೊಳ್ಳಲು ಅಮೆರಿಕಕ್ಕೆ ತೆರಳಿದ್ದರು. ಅಲ್ಲೂ ತಮ್ಮ ವಿರುದ್ಧ ನಕಾರಾತ್ಮಕ ಪ್ರಚಾರ ನಡೆದಿದ್ದವು. ಉಚ್ಚಾರಣೆ ಬಗ್ಗೆಯೂ ಜನ ಅಪಹಾಸ್ಯ ಮಾಡುತ್ತಿದ್ದರು.

ನಾನು ಈ ಸ್ಥಾನಕ್ಕೆ ಸ್ಪರ್ಧಿಸುವ ವೇಳೆ ಸ್ವತಃ ನನ್ನ ಪಕ್ಷಕ್ಕೆ ನನ್ನ ಬಗ್ಗೆ ನಂಬಿಕೆಯಿರಲಿಲ್ಲ. ಆದರೆ ಆತ್ಮವಿಶ್ವಾಸ, ಕಠಿಣ ಪರಿಶ್ರಮದಿಂದಾಗಿ ಈ ಸ್ಥಾನಕ್ಕೇರಿದ್ದಾಗಿ ಸುರೇಂದ್ರನ್ ಹೇಳಿದ್ದಾರೆ. ಮನುಷ್ಯ ತನ್ನ ಗುರಿಯನ್ನು ಮುಟ್ಟಲು ಪ್ರಯತ್ನಿಸಿದರೆ ಅವನು ಸತ್ತ ಮೊದಲು ಬರುವಂತಹ ಯಾವುದೇ ಕಷ್ಟಗಳನ್ನು ಕೂಡ ಲೆಕ್ಕಿಸದೆ ಅವನು ಮನುಗುತ್ತಾನೆ. ಇಂಥ ವ್ಯಕ್ತಿಗಳನ್ನು ಕೆಳಗೆ ಇಳಿಸಲು ಎಷ್ಟೋ ಜನ ಬಲಿಯನ್ನು ಬೀಸುತ್ತಿದ್ದಾರೆ ಆದರೆ ಇದರಿಂದ ತಪ್ಪಿಸಿಕೊಳ್ಳುವುದೇ ನಮಗೆ ದೊಡ್ಡ ಕಷ್ಟವಾಗಬಾರದು, ಸಲೀಸಾಗಿ ಹೊರಬಂದು ನಮ್ಮ ಗುರಿಯನ್ನು ನಾವು ಮುಟ್ಟಬೇಕು

Leave a Reply

Your email address will not be published. Required fields are marked *