ಕರ್ನಾಟಕ ರಾಜ್ಯದಾಗೆಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ರೈತರಿಗೆ ಸ್ಪ್ರಿಂಕ್ಲರ್ ಮತ್ತು ಪೈಪ್ ಪಡೆದುಕೊಳ್ಳಲು ರೈತರಿಂದ ಹೊಸ ಅರ್ಜಿಗಳನ್ನು ಕರೆಯಲಾಗಿದೆ ಹಾಗೂ ಜಮೀನುಗಳಲ್ಲಿ ಕೃಷಿ ಹೊಂಡ ಮಾಡಿಕೊಳ್ಳಲು ಕೂಡ ಹೊಸ ಅರ್ಜಿಗಳನ್ನು ಕರೆಯಲಾಗಿದೆ. ರೈತರಿಗೆ ಸಹಾಯಧನ ಮತ್ತು ಸಬ್ಸಿಡಿ ಯೋಜನೆಯನ್ನು ಒಳಗೊಂಡಿರುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ನಿಮ್ಮ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯು ಯಾರಿಗೆಲ್ಲ ಸಿಗುತ್ತೆ? ಅಗತ್ಯವಾದ ದಾಖಲೆಗಳನ್ನು ಯಾವಾಗ ಮತ್ತು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು.ಕೃಷಿ ಪೂರಕ ವಿವಿಧ ಚಟುವಟಿಕೆಗಳಿಗಾಗಿ ರೈತರಿಂದ ಅರ್ಜಿ ಆಹ್ವಾನ 2024 2025 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಇತರೆ ಉಪಚಾರಗಳು ಯೋಜನೆಯಡಿ ಶೇಕಡಾ 50 ರ ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಮತ್ತು ಪಿವಿಸಿ ಪೈಪ್‌ಗಳನ್ನು ಪಡೆಯಲು ಮತ್ತು ನೀರು ಎತ್ತುವ ಸಾಧನವಾದ ಡಿಜಿಟಲ್ ಪೇಮೆಂಟ್ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಸಂಬಂಧಿಸಿದ ಹೋಬಳಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯವಾದ ಉದ್ದೇಶವೇನಂದು ನಾವು ನೋಡುವುದಾದರೆ ಕ್ಷೇತ್ರ ಮಟ್ಟದಲ್ಲಿ ನೀರಾವರಿ ಹೂಡಿಕೆಗಳು ಒಮ್ಮುಖವನ್ನು ಸಾಧಿಸುವುದು ಹೌದು. ಜಮೀನಿನಲ್ಲಿ ನೀರಿನ ಭೌತಿಕ ಪ್ರವೇಶವನ್ನು ಹೆಚ್ಚಿಸಿ ಮತ್ತು ಖಚಿತವಾದ ನೀರಾವರಿಯಡಿಯಲ್ಲಿ ಕೃಷಿ ಪ್ರದೇಶವನ್ನು ವಿಸ್ತರಿಸಿ ಸೂಕ್ತವಾದ ತಂತ್ರಜ್ಞಾನಗಳು ಮತ್ತು ಅಭ್ಯಾಸಗಳ ಮೂಲಕ ನೀರನ್ನ ಉತ್ತಮವಾಗಿ ಬಳಸಿಕೊಳ್ಳಲು ನೀರಿನ ಮೂಲದ ಏಕೀಕರಣ ಮತ್ತು ಅದರ ಸಮರ್ಥ ಬಳಕೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಅವಧಿ ಮತ್ತು ಪ್ರಮಾಣದಲ್ಲಿ ಲಭ್ಯತೆಯನ್ನು ಹೆಚ್ಚಿಸಲು ಜಮೀನಿನಲ್ಲಿ ನೀರಿನ ಬಳಕೆಯಾದ ದಕ್ಷತೆಯನ್ನು ಸುಧಾರಿಸಿ ನಿಖರ ನೀರಾವರಿ ಮತ್ತು ಇತರ ನೀರು ಉಳಿಸುವ ತಂತ್ರಜ್ಞಾನ ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಬೇಕು ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ ಹಾಗೆ ಮಣ್ಣಿನ ಫಲವತ್ತತೆ ಸಂರಕ್ಷಿಸಬೇಕು ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ ಹಾಗಾಗಿ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಕುಟುಂಬ ಹಾಗು ಸ್ನೇಹಿತರೆ ಜೊತೆಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *