ಸಿಲೆಂಡರ್ ಪ್ರತಿಯೊಂದು ಮನೆಗಳಲ್ಲಿ ಬೇಕಾಗುವಂತಹ ಒಂದು ವಸ್ತು ಅಂತಾನೆ ಹೇಳಬಹುದು. ಸಿಲಿಂಡರ್ ಇಲ್ಲ ಅಂದರೆ ಅಡುಗೆನು ಇಲ್ಲ, ಅಡುಗೆ ಇಲ್ಲ ಅಂದ್ರೆ ಊಟನೂ ಕೂಡ ಇಲ್ಲ. ಇಷ್ಟು ದಿನ ಸಿಲಿಂಡರ್ ನ ಬೆಲೆಯನ್ನ ನಾವು 703 ರೂಪಾಯಿಯನ್ನ ನಾವು ಪಾವತಿಸಲಾಗುತ್ತಿದೆ. ಆದರೆ ನಿಜವಾದ ಬೆಲೆ ರೂ.903 ರೂಪಾಯಿಗಳು. ಈಗ ಕೇಂದ್ರ ಸರ್ಕಾರದಿಂದ ಮಾಹಿತಿ ಬಂದಿರುವ ಪ್ರಕಾರ ಸಂಪುಟದ ಸಭೆ ನಡೆದ ನಂತರ 603 ರೂಪಾಯಿಗೆ ಇಳಿಸಲಾಗಿದೆ.

ಹೌದು, ಮೋದಿ ಸರ್ಕಾರವು ಜನತೆಗೆ ಒಳ್ಳೆಯ ಸುದ್ದಿಯನ್ನೇ ಕೊಟ್ಟಿದೆ. 200 ರೂಪಾಯಿಯ ಸಬ್ಸಿಡಿಯನ್ನ ಕೇಂದ್ರ ಸರ್ಕಾರವು ನಿರ್ಧರಿಸಿತ್ತು. ಈಗ ಅದೇ ಸಬ್ಸಿಡಿಯ ಬೆಲೆ 300 ರೂಪಾಯಿಗೆ ಹೆಚ್ಚಳವಾಗಿದೆ. ಅನುರಾಗ್ ಸಿಂಗ್ ಠಾಕೂರ್ ಮತ್ತು ಜೀ ಕಿಶಾನ್ ರೆಡ್ಡಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸಂಪುಟದ ಸಭೆಯ ನಂತರ ಹೇಳಲಾಗಿದೆ. ನಿಜವಾಗಲೂ ಇದು ಜನತೆಗೆ ತುಂಬಾ ಸಹಾಯಕವಾಗಿದೆ ಸಿಲೆಂಡರ್ ಬೆಲೆ ಇಳಿಕೆಯಾಗಿದ್ದು, ಎಷ್ಟೋ ಜನರ ಹೊಟ್ಟೆಗೆ ಅನ್ನದಾನವಾಗಿದೆ.

ಇದು ನಮಗೆ ಡೈರೆಕ್ಟ್ ಬ್ಯಾಂಕ್ ಅಕೌಂಟ್ ಗೆ ಬರೋದಿಲ್ಲ. ಆದರೆ ಇಂಡಿಯನ್ ಆಯಿಲ್ ಮತ್ತೆ ಭಾರತ್ ಪೆಟ್ರೋಲಿಯಂ ಇತರ ಕಾರ್ಪೊರೇಷನ್ ಕಂಪನಿಗಳಿಗೆ ಸಬ್ಸಿಡಿ ಹಣ ದೊರೆಯುತ್ತದೆ. ಕಳೆದ ಎರಡು ತಿಂಗಳಿನಲ್ಲಿ ಎಲ್ಲ ವಸ್ತುವಿನ ಬೆಲೆಯೂ ಕೂಡ ಏರಿಕೆಯಾಗಿತ್ತು ಈಗ ಗ್ಯಾಸ್ ಸಿಲಿಂಡರ್ ನ ಬೆಲೆ ಇಳಿದಿದ್ದು ಮಧ್ಯಮ ಕುಟುಂಬಗಳಿಗೆ ಸಂತಸದ ಸುದ್ದಿಯಾಗಿದೆ ಅಂತಾನೆ ಹೇಳಬಹುದಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಸಹಿತ ಒಳ್ಳೆಯ ದಾರಿಯಾಗಿದೆ ಅಂತಾನೆ ಹೇಳಬಹುದು.

Leave a Reply

Your email address will not be published. Required fields are marked *