ದಾಖಲೆ ಮಟ್ಟದ ಕಚ್ಚಾ ತೈಲದ ಬೆಲೆ. ಜನರಲ್ಲಿ ಮೂಡಿಸಿದೆ ಭೀತಿ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಾ? ತಿಳಿಯೋಣ ಸಂಪೂರ್ಣ ಮಾಹಿತಿ. ನೋಡಿ ಸ್ನೇಹಿತರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ 90 ಡಾಲರ್ ಗಡಿಯನ್ನು ದಾಟಿಬಿಟ್ಟಿದೆ. ಇದು ಜನರಲ್ಲಿ ಆತಂಕವನ್ನು ಮೂಡಿಸಿದೆ. ಅಂತ ಸೇರಿದಂತೆ ಇನ್ನು ಹಲವಾರು ದೇಶಗಳ ಹಣದುಬ್ಬರ ಆಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಸಂಭವ ಕೂಡ ಇದೆ. ಇದರಿಂದ ಜನರಲ್ಲಿ ಸಾಕಷ್ಟು ಭೀತಿಯನ್ನು ಮೂಡಿಸಿದೆ. ಇದು ಚುನಾವಣೆ ವರ್ಷವಾದ ಕಾರಣ ಜನರಲ್ಲಿ ಸ್ವಲ್ಪ ಆಸೆಯನ್ನು ಮೂಡಿಸಿತ್ತು ಪೆಟ್ರೋಲ್ ಡೀಸೆಲ್ ದರ ಇಳಿಕೆ ಆಗಬಹುದು ಎನ್ನುವ ಒಂದು ಆಸೆ ಇತ್ತು. ಇದೀಗ ಆಸೆಗೆ ಮಣ್ಣೆರಚಿದಂತಹ ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏನಿರುವ ಕಾರಣದಿಂದಾಗಿ ಭಾರತ ಹಾಗೂ ಏಷ್ಯಾದ ಕೆಲ ದೇಶಗಳಲ್ಲಿಯೂ ಸಹ ಇದರ ಪರಿಣಾಮ ಉಂಟಾಗಬಹುದು ಎನ್ನುವ ನಿರೀಕ್ಷೆ ಇದೆ.

ಹಾಗಾಗಿ ಜನರಲ್ಲಿ ಇದು ಬಹಳಷ್ಟು ಆತಂಕವನ್ನು ಮೂಡಿಸಿದೆ. ಪೆಟ್ರೋಲ್ ಡೀಸೆಲ್ ಬೆಲೆ ಈಗಾಗಲೇ ಸಾಕಷ್ಟು ಏರಿಕೆಯಾಗಿದ್ದು ಇನ್ನೂ ಏರಿಕೆಯಾಗುವ ಮುನ್ಸೂಚನೆ ಇದೆ. ಮಾರುಕಟ್ಟೆ ತಜ್ಞರ ಪ್ರಕಾರ ಕಚ್ಚಾತೈಲದ ಬೆಲೆಯು ನೂರು ಡಾಲರ್ ಗೆ ಮುಟ್ಟುವ ಸಂಭವವಿದೆ. ಹೀಗಾದರೆ ಇದು ಪೆಟ್ರೋಲ್ ಡೀಸೆಲ್ ದರದ ಮೇಲೆ ಖಂಡಿತವಾಗ್ಲೂ ಪರಿಣಾಮ ಬೀರುತ್ತದೆ. ಭಾರತವು ಕಚ್ಚಾ ತೈಲ ಆ ಮಧ್ಯದಲ್ಲಿ ಜಗತ್ತಿನಲ್ಲಿ ಮೂರನೆಯ ದೇಶವು ಆದ್ದರಿಂದ ಇದರ ಮೇಲು ಕೂಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿಗೆ ಆಗಿದೆ. ಉದಾಹರಣೆಗೆ 10 ಡಾಲರ್ ಏರಿಕೆಯಾಗಲಿ ಭಾರತದಲ್ಲಿ 0.2 ಪ್ರತಿಶತ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಲಿದೆ. ಭಾರತದ ಪೆಟ್ರೋಲ್ ಡೀಸೆಲ್ ಮಾರಾಟ ಕಂಪನಿಗಳು ಬೊಬ್ಬೆ ಹಾಕಿದ್ದವು ಇದು ನಷ್ಟಕ್ಕೆ ಕಾರಣ ಆಗ್ತಿದೆ ಅಂತ ಆದರೆ ಇನ್ನೂ ಹೆಚ್ಚು ಹೆಚ್ಚು ಏರಿಕೆಯಾಗುತ್ತಿರುವ ಬೆಲೆಯನ್ನು ನೋಡಿ ನಿಜವಾಗಲೂ ಕಂಗಿಟ್ಟಿದ್ದಾರೆ.

ಈ ಪ್ರಮಾಣ ಹೆಚ್ಚುತ್ತಾ ಹೋದರೆ ನಷ್ಟದಪ್ರಮಾಣ ಜಾಸ್ತಿಯಾಗುತ್ತದೆ. ಈಗಾಗಲೇ ಡಾಲರ್ ಎದುರು, ರೂಪಾಯಿ ಮೌಲ್ಯ ತುಂಬಾ ಕುಸಿತವನ್ನು ಕಂಡಿದೆ. ಹೀಗೆ ಕಚ್ಚಾ ತೈಲದ ಬೆಲೆ ನಿರಂತರವಾಗಿ ಏರಿಕೆಯಾದಲ್ಲಿ ನಿಜವಾಗಲೂ ರೂಪಾಯಿ ಮೌಲ್ಯವು ನೆಲ ಕಚ್ಚುವುದು ಗ್ಯಾರಂಟಿ. ಏನು ಮಾರುಕಟ್ಟೆಯಲ್ಲಿಯೂ ಸಹ ವಿಪರೀತ ಏರಳಿತ ಕಾಣುತ್ತಿದೆ. ಕಚ್ಚಾ ತೈಲಗಳ ಏರಿಕೆ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯವು ಸಾಕಷ್ಟು ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *