ಯಶಸ್ಸಿನ ಕಥೆಗಳು ನಮಗೆ ಸ್ಪೂರ್ತಿ ನೀಡುತ್ತವೆ ನಿಜ. ಆದರೆ ಸೋಲಿನ ಕಥೆಗಳು, ಸವಾಲುಗಳನ್ನು ಎದುರಿಸಲು ಮತ್ತು ಸೋಲಿನಿಂದ ಹೊರಬರಲು ನಮ್ಮನ್ನು ಸಜ್ಜುಗೊಳಿಸುತ್ತದೆ. 10 ಸಾರಿ ಫೇಲ್ ಆದರೂ ಪ್ರತಿಬಾರಿ ಅದು ನಮ್ಮನ್ನು ಬಲಿಷ್ಠಗೊಳಿಸುತ್ತದೆ. ಈ ಸೋಲು ನಮ್ಮನ್ನು ವಿಜಯದತ್ತ ಕರೆದುಕೊಂಡು ಹೋಗುತ್ತದೆ ಎಂದು ಹೇಳುತ್ತಾರೆ. ಕನ್ನಡದ ಖ್ಯಾತ ಉದ್ಯಮಿ ಸತ್ಯಶಂಕರ್. ಸುಳ್ಯ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ಕೃಷ್ಣ ಭಟ್, ಶಾರದಾ ಭಟ್ ಮಗನಾಗಿ 1964 ರಲ್ಲಿ ಜನಿಸಿದ ಸತ್ಯಶಂಕರ್ ಬಳ್ಳಾರೆಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಅಭ್ಯಾಸ ಮಾಡಿದರು.

ತಂದೆ ಪುರೋಹಿತರ ಕೆಲಸ, ಕಡುಬಡತನ, ಸತ್ಯಶಂಕರ್ ಎಸ್‌ಎಸ್‌ಎಲ್‌ಸಿ ಮುಗಿಸುತ್ತಾರೆ. ಆದರೆ ಕಾಲೇಜು ಸೇರಿಲು ಇವರ ಬಳಿ ದುಡ್ಡಿಲ್ಲ.ಪಿಯುಸಿಯಲ್ಲಿ ಇವರ ಓದು ನಿಲ್ಲಿಸಿದರು. ಡಿಗ್ರಿ ಮಾಡಿದ ಸತ್ಯಶಂಕರ್, ಅಣ್ಣಂದಿರು ನಿರುದ್ಯೋಗಿಗಳಾಗುತ್ತಾರೆ. ಇದನ್ನು ನೋಡಿದ ಕೃಷ್ಣ ಭಟ್ ಸತ್ಯ ಶಂಕರನ್ನು ಕಾಲೇಜಿಗೆ ಸೇರಿಸುವುದಿಲ್ಲ ಕಾರಣ ದುಡ್ಡಿಲ್ಲ ಬೇರೆ ದಾರಿಯಿಲ್ಲದೆ ಸತ್ಯಶಂಕರ್ ಓದು ನಿಲ್ಲಿಸುತ್ತಾರೆ.ಮನೆಯಲ್ಲಿ ದುಡ್ಡಿಲ್ಲ ತನ್ನ ಅಣ್ಣಂದಿರು, ನಿರುದ್ಯೋಗಿಗಳು ಸತ್ಯಶಂಕರ್ ಏನಾದ್ರೂ ಸಾಧನೆ ಮಾಡಬೇಕು ಎನ್ನುವ ಛಲ ವ್ಯಕ್ತಿ ಕಾರಣ ಸರ್ಕಾರದ ಸಬ್ಸಿಡಿ ಯೋಜನೆಯಲ್ಲಿ ₹15,000 ಸಾಲ ಪಡೆದು ಆಟೋ ಖರೀದಿ ಮಾಡುತ್ತಾರೆ. ಸತ್ಯಶಂಕರ್, ಒಂದೂವರೆ ವರ್ಷ ಆಟೋ ಚಾಲನೆ ಮಾಡುತ್ತಾರೆ. ಸ್ವಲ್ಪ ದುಡ್ಡು ಸಂಗ್ರಹ ಮಾಡಿ ಆಟೋ ಮಾಡಿ ಮತ್ತೆ ಸಾಲ ಮಾಡಿ ಅಂಬಾಸಿಡರ್ ಕಾರು ಖರೀದಿ ಮಾಡುತ್ತಾರೆ.

ಅಂಬಾಸಿಡರ್ ಕಾರನ್ನು ಸತ್ಯಶಂಕರ್ ಬಾಡಿಗೆಗೆ ಓಡಿಸಲು ಶುರು ಮಾಡುತ್ತಾರೆ. ಹಗಲು ರಾತ್ರಿ ಬೆವರು ಸುರಿಸಿ ಕಷ್ಟಪಟ್ಟು ಸಂಪಾದನೆ ಮಾಡುತ್ತಾರೆ.ಬಾಡಿಗೆ ಕಾರು ಓಡಿಸಿ ಬಂದ ಹಣದಿಂದ ಆಟೊಮೊಬೈಲ್ ಶಾಪ್ ತೆರೆಯುತ್ತಾರೆ. ಆಟೋಮೊಬೈಲ್ ಶಾಪ್‌ನಲ್ಲಿ ಬಂದ ಹಣದಿಂದ ಸತ್ಯಶಂಕರ್ ತಕ್ಕಮಟ್ಟಿಗೆ ಉಳಿತಾಯ ಮಾಡಿರುತ್ತಾರೆ. 1994 ರಲ್ಲಿ ಉಳಿತಾಯ ಮಾಡಿದ ಹಣದಿಂದ ಫೈನಾನ್ಸ್ ಮಾಡುತ್ತಾರೆ. ಈ ಫೈನಾನ್ಸ್ ನಿಂದ ಸತ್ಯಶಂಕರ್ಗೆ ಒಳ್ಳೆಯ ಲಾಭ ತಂದುಕೊಡುತ್ತೆ. ಈ ಲಾಭದಿಂದ ಸತ್ಯಶಂಕರ್ ಪುತ್ತೂರಿನಲ್ಲಿ ಒಂದು ಮಿನರಲ್ ವಾಟರ್ ಬಾಟಲ್ ಉದ್ಯಮ ಆರಂಭಿಸಿದರು. ಮಿನರಲ್ ವಾಟರ್ ಬಾಟಲ್ ವ್ಯಾಪಾರದಲ್ಲಿ ಸತ್ಯಶಂಕರ್ ಅಂದುಕೊಂಡಿದ್ದಕ್ಕಿಂತ ಹೆಚ್ಚು ಲಾಭ ತಂದುಕೊಡುತ್ತೆ.ಎರಡು ವರ್ಷದ ಬಳಿಕ ತಮ್ಮ ಬುದ್ಧಿವಂತಿಕೆಯಿಂದ ಮಾರುಕಟ್ಟೆಯಲ್ಲಿ ಹೊಸ ರೀತಿಯ ಬಿಂದು ಝೀರೋ ಮಸಾಲೆ ಪಾನೀಯ ಮಾರಾಟ ಶುರು ಮಾಡುತ್ತಾರೆ.

ಬರಿ ಕೋಲಾ, ಪೆಪ್ಸಿ, ಮ್ಯಾಂಗೋ ಡ್ರಿಂಕ್ ಕುಡಿದು ಬೇಸತ್ತಿದ್ದ ಗ್ರಾಹಕರು ಈ ಹೊಸ ರೀತಿಯ ಬಿಂದು ಜೀರಾ ತುಂಬಾ ಇಷ್ಟ ಆಗಲು ಶುರು ಆಗುತ್ತೆ. ನೋಡುತ್ತ ನೋಡುತ್ತ ಈ ಬಿಂದು ಜೀರಾ ಡ್ರಿಂಕ್ಸ್ ಮಾರಾಟ ಗಗನಕ್ಕೆ ಜಿಗಿಯುತ್ತ ಸತ್ಯಶಂಕರ್ ಗ್ರಾಮೀಣ ಕನ್ನಡಿಗರಿಗೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನೀಡಿದ್ದಾರೆ.2000 ಮಂದಿ ಉದ್ಯೋಗ ದಲ್ಲಿದ್ದಾರೆ. 10 ಸಾವಿರಕ್ಕೂ ಅಧಿಕ ಮಂದಿ ಪರೋಕ್ಷ ಉದ್ಯೋಗ ಪಡೆದಿದ್ದಾರೆ. ಶೇಕಡ 60 ರಷ್ಟು ಮಹಿಳೆಯರು ಎಂಬುದು ಇನ್ನೊಂದು ವಿಶೇಷ. ಪುತ್ತೂರಿನ 50 ಎಕರೆಯಲ್ಲಿ ಹಾಗೂ ತೆಲಂಗಾಣದ ಇಪ್ಪತೈದು ಎಕರೆಯಲ್ಲಿ ಬಿಂದು ಫ್ಯಾಕ್ಟರಿ ಇದೆ. ದೇಶದೆಲ್ಲೆಡೆ ಕಂಪನಿ ವಿಸ್ತರಿಸುವ ಗುರಿ ಇದೆ.

Leave a Reply

Your email address will not be published. Required fields are marked *