ಚಿನ್ನ ಬಂಗಾರ ಗೋಲ್ಡ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಭಾರತೀಯ ಮಹಿಳೆಯರಿಗೆ ಪಂಚಪ್ರಾಣ. ನಮ್ಮ ಭಾರತೀಯ ಮಹಿಳೆಯರು ಆಭರಣ ಪ್ರಿಯರು ಇದೇ ಕಾರಣಕ್ಕೆ ಏನೋ ಗೊತ್ತಿಲ್ಲ.ಇತ್ತೀಚೆಗೆ ಎಲೆಕ್ಷನ್ ಘೋಷಣೆಗೂ ಮುನ್ನ ಇರುವ ಚಿನ್ನದ ಬೆಲೆ ದಿಢೀರನೆ ಐದರಿಂದ ಆರು ಸಾವಿರದವರೆಗೆ ಬೆಲೆ ಏರಿಕೆಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಸಭೆ, ಸಮಾರಂಭ, ಸಾಂಸ್ಕೃತಿಕ ಯಾವುದೇ ಆಚರಣೆಗಳು ಹಾಗೂ ಮದುವೆ ಸೇರಿದಂತೆ ಇತರ ಎಲ್ಲ ಫಂಕ್ಷನ್ ಗಳಿಗೂ ಕೂಡ ಅಗತ್ಯವಾಗಿ ಬಂಗಾರವನ್ನ ಬಳಕೆ ಮಾಡುತ್ತಾರೆ.

2024 ರ ಅಂತ್ಯದ ವೇಳೆಗೆ ಚಿನ್ನದ ಬೆಲೆ ಒಂದು ಲಕ್ಷಕ್ಕೆ ಹೋಗುತ್ತದೆ ಎಂದು ಸಾಕಷ್ಟು ವರದಿಗಳು ತಿಳಿಸಿವೆ ಹಾಗು ಎಲೆಕ್ಷನ್ ಮುಗಿದ ಬಳಿಕ ಎಷ್ಟು ದಿನಗಳವರೆಗೆ ಎಷ್ಟು ಚಿನ್ನದ ಬೆಲೆ ಇಳಿಕೆಯಾಗುತ್ತೆ ಎನ್ನುವ ಕುರಿತು ಕೂಡ ಅನೇಕ ಸಂಶೋಧಕರು ಕೂಡ ತಿಳಿಸಿದ್ದಾರೆ. ಬನ್ನಿ, ಇಷ್ಟಕ್ಕೂ ಚಿನ್ನದ ಬೆಲೆ ಎಷ್ಟು ಇಳಿಕೆಯಾಗುತ್ತದೆ ಹಾಗು 2024 ರ ಅಂತ್ಯದ ವೇಳೆಗೆ ಬಂಗಾರದ ಬೆಲೆ ಎಷ್ಟಕ್ಕೆ ಹೋಗಿ ತಲುಪಲಿದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನ ನೋಡೋಣ.ಪ್ರತಿನಿತ್ಯ ಚಿನ್ನ ಬೆಳ್ಳಿಯ ದರ ವಿಪರೀತ ಹೆಚ್ಚಳದಿಂದ ಪ್ರಿಯರಿಗೆ ಬೇಸರ ತರಿಸುತ್ತಿದೆ. 1 ದಿನ ಇಳಿಕೆಯಾದರೆ ಮತ್ತೊಂದು ದಿನ ಅದಕ್ಕಿಂತ ದುಪ್ಪಟ್ಟು ಏರಿಕೆ ಆಗುತ್ತದೆ. ನೆನ್ನೆಷ್ಟೇ ಗೋಲ್ಡ್ ದಾಖಲೆ ಮಟ್ಟದಲ್ಲಿ ಏರಿಕೆ ಆಗಿತ್ತು.

ಈಗಾಗಲೇ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಚಿನ್ನದ ಬೆಲೆ.ಇನ್ಮುಂದೆ ಬಾರಿ ಏರಿಕೆ ಆಗಲಿದೆ ಎಂದು ತಿಳಿದು ಬಂದಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಚಿನ್ನದ ಬೆಲೆ ಏರಿಕೆಯ ಮುನ್ಸೂಚನೆಯನ್ನು ನೀಡಿದೆ. ಅದೇನೇ ಇರಲಿ, ಜಗತ್ತಿನಲ್ಲಿ ಎರಡು ರಾಷ್ಟ್ರಗಳ ನಡುವೆ ಕಲಹ ಹೆಚ್ಚಾದಾಗೆಲ್ಲಾ. ಚಿನ್ನವು ಗರಿಷ್ಠ ಹೊರೆಯನ್ನು ಹೊರಬೇಕಾಗಿ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದಂತೆ ಚಿನ್ನ ಮತ್ತು ಕಚ್ಚಾ ತೈಲದ ಬೆಲೆಗಳು ಏರಲು ಪ್ರಾರಂಭಿಸುತ್ತವೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ ನಾನೂರು ಡಾಲರ್ ದಾಖಲೆಯನ್ನ ದಾಟಿದೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಹೂಡಿಕೆದಾರರು ಚಿನ್ನದ ಕಡೆಗೆ ಮುಖ ಮಾಡಿದ್ದಾರೆ. ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತ ಸ್ವರ್ಗವೆಂದು ಪರಿಗಣಿಸಲಾಗಿದೆ. ಶುಕ್ರವಾರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಶೇಕಡಾ 22 ರಷ್ಟು ಏರಿಕೆಯಾಗಿದ್ದು.ಈ ವಾರ ಚಿನ್ನದ ಬೆಲೆಯಲ್ಲಿ ಶೇಕಡಾ ನಾಲ್ಕು ರಷ್ಟು ಏರಿಕೆಯಾಗಿದೆ. ಭವಿಷ್ಯದಲ್ಲಿ ಚಿನ್ನದ ದರ ಇನ್ನೂ ಹೆಚ್ಚಾಗಲಿದ್ದು, ಅದೇ ರೀತಿ ಬೆಳ್ಳಿಯ ಬೆಲೆ ಕೂಡ ಶೇಕಡಾ ನಾಲ್ಕು ರಷ್ಟು ಏರಿಕೆಯಾಗಿದೆ. 2024 ರಲ್ಲಿ ಚಿನ್ನದ ಬೆಲೆ ಗಗನ ತಲುಪುತ್ತದೆ ಎಂದು ಕೇಡಿಯಾ ಅಡ್ವೈಸರಿ ನಿರ್ದೇಶಕ ಅಜಯ್ ಕೆಡಿಯ ಅವರು ಕೆಲವು ದಿನಗಳ ಹಿಂದೆ ಅಂದಾಜಿಸಿದ್ದರು. ಆದರೆ ಚುನಾವಣೆ ಆದಮೇಲೆ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *