ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ನೋಡಲೇಬಾರದು ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಪದ್ಯಗಳಲ್ಲಿ ಪಾಪ-ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು. ಒಂದು ವೇಳೆ ನೋಡಿದರೆ ಅವರಿಗೆ ನರಕ ಪ್ರಾಪ್ತಿಯಾಗುತ್ತಂತೆ. ಹಾಗಾದ್ರೆ ಆ ಕೆಲಸಗಳು ಯಾವುದು ಅಂತ ಸಂಪೂರ್ಣವಾಗಿ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಹಾಗೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಖಂಡಿತ ಬೇರೆಯವರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

ನಾವು ಹಿಂದಿನ ಜನ್ಮದಲ್ಲಿ ಮಾಡಿರೋ ಕೆಲಸಗಳಿಂದ ಮುಂದಿನ ಜನ್ಮದಲ್ಲಿ ನಮಗೆ ಕೆಟ್ಟದ್ದು ಆಗಬಹುದು ಅಥವಾ ಒಳ್ಳೆಯದ್ದು ಆಗಬಹುದು. ಒಳ್ಳೆಯ ಕೆಲಸ ಮಾಡಿದ್ರೆ ಒಳ್ಳೆಯದ್ದನ್ನೇ ಅನುಭವಿಸುತ್ತೇವೆ. ಇನ್ನೂ ಕೆಟ್ಟ ಕೆಲಸ ಮಾಡಿದ್ರೆ ಖಂಡಿತ ಕೆಟ್ಟದಾಗುತ್ತದೆ. ಹಾಗೂ ನರಕದಲ್ಲೂ ನಮಗೆ ಆತ್ಮ ತೃಪ್ತಿ ಅನ್ನೋದು ಇರೋದಿಲ್ಲ ವಿಷ್ಣುವು ಗರುಡ ಪುರಾಣವನ್ನು ಗರುಡನಿಗೆ ಹೇಳುತ್ತಿರಬೇಕಾದರೆ ಕೆಲವೊಂದು ವಿಚಾರಗಳ ಬಗ್ಗೆ
ಸ್ಪಷ್ಟವಾಗಿ ವಿವರಿಸಲಾಗಿದೆ. ಅದ್ರಲ್ಲೂ ಮಹಿಳೆಯರ ಬಗ್ಗೆ ಕೆಲವೊಂದು ಕೌತುಕದ ಸಂಗತಿಗಳ ಬಗ್ಗೆಯೂ ತಿಳಿಸಲಾಗಿದೆ. ಮಹಿಳೆಯರು ಈ ಎರಡು ಕೆಲಸಗಳನ್ನು ಮಾಡುವಾಗ ಪುರುಷರು ಅಪ್ಪಿ ತಪ್ಪಿಯೂ ನೋಡಬಾರದಂತೆ.

ಒಂದು ಸಾರಿ ತಪ್ಪಿ ನೋಡಿದ್ರು ಕೂಡ ಆತನಿಗೆ ನರಕ ಪ್ರಾಪ್ತಿಯಾಗುವುದನ್ನು ಯಾರಿಂದಲೂ ತಪ್ಪಿಸೋದಕ್ಕೆ ಆಗೋದಿಲ್ವಂತೆ ಮಗುವಿಗೆ ಹಾಲುಣಿಸುವಾಗ ಗರುಡ ಪುರಾಣದ ಪ್ರಕಾರ ಮಹಿಳೆಯರು ಮಗುವಿಗೆ ಹಾಲುಣಿಸುವಾಗ ಪುರುಷರು ನೋಡಬಾರದಂತೆ. ಸಾಮಾನ್ಯವಾಗಿ ಮಗು ಹಾಲು ಕುಡಿಯುವಾಗ ಮುಗ್ಧತೆಯಿಂದಿರುತ್ತೆ ಹಾಗೂ ಹಾಲು ಕುಡಿಯುವುದರಲ್ಲೇ ತಲ್ಲೀನವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದಾದರೂ ಪುರುಷ ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಆತನಿಗೆ ಖಂಡಿತ ಪಾಪ ಪ್ರಾಪ್ತಿಯಾಗುತ್ತದೆ. ಇಂತಹ ನಾಚಿಕೆಯಿಲ್ಲದ ಮನುಷ್ಯನ ನರಕದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನಂತೆ.

ಮಹಿಳೆ ಸ್ನಾನ ಮಾಡುವಾಗ ಗರುಡ ಪುರಾಣದ ಪ್ರಕಾರ ಮಹಿಳೆ ಸ್ನಾನ ಮಾಡುವಾಗ ಪರ ಪುರುಷ ಕೆಟ್ಟ ದೃಷ್ಟಿಯಿಂದ ನೋಡುವುದು ಮಹಾ ಪಾಪ. ಇಂತಹ ಕೆಟ್ಟ ಮನಸ್ಥಿತಿ ಇರುವ ಪುರುಷ ಸತ್ತ ನಂತರ ನೇರವಾಗಿ ನರಕಕ್ಕೆ ಹೋಗುತ್ತಾನಂತೆ. ಇಲ್ಲಿ ಆತನಿಗೆ ಚಿತ್ರ ಹಿಂಸೆಯನ್ನು ನೀಡಲಾಗುತ್ತಂತೆ. ಆದ್ದರಿಂದ ಪುರುಷರು ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ನೋಡಬಾರದು. ಮಹಿಳೆಯರ ಮೇಲೆ ಪುರುಷರು ಗೌರವವನ್ನು ಕಾಪಾಡುವುದು ತುಂಬಾನೇ ಮುಖ್ಯ. ಭೂಮಿ ಮೇಲೆ ನೀವು ಮಾಡುವಂತಹ ಒಳ್ಳೆ ಹಾಗೂ ಕೆಟ್ಟ ಕಾರ್ಯಗಳ ಮೇಲೆ ನಿಮಗೆ ಸ್ವರ್ಗ ಅಥವಾ ನರಕ ಪ್ರಾಪ್ತಿ ಆಗುತ್ತದೆ . ನೀವು ಕೆಟ್ಟ ಕೆಲಸಗಳನ್ನು ಮಾಡಿದರೆ ಖಂಡಿತ ನಿಮಗೆ ನರಕ ಪ್ರಾಪ್ತಿಯಾಗುತ್ತದೆ. ಹಾಗಾಗಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಬೇರೆಯವರಿಗೆ ಸಹಾಯ ಮಾಡಿ.

Leave a Reply

Your email address will not be published. Required fields are marked *