ಈಗಿನ ಕಾಲದಲ್ಲಿ ವೈದ್ಯರು ಅಂದರೇನೇ ತುಂಬಾ ಭಯ ಆಗುತ್ತದೆ ಕಾಯಿಲೆಗಿಂತ ವೈದ್ಯರ ಕಂದರೆ ಆಗುವ ಭಯ ಹೆಚ್ಚು ಯಾಕೆಂದರೆ ವೈದ್ಯರು ದುಡ್ಡು ಕೀಳುವ ನೆಪದಲ್ಲಿ ಏನನ್ನು ಸಹ ಮಾಡಿ ಯಾರು ಎನ್ನುವ ಆತಂಕ ಪ್ರತಿಯೊಬ್ಬರಲ್ಲೂ ಕಾಡುತ್ತದೆ. ರೋಗಿ ಸತ್ತರೂ ಪರವಾಗಿಲ್ಲ ಆದರೆ ವೈದ್ಯರಿಗೆ ಹಣ ಬೇಕು ಈ ರೀತಿ ಇದೆ ಇವತ್ತಿನ ಸ್ಥಿತಿ.

ಆದರೆ ಇಲ್ಲೊಬ್ಬ ವೈದ್ಯರು ತಪ್ಪಿ ಹುಟ್ಟಿರುವವರು . ಏಕೆಂದರೆ ಇವರು ಜನಸೇವೆ ಎಂದೇ ತಮ್ಮ ಜೀವನವನ್ನು ಇಟ್ಟಿದ್ದಾರೆ ಇನ್ನೊಬ್ಬ ವೈದ್ಯ ದಂಪತಿಗಳು ಬರೀ ಎರಡು ರೂಪಾಯಿಗೆ ವೈದ್ಯಕೀಯ ಚಿಕಿತ್ಸೆಯನ್ನು ಕೊಡುತ್ತಿದ್ದಾರೆ. ಆದರೆ ಈ ವೈದ್ಯಕೀಯ ದಂಪತಿಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಈ ಲೇಖನವನ್ನ ಪೂರ್ತಿಯಾಗಿ ಓದಿ ನಿಮಗೆ ಇದು ಸ್ಪೂರ್ತಿಯಾಗಬಹುದು.

ರವೀಂದ್ರ ಕೊಹ್ಲೆ ಮತ್ತು ಸ್ಮಿತಾ ದಂಪತಿಗಳು ಇವರು. ಮಹಾರಾಷ್ಟ್ರದವರು ಬಡವರ ಆರೋಗ್ಯ ಸೇವೆಗಾಗಿ ಶ್ರಮಿಸುತ್ತಿದ್ದಾರೆ ಬುಡಕಟ್ಟು ಜನಾಂಗದವರಿಗೆ ಹಾಗೂ ಬಡವರಿಗೆ ಬಡವರ ಮಕ್ಕಳಿಗೆ ಬರೀ ಎರಡು ರೂಪಾಯಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಬಡವರನ್ನು ಕಂಡರೆ ತುಂಬಾ ಕಳಕಳಿ ಇವರಿಗೆ. ಬುಡಕಟ್ಟು ಜನಾಂಗದವರನ್ನು ಕಂಡರೆ ಇವರಿಗೆ ಅಪಾರವಾದ ಪ್ರೀತಿ.

ಈ ಜನಾಂಗದವರಿಗೆ ಪೌಷ್ಟಿಕಾಂಶ ಸಿಗೋದಿಲ್ಲ ಪೌಷ್ಟಿಕಾಂಶಯುಕ್ತ ಆಹಾರವು ಇವರಿಗೆ ಬೇಕು ಇದೇ ಸಮಸ್ಯೆ ಅವರನ್ನು ಕಾಡುತ್ತೆ ಆದ್ದರಿಂದ ಸರ್ಕಾರವು ಇದಕ್ಕೆ ಕೈಜೋಡಿಸಿ ಬೇಕು ಎನ್ನುವುದು ಇವರ ಉದ್ದೇಶ. ಮಹಾರಾಷ್ಟ್ರದಲ್ಲಿ ಮೇಲ್ ಘಾಟ್ ಎನ್ನುವ ಒಂದು ಪ್ರದೇಶವಿದೆ. ಪ್ರದೇಶದಲ್ಲಿ ಎಲ್ಲ ಮಕ್ಕಳು ಕೂಡ ಬೇಗ ಸಾವನ್ನಪ್ಪುತ್ತಾರೆ ಏಕೆಂದರೆ ಅವರಿಗೆ ಪೌಷ್ಟಿಕಾಂಶದ ಕೊರತೆ ಕಾಡುತ್ತದೆ. ಆದರೆ ಸರ್ಕಾರ ಇನ್ನು ಏನು ಕೂಡ ಎಚ್ಚೆತ್ತುಕೊಳ್ಳುತ್ತಿಲ್ಲ.

ಹೇಳಬೇಕೆಂದರೆ ಭಾರತದಲ್ಲಿ ಹುಟ್ಟುವಂತಹ ಮಕ್ಕಳಿಗೆ ಅಪೌಷ್ಟಿಕತೆ ಕಾಡುತ್ತದೆ ಇನ್ನು ಈ ಮಹಾರಾಷ್ಟ್ರದ ಮೇಲ್ಗಾಟ ಪ್ರದೇಶದಲ್ಲಿ ಅಂತೂ ನಿಜವಾಗಲೂ ಮಕ್ಕಳು ತುಂಬಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಅಂತ ಹೇಳಬಹುದು. ಆದ್ದರಿಂದ ಈ ದಂಪತಿಗಳು ಈ ದಂಪತಿಗಳು ಬಡ ಜನರಿಗೆ ಹಾಗೂ ಬುಡಕಟ್ಟು ಜನಾಂಗದವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರವು ಎಚ್ಚೆತ್ತು ಇವರ ಜೊತೆ ಕೈಜೋಡಿಸಬೇಕಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *