ಹಿರಿಯರು ಬೆಳೆಸಿದ ಆಲದಮರಕ್ಕೆ ನೇ-ಣು ಹಾಕೊಳ್ಳೋಕೆ ಆಗುತ್ತಾ.. ಎನ್ನುವ ಮಾತಿದೆ ಆದರೆ ಇಲ್ಲಿ ಒಬ್ಬ ಅದರಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ ಇವನ ಹಿರಿಯರು ಇಲ್ಲೇ ಹುಟ್ಟಿದ್ದಾರಂತೆ ಇದೇ ಕಾರಣಕ್ಕೆ ನಾನು ಇಲ್ಲೇ ಸಾಯ್ತಿನಿ ಎಂದು ಒಬ್ಬನೇ ಬದುಕುತ್ತಿದ್ದಾನೆ. ನಂಬುವುದಕ್ಕೆ ಕಷ್ಟ ಅನಿಸಿದರೂ ಆದರೆ ಇದು ಸತ್ಯ. ಇದು ನಡೆದಿರುವುದು ತಮಿಳುನಾಡಿನಲ್ಲಿ .ಗ್ರಾಮದ ಹೆಸರು ಮೀನಾಕ್ಷಿಪುರಂ. ತಮಿಳುನಾಡಿನ ಟ್ಯುಟಿಕೋರಿನ್ ಜಿಲ್ಲೆಯ ಮೀನಾಕ್ಷಿಪುರಂ ಎಂಬ ಬಂಜರು ಗ್ರಾಮದಲ್ಲಿ ಎಲ್ಲೂ ಮನೆಗಳಿಲ್ಲ. ನೀರಿಲ್ಲದೆ ಭೂಮಿ ಬಂಜರು ಬಿದ್ದಿದೆ. ಜನಸಂಚಾರವೂ ಇಲ್ಲದ, ನಕ್ಷೆಯಿಂದ ಅಳಿಸಿ ಹೋಗುತ್ತಿರುವ ಈ ಗ್ರಾಮದಲ್ಲಿ ಸದ್ಯ ಏಕೈಕ ವ್ಯಕ್ತಿ ವಾಸವಾಗಿದ್ದಾರೆ. ಇವರ ಹೆಸರು ಕಂದಸ್ವಾಮಿ ಅಂದಹಾಗೆ ಈ ಗ್ರಾಮದ ಸ್ಥಿತಿ ಒಂದು ಕಾಲದಲ್ಲಿ ಹೀಗಿರಲಿಲ್ಲ. ಇಲ್ಲಿ 2001 ಜನಗಣತಿ ಪ್ರಕಾರ 1269 ಕುಟುಂಬಗಳು ಇಲ್ಲಿ ವಾಸವಾಗಿದ್ದವು. ಕೃಷಿ ಚಟುವಟಿಕೆಗಳು ಈ ಗ್ರಾಮದಲ್ಲಿ ನಡೆಯುತ್ತಿದ್ದವು. ಆದರೆ ಬರಬರುತ್ತಾ ನೀರಿಗಾಗಿ ಜನರು ಪರದಾಟ ನಡೆಸಬೇಕಾಯಿತು.

ಮಳೆಯ ಕೊರತೆ, ನೀರಿನ ಅಭಾವದ ಕಾರಣ ಕಂಗಾಲಾದ ಜನರು ಗ್ರಾಮವನ್ನು ತೊರೆಯಲು ಶುರುಮಾಡಿದರು. ದಿನ ಬಳಕೆಯ ನೀರಿಗಾಗಿ ನಿತ್ಯ ಐದಾರು ಕಿಲೋ ಮೀಟರ್ ದೂರ ನಡೆಯಬೇಕಾದ ಸ್ಥಿತಿ ಗ್ರಾಮದಲ್ಲಿತ್ತು. ಸಾರ್ವಜನಿಕ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಜನರು ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇತ್ತು. ಇಂತಹ ಭೀಕರ ಸ್ಥಿತಿಯಿಂದ ಕಂಗಾಲಾದ ಗ್ರಾಮಸ್ಥರು ಮಿನಾಕ್ಷಿಪುರಂ ಎಂಬ ತಮ್ಮ ಗ್ರಾಮದಿಂದ ಬೇರೆ ಕಡೆಗೆ ವಲಸೆ ಹೋಗಲು ಶುರುಮಾಡಿದರು.

2015 ದ ವರೆಗೆ ಐದು ಕುಟುಂಬಗಳು ಉಳಿದುಕೊಂಡಿದ್ದರು. ಆದರೆ ಕೊನೆಗೆ ಅವರು ಕೂಡಾ ಈ ಗ್ರಾಮವನ್ನು ತೊರೆದರು. ಆದರೆ ಗಟ್ಟಿಗ ವ್ಯಕ್ತಿ ಕಂದ ಸ್ವಾಮಿ ಮಾತ್ರ ಈ ಗ್ರಾಮವನ್ನು ತೊರೆಯಲಿಲ್ಲ. ಇವರ ಪತ್ನಿ ಮೃತಪಟ್ಟ ಬಳಿಕ ಮಕ್ಕಳು ಗ್ರಾಮವನ್ನು ತೊರೆದು ದೂರವಾದರು. ಅಲ್ಲಿಗೆ ಬರುವಂತೆ ಮಕ್ಕಳು ಕೇಳಿಕೊಂಡರು ಕಂದಸ್ವಾಮಿ ಮಾತ್ರ ಒಪ್ಪಲು ತಯಾರಿಲ್ಲ.

ಯಾರು ಈ ಗ್ರಾಮ ತೊರೆದರು ನಾನು ತೊರೆಯಲ್ಲ ಎಂಬ ಹಠಕ್ಕೆ ಬಿದ್ದಿರುವ ಕಂದಸ್ವಾಮಿ 70 ವರ್ಷ ಆದರೂ ಇಲ್ಲೇ ವಾಸವಾಗಿದ್ದಾರೆ. 10 ದಿನಕ್ಕೊಮ್ಮೆ ಬರುವ ನೀರನ್ನು ಸಂಗ್ರಹಿಸಿಕೊಂಡು ತಿಂಗಳಿಗೊಮ್ಮೆ ಪಕ್ಕದ ಪೇಟೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಹೀಗೆ ಜನವಸತಿ ಇಲ್ಲದ ಗ್ರಾಮದಲ್ಲಿ ಏಕಾಂಗಿ ಜೀವನ ನಡೆಸುತ್ತಿರುವ ಕಂದಸ್ವಾಮಿ ಪ್ರತೀ ಚುನಾವಣೆಯಲ್ಲಿ ತಪ್ಪದೆ ಮತಚಲಾಯಿಸುತ್ತಾರೆ. ಯಾವುದೇ ಕಾರಣಕ್ಕಾಗಿ ಈ ಗ್ರಾಮವನ್ನು ತೊರೆಯಲ್ಲ. ನನ್ನ ಪೂರ್ವಜರು ನೆಲೆಸಿದರುವ ಈ ಗ್ರಾಮದಲ್ಲಿ ಮರಣ ಹೊಂದಿದರೆ ಇಲ್ಲೇ ಮಣ್ಣಾಗುತ್ತೇನೆ ಎಂಬುವುದು ಕಂದಸ್ವಾಮಿ ವಾದವಾಗಿದೆ. ಈ ಊರಿನಲ್ಲಿ ಹತ್ತು ದಿನಕೊಮ್ಮೆ ನೀರನ್ನು ಬಿಡುತ್ತಾರೆ. ಅದು ಇವನೊಬ್ಬನಿಗೆ ಮಾತ್ರ ತಿಂಗಳಿಗೆ ಒಮ್ಮೆ ಮನೆಗೆ ಬೇಕಾಗಿರುವಂತ ಸಾಮಗ್ರಿಗಳನ್ನು ತಂದು ಜೀವನ ನಡೆಸುತ್ತಾರೆ ಈ ಕಂದ ಸ್ವಾಮಿ ದಂಪತಿಗಳು ವಿಚಿತ್ರವೇನೆಂದರೆ ಇವರು ಮಾತ್ರ ಇಲ್ಲಿ ವೋಟಿಂಗ್ ಸಿಸ್ಟಮ್ ನಡೆಯುತ್ತದೆ.

Leave a Reply

Your email address will not be published. Required fields are marked *