ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿ ಮನೆಗಳಲ್ಲಿಯೂ ಕೂಡ ಪೂಜೆ ಮಾಡುವಾಗ ಗಂಟೆ ನಾದವನ್ನು ಮಾಡುತ್ತೇವೆ. ಹಿಂದುಗಳಿಗೆ ಗೊತ್ತಿದೆ. ಇವರ ಮನೆಯಲ್ಲಿ ಕೂಡ ಪೂಜಾ ಸಾಮಗ್ರಿಯಾಗಿ ಗಂಟೆ ಇದ್ದೇ ಇರುತ್ತದೆ. ಈ ಗಂಟೆ ಬಾರಿಸುವುದರ ಕುರಿತು ಶಾಸ್ತ್ರಗಳು ಹಾಗೂ ವೈಜ್ಞಾನಿಕ ಕಾರಣಗಳು ಅನೇಕ ವಿಷಯಗಳನ್ನು ತಿಳಿಸುತ್ತವೆ. ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಪಾಲನೆ ಮಾಡುವುದರಿಂದ ದೇವರ ಅನುಗ್ರಹ ಸಿಗುವುದರ ಜೊತೆಗೆ ನಮಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಕೂಡ ವೃದ್ಧಿಸುತ್ತದೆ. ಇದೇ ಕಾರಣಕ್ಕಾಗಿ ಮನೆಯಲ್ಲಿ ದೇವರ ಪೂಜೆಯನ್ನು ಮಾಡುವಾಗ ಗಂಟೆ ಬಾರಿಸುವಂತಹ ಹಿಂದಿನ ಮರ್ಮವನ್ನು ತಿಳಿಯೋಣ.

ಮನೆಯಲ್ಲಿ ಗಂಟನಾದ ಮಾಡದೇ ಪೂಜೆಯನ್ನು ಮಾಡಿದರೆ ಪೂರ್ತಿ ಆಗುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಾಗಿ ಮಾಡಿದ ಪೂಜೆ ಸಾರ್ಥಕ ಆಗ ಬೇಕು ಎಂದರೆ ಗಂಟಾ ನಾದವನ್ನ ಮಾಡಲೇಬೇಕು. ಇನ್ನು ದೇವರಿಗೆ ದೀಪ ಹಚ್ಚುವಾಗ ಧೂಪವನ್ನು ಬೆಳಗುವಾಗ ಗಂಟೆಯ ನಾದವನು ಮಾಡಬೇಕು. ಮನೆಗಳಲ್ಲಿ ಬಳಸುವಂತಹ ಗಂಟೆಯ ಎತ್ತರವು ಐದು ಇಂಚು ಇದ್ದರೆ ಉತ್ತಮವೆಂದು ಹೇಳಲಾಗುತ್ತದೆ. ಐದು ಇಂಚಿಗಿಂತ ದೊಡ್ಡ ಗಂಟೆಯನ್ನು ಕೂಡ ಬಳಸಬಹುದು. ಅದಕ್ಕಿಂತ ಕಡಿಮೆ ಗಾತ್ರದ ಗಂಟೆಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ನಂದೀಶ್ವರ ಆಂಜನೇಯ ಶಂಕ ಚಕ್ರ ಹಾಗು ನಾಗರ ಇರುವಂತಹ ಗಂಟೆಗಳನ್ನ ಬಳಸುತ್ತಾರೆ. ಇವುಗಳನ್ನು ಬಳಸಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಇನ್ನು ಗಂಟೆನಾದವನ್ನು ಮಾಡುವುದರಿಂದ ಮನೆಯಲ್ಲಿ ರುವಂತಹ ನಕಾರಾತ್ಮಕ ಶಕ್ತಿ ಗಳನ್ನು ಹೊಡೆದೋಡಿ ಸಲು ಹಾಗು ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುವಂತೆ ನೋಡಿಕೊಳ್ಳಲು ಸಹಾಯವನ್ನು ಮಾಡುತ್ತದೆ. ಮನೆಯ ಮೂಲೆ ಮೂಲೆಗಳಲ್ಲಿ ನಾದವನು ಮಾಡಬೇಕು ಎಂದು ಹೇಳಲಾಗುತ್ತದೆ. ನೀವು ಮನೆಗಳಲ್ಲಿ ಬೆಳಗ್ಗೆ ಸಮಯ ಗಂಡು ಮಕ್ಕಳು ಸಂಜೆ ಸಮಯ ಹೆಣ್ಣು ಮಕ್ಕಳು ದೀಪವನ್ನು ಹಚ್ಚ ಬೇಕು ಎಂದು ಶಾಸ್ತ್ರ ಗಳು ಹೇಳುತ್ತದೆ. ಈ ನಿಯಮವನ್ನು ಪಾಲಿಸುವುದರಿಂದ ಮನೆಯಲ್ಲಿ ಧನ ವೃದ್ಧಿ ಆಗುತ್ತದೆ. ಹಾಗೆ ಆ ಸಮಯದಲ್ಲಿ ಗಂಟೆನಾದವನು ಮಾಡಿಸಬೇಕು ಇದರಿಂದ ಸಕಾರಾತ್ಮಕ ವಾದ ವಾತಾವರಣ ಮನೆಯಲ್ಲಿ ಸೃಷ್ಟಿಯಾಗುತ್ತದೆ. ಮನೆಯಲ್ಲಿ ಪೂಜೆ ಮಾಡುವ ವೇಳೆ ಗಂಟೆಯ ಶಬ್ದ ಓಂಕಾರ ನಾದಕ್ಕೆ ಸಮವಾಗಿರುತ್ತದೆ. ಹಾಗಾಗಿ ನೀವು ಓಂಕಾರ ಪಠಣ ಮಾಡಿದಷ್ಟೇ ಫಲವನ್ನು ಈ ಗಂಟೆನಾದ ನೀಡುತ್ತದೆ.

ಇನ್ನು ಪುರಾಣಗಳ ಪ್ರಕಾರವಾಗಿ ಪೂಜೆ ಮಾಡುವಾಗ ಗಂಟೆ ಶಬ್ದವನ್ನು ಮಾಡುವುದು ದೇವರನ್ನ ಎಚ್ಚರ ಗೊಳಿಸುವುದಕ್ಕೆ ಮತ್ತು ದೇವರ ಎದುರಿಗೆ ನಿಂತಿರುವ ವ್ಯಕ್ತಿಯನ್ನು ಪೂಜೆಯತ್ತ ಗಮನ ಹರಿಸಲು ಸಹಾಯವನ್ನು ಮಾಡುತ್ತದೆ ಎಂದು ಹೇಳಲಾಗುತ್ತೆ. ಹಾಗಾಗಿ ಪ್ರತಿದಿನವು ಪೂಜೆ ಮಾಡುವಾಗ ತಪ್ಪದೆ ಗಂಟೆ ನಾದವನು ಗಂಡು ಮಕ್ಕಳು ಮಾಡಬೇಕು.ಇನ್ನು ಗಂಟೆಯ ಶಬ್ದದಾಗ ಮೂಡುವಂತಹ ಕಂಪನದಿಂದ ಆ ಪರಿಸರದಲ್ಲಿ ಇರುವಂತಹ ವೈರಸ್ ಬ್ಯಾಕ್ಟೀರಿಯಾ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತ ವೆ ಎಂದು ಹೇಳುತ್ತದೆ. ಆದ್ದರಿಂದಲ್ಲಿ ಗಂಟೆ ಶಬ್ದ ಮಾಡುವ ದೇವಸ್ಥಾನದ ವಾತಾವರಣದಲ್ಲಿ ಸಕಾರಾತ್ಮಕವಾದ ವಾತಾವರಣದಿಂದ ಕೂಡಿರುತ್ತದೆ.

Leave a Reply

Your email address will not be published. Required fields are marked *