ಹೆಣ್ಣು ಮಕ್ಕಳಿಗೆ ಉಪಯುಕ್ತ ವಾಗುವಂತಹ ಕೆಲವು ಅಡುಗೆ ಮನೆಯ ಸಲಹೆಗಳನ್ನ ತಿಳಿಯೋಣ. ಸ್ನೇಹಿತರೆ ಹೆಣ್ಣು ಅಂದರೆ ಅಡಿಗೆಯನ್ನು ಮಾಡಲೇಬೇಕು. ಜೊತೆಗೆ ಅಡಿಗೆ ಮನೆಯ ಕೆಲಸವನ್ನು ಸಹ ಮಾಡಬೇಕು. ಹೆಣ್ಣಿಗೆ ಮನೆಯ ಕೆಲಸ ಸಾಕಷ್ಟು ಇರುತ್ತದೆ. ಬರಿ ಅಡುಗೆಯನ್ನು ಮಾಡಿದ್ದರೆ ಸಾಕ? ಪಾತ್ರೆ ತೊಳೆಯುವುದು ನೆಲ ಒರೆಸುವುದು ಕಿಚನ್ ಕ್ಲೀನಿಂಗ್ ಹೀಗೆ ಹಲವಾರು ಕೆಲಸಗಳು ಇರುತ್ತವೆ. ನಾವು ಇವತ್ತಿನ ಲೇಖನದಲ್ಲಿ ಅಡುಗೆ ಮಾಡುವಾಗ ಹೆಣ್ಣು ಮಕ್ಕಳಿಗೆ ಸುಲಭವಾಗಿ ಅಂತ ಕೆಲವು ಸಲಹೆಗಳನ್ನ ನೀಡುತ್ತೇವೆ ಅದು ಏನು ಅಂತ ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಅದರಲ್ಲೂ ಉದ್ಯೋಗ ಮಾಡುವಂತ ಮಹಿಳೆಯರಿಗೆ ಸಮಯನೇ ಸಿಗೋದಿಲ್ಲ. ಎಲ್ಲರಿಗೂ ಉಪಯುಕ್ತ ವಾಗುವಂತಹ ಒಂದು ಅಡಿಗೆ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ. ನೋಡಿ ಸ್ನೇಹಿತರೆ ನೀವು ತರಕಾರಿ ಬೇಯಿಸುವಾಗ ಒಂದು ಚಿಟಿಕೆ ಅಡಿಗೆ ಸೋಡವನ್ನು ಹಾಕಿ ನೋಡಿ ತರಕಾರಿಯ ಬಣ್ಣ ಬದಲಾಗುವುದಿಲ್ಲ. ನೀವು ಹೇಗೆ ಬೇಯಿಸಲು ಇಟ್ಟಿದ್ದೀರಾ ಹಾಗೆ ಇರುತ್ತಿದ್ದೆ ಬೆಂದ ಮೇಲೆ ಸಹ ಅದು ಹಾಗೆ ಇರುತ್ತದೆ. ಅದರ ಬಣ್ಣ ಕೊಂಚವೂ ಕೂಡ ಬದಲಾಗುವುದಿಲ್ಲ.

ಮತ್ತೆ ಏನಂದ್ರೆ ನೀವು ರಾತ್ರಿ ಹಾಲನ್ನ ಹೆಪ್ಪು ಹಾಕುವಾಗ ಮಣ್ಣಿನ ಮಡಿಕೆಯಲ್ಲಿ ಹೆಪ್ಪು ಹಾಕಿದರೆ ಆ ಮೊಸರು ಮಧ್ಯಾಹ್ನದವರೆಗೆ ಹೊರಗೆ ಇದ್ದರೂ ಕೂಡ ಅದು ಹುಳಿಯಾಗುವುದಿಲ್ಲ. ಹಾಗೂ ಒಂದೆರಡು ದಿನದವರೆಗೆ ಅದು ಹಾಳು ಕೂಡ ಆಗೋದಿಲ್ಲ. ಚಪಾತಿ ಸಾಫ್ಟ್ ಆಗಿ ಬರಬೇಕು ಅಂದ್ರೆ ಚಪಾತಿ ತುಂಬಾ ಮೃದುವಾಗಿ ಇರಬೇಕು ಅಂದ್ರೆ ಚಪಾತಿ ಕಲಸುವಾಗ ಬಿಸಿ ನೀರು ಹಾಗೂ ಸ್ವಲ್ಪ ಒಂದೆರಡು ಚಮಚ ಬಿಸಿ ಎಣ್ಣೆಯನ್ನು ಹಾಕಿ. ಚಪಾತಿಯು ನೋಡಲು ಸ್ಪಾಂಜ್ ತರ ಆಗಿ ತುಂಬಾ ಮೃದುವಾಗಿ ಆಗುತ್ತದೆ. ಕುಕ್ಕರಿನ ತಳದಲ್ಲಿ ನೀವು ಕುಕ್ಕರನ್ನು ಇಡುವಾಗ ಮೊದಲು ಕುಕ್ಕರ್ ನ ತಳದಲ್ಲಿ ನಿಂಬೆಹಣ್ಣಿನ ಚೂರನ್ನು ನೀವು ಹಾಕಿದ್ದರೆ ಕುಕ್ಕರ್ ಕೆಳಗಡೆ ಕಪ್ಪು ಆಗುವುದಿಲ್ಲ. ನಿಮಗೆ ತೊಳೆಯಲು ಕೂಡ ಸುಲಭವಾಗುತ್ತದೆ. ಹಾಗೆಯೇ ಸಕ್ಕರೆ ಡಬ್ಬಕ್ಕೆ ಇರುವೆ ಬರಬಾರದು ಅಂದರೆ ಸಕ್ಕರೆ ಡಬ್ಬದಲ್ಲಿ ಎರಡು ಲವಂಗವನ್ನು ಇಟ್ಟು ನೋಡಿ ಇರುವೆಗಳು ಆಸು ಪಾಸು ಕೂಡ ಸುಳಿಯುವುದಿಲ್ಲ.

ಬೇಳೆ ಬೇಗ ಬೇಯಬೇಕು ಎಂದಾದರೆ ಬೆಳೆಯನ್ನು ಇಡುವಾಗ ನೀವು ಸ್ವಲ್ಪ ಅರಿಶಿನ ಒಂದು ಚಮಚ ಎಣ್ಣೆಯನ್ನು ಹಾಕಿ ಬೇಳೆಯು ತುಂಬಾ ಚೆನ್ನಾಗಿ ಮೃದುವಾಗಿ ಬೇಯುತ್ತದೆ. ಹಾಗೆಯೇ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೀವು ಎಸೆಯುವ ಬದಲು ಅದನ್ನು ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಿ. ಅದನ್ನು ಚಹಾ ಜೊತೆಗೆ ಸ್ವಲ್ಪ ಹಾಕಿದರೆ ಚಹಾದ ರುಚಿ ಅತ್ಯದ್ಭುತವಾಗಿರುತ್ತದೆ.ನಾವು ಕಾಳುಗಳನ್ನ ಬೇಯಿಸಲು ಇಟ್ಟಾಗ ಅದು ಸರಿಯಾಗಿ ಬೇಯುವುದಿಲ್ಲ ಆದ್ದರಿಂದ ನಾವು ಕಾಳುಗಳನ್ನು ಬೇಯಿಸುವಾಗ ಮೊದಲು ಉಪ್ಪನ್ನು ಹಾಕಬಾರದು. ಮೀಡಿಯಂ ಫ್ಲೇಮ್ ನಲ್ಲಿ ಬೇಯಿಸಿ ನಂತರ ಅದರ ಬಾಜಿ ಮಾಡುವಾಗ ಉಪ್ಪನ್ನು ಹಾಕಬೇಕು.

ಈ ರೀತಿ ಮಾಡುವುದರಿಂದ ಕಾಳುಗಳು ಮೆತ್ತಗೆ ಬೇಯುತ್ತವೆ. ಹಾಲು ಉಕ್ಕಬಾರದು ಅಂತ ಅಂದ್ರೆ ಹಾಲಿನ ಮಟ್ಟಕ್ಕಿಂತ ಮೇಲೆ ಬರುವ ಒಂದು ಚಮಚವನ್ನು ಅದರಲ್ಲಿ ಅದ್ದಿ ಇಡಬೇಕು ಅವಾಗ ಹಾಲು ಉಕ್ಕಿ ಚೆಲ್ಲುವುದಿಲ್ಲ. ಸ್ನೇಹಿತರೆ ಮುಂದಿನ ಲೇಖನದಲ್ಲಿ ಮತ್ತೊಂದು ಹೊಸ ವಿಷಯದ ಜೊತೆಗೆ ಬರುತ್ತೇನೆ. ಅಲ್ಲಿಯವರೆಗೂ ನಮಸ್ಕಾರ. ನಮ್ಮ ಮಾಹಿತಿ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *