ಗಣಪತಿ ವಿಗ್ರಹವನ್ನು ಮನೆಗೆ ತರುವಾಗ ಈ ತಪ್ಪನ್ನು ಮಾಡಬೇಡಿ. ಈ ತಪ್ಪನ್ನ ಮಾಡಿದ್ರೆ ಕಷ್ಟಕ್ಕೆ ಗುರಿಯಾಗುತ್ತಿರ. ನೋಡಿ ಸ್ನೇಹಿತರೆ ಗೌರಿ ಗಣೇಶ ಹಬ್ಬ ಬರುತ್ತಿದೆ ಎಲ್ಲರ ಮನೆಯಲ್ಲೂ ಗಣೇಶ ಗೌರಿಯನ್ನು ಕೂರಿಸುವ ಸಂಭ್ರಮ. ಗಣಪತಿಯನ್ನು ತರುವಾಗ ಈ ತಪ್ಪನ್ನು ಎಂದಿಗೂ ಮಾಡಬಾರದು. ಕೆಲವೊಂದು ಶಾಸ್ತ್ರದ ನಿಯಮವನ್ನ ಪಾಲಿಸಬೇಕಾಗುತ್ತದೆ. ಇಲ್ಲ ಎಂದರೆ ಏನಾದರೂ ತೊಂದರೆಗಳು ತಪ್ಪಿದ್ದಲ್ಲ. ಗಣೇಶ ದೇವರು ಎಂದರೆ ವಿಶೇಷವಾದ ಶಕ್ತಿಯ ದೇವರು. ಸರಿಯಾಗಿ ನಡೆದುಕೊಳ್ಳಬೇಕು. ನಿತಿ ನಿಯಮಗಳನ್ನ ಸರಿಯಾಗಿ ಪಾಲಿಸಬೇಕು. ಗಣೇಶನಿಗೆ ಹೀಗೆ ಆಗಬೇಕು ಎಂಬ ನಿಯಮವಿದೆ, ಆ ನಿಯಮವನ್ನ ತಪ್ಪಿದರೆ ಗಣೇಶ ಮುನಿಸಿಕೊಳ್ಳುತ್ತಾನೆ. ನೋಡಿ ಗಣೇಶ ವಿಗ್ರಹವನ್ನು ತಂದು ನಾವು ಮನೆಯಲ್ಲಿ ಪ್ರತಿಷ್ಠಾಪನೆ ಮಾಡ್ತೀವಲ್ಲ. ಅದಕ್ಕೆ ಕೆಲವೊಂದು ನಿಯಮಗಳನ್ನ ಪಾಲಿಸಬೇಕಾಗುತ್ತದೆ.

ಮನೆಗೆ ತರುವಂತಹ ವಿಗ್ರಹಗಳು ಯಾವ ರೀತಿ ಇರಬೇಕು ಅನ್ನೋದನ್ನ ತಿಳಿದುಕೊಳ್ಳೋಣ. ಈ ರೀತಿ ವಿಗ್ರಹವನ್ನು ತಂದು ನಾವು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆಯನ್ನು ಮಾಡಿದಾಗ ಮಾತ್ರ ನಮಗೆ ಸರಿಯಾದ ಪೂರ್ಣ ಫಲ ಸಿಗುತ್ತದೆ. ಸುಮ್ಮನೆ ನೀವು ಗಣೇಶ ವಿಗ್ರಹವನ್ನ ತಂದು ಇಟ್ಟು ಎಷ್ಟು ಪೂಜೆ ಮಾಡಿದರು ಅಷ್ಟೇ ಈ ತರಹದ ನೀತಿ ನಿಯಮಗಳಿರುವ ಗಣೇಶನನ್ನು ತಂದು ಕೂರಿಸಬೇಕು. ನಾವು 18ನೇ ತಾರೀಕು ಸೋಮವಾರ ಚಿತ್ರ ನಕ್ಷತ್ರದಲ್ಲಿ ಇಂದ್ರ ಯೋಗದಲ್ಲಿ ಗಣೇಶನ ಹಬ್ಬನನ್ನ ಆಚರಿಸುತ್ತಿದ್ದೇವೆ. ಕೆಲವೊಂದು ಉಪಯೋಗಗಳು ಇರುತ್ತವೆ ಆ ಶುಭ ಯೋಗಗಳ ಬಗ್ಗೆ ನಾವು ಆಗಲೇ ತಿಳಿದುಕೊಂಡಿದ್ದೇವೆ. ನೋಡಿ ಎಷ್ಟೋ ಮನೆಯಲ್ಲಿ ಮಣ್ಣಿನ ಗಣಪತಿಯನ್ನ ತರುವುದು ರೂಡಿಯಲ್ಲಿರುತ್ತದೆ. ಮಣ್ಣಿನ ಗಣಪತಿಯನ್ನ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ತರಬಾರದು.

ಮಣ್ಣಿನ ಗಣಪತಿಯನ್ನ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕಾದವರು ಗಂಡು ಮಕ್ಕಳು ಆದ್ದರಿಂದ ಹೆಣ್ಣು ಮಕ್ಕಳು ಮಣ್ಣಿನ ಗಣಪತಿಯನ್ನು ತರೋಹಾಗಿಲ್ಲ. ಮಣ್ಣಿನ ಗಣಪತಿಯನ್ನು ತಂದು ಪ್ರತಿಷ್ಠಾಪನೆಯನ್ನು ಮಾಡಬೇಕಾಗುತ್ತದೆ ಆದ್ದರಿಂದ ಗಂಡು ಮಕ್ಕಳು ಪಂಚೆಯನ್ನ ತೊಳೆದು ಒಂದು ಕಾಟನ್ ಪಂಚೆಯನ್ನು ಅಥವಾ ರೇಷ್ಮೆ ಪಂಚೆಯನ್ನ ತೊಳೆದು ಮಡಿಯಲ್ಲಿ ಆ ಪಂಚೆಯಿಂದ ಹುಟ್ಟಿಕೊಂಡು ಹೋಗಿ ಗಣಪತಿಯನ್ನ ತೆಗೆದುಕೊಂಡು ಬರಬೇಕು. ಗಣಪತಿಯನ್ನ ತೆಗೆದುಕೊಂಡು ಬರಲಿಕ್ಕೆ ಹೋದಾಗ ಹಣೆಯ ಮೇಲೆ ಸಿಂಧೂರವನ್ನ ಇಟ್ಟುಕೊಂಡು ಹೋಗಬೇಕು. ಇನ್ನು ಗಣಪತಿಯನ್ನು ತರುವಾಗ ನೀವು ಕಾಲಲ್ಲಿ ಪಾದರಕ್ಷೆಯನ್ನು ಹಾಕಿರಬಾರದು. ಇನ್ನು ವಿಗ್ರಹ ಯಾವ ರೀತಿ ಇದ್ದಾಗ ಶುಭ ನಮಗೆ ತಂದುಕೊಡುತ್ತದೆ ಅಂತ ಅಂದ್ರೆ ಕುಳಿತಿರುವಂತಹ ವಿಗ್ರಹ ನಮಗೆ ತುಂಬಾ ಯಶಸ್ಸನ್ನ ತಂದುಕೊಡುತ್ತದೆ ಅದಕ್ಕೆ ನಾವು ಗಣಪತಿಯಲ್ಲಿ ಕುಳಿತಿರುವಂತಹ ವಿಗ್ರಹವನ್ನು ನಾವು ತರಬೇಕು.

ಇನ್ನು ಗಣಪತಿಯ ಸೊಂಡಿಲು ಎಡಭಾಗದಲ್ಲಿ ಇರಬೇಕಾ ಅಥವಾ ಬಲಭಾಗದಲ್ಲಿ ಇರಬೇಕಾ ಅಂತ ಕೆಲವರಿಗೆ ಪ್ರಶ್ನೆ ಇದೆ ನೋಡಿ ಬಲಭಾಗದ ಗಣಪತಿ ಸೊಂಡಿಲನ್ನು ತೆಗೆದುಕೊಂಡು ಬಂದ್ರೆ ತುಂಬಾ ನಿಷ್ಠೆಯಿಂದ ನಾವು ನಿಯಮವನ್ನ ಪಾಲಿಸಬೇಕಾಗುತ್ತದೆ. ಅದಕ್ಕೆ ಎಲ್ಲರೂ ಸಾಮಾನ್ಯವಾಗಿ ಇಡುವುದು ಎಡಭಾಗದ ಸೊಂಡಿಲು ಗಣಪತಿಯನ್ನೇ ನಾವು ಪ್ರತಿಷ್ಠಾಪನೆ ಮಾಡುತ್ತೇವೆ. ಎಡ ಭಾಗದ ಸೊಂಡಿಲಿರುವ ಗಣಪತಿಯನ್ನು ನಾವು ಪೂಜೆ ಮಾಡಿದಾಗ ನಮಗೆ ಬೇಗನೆ ಕಾರ್ಯಸಿದ್ಧಿ ಆಗುತ್ತದೆ. ಬಲಭಾಗದ ಬಲಸುಂಡಿಲಿರುವಂತಹ ಗಣಪತಿ ಸ್ವಲ್ಪ ಉಗ್ರ ರೂಪವನ್ನು ಇರುತ್ತದೆ. ನಿತಿ ನಿಯಮ ಜಾಸ್ತಿ ಪಾಲಿಸಬೇಕಾಗ್ತದೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಅಕ್ಷತೆಯನ್ನು ಹಾಕಿಕೊಂಡು ಹೋಗಿ ಅದರ ಮೇಲೆ ಗಣಪತಿಯನ್ನ ಇಟ್ಟು ತರಬೇಕು ಮೇಲಿನಿಂದ ಸ್ವಲ್ಪ ಅರಿಶಿನ ಕುಂಕುಮವನ್ನು ನೀವು ತೆಗೆದುಕೊಂಡು ಹೋಗಿ. ಸ್ವಲ್ಪ ಅರಿಶಿನ ಕುಂಕುಮ ಹಾಗೂ ಅಕ್ಷತೆಯನ್ನು ನೀವು ಗಣಪತಿಗೆ ಹಾಕಿ ತೆಗೆದುಕೊಂಡು ಬನ್ನಿ. ನೋಡಿ ಅಂಗಡಿಕಾರರಿಗೆ ದುಡ್ಡನ್ನು ಕೊಡಲಿಕ್ಕೆ ಸಹ ಒಂದು ರೀತಿ ನೀತಿ ಇದೆ ಗಣಪತಿಯನ್ನು ತರುವಾಗ. ಒಂದು ಸಣ್ಣ ಪ್ಲೇಟಿನಲ್ಲಿ ಎಲೆ ಅಡಿಕೆಯನ್ನು ಇಟ್ಟು ದುಡ್ಡನ್ನ ಇಟ್ಟು ಅದರ ಮೇಲೆ ಒಂದು ರೂಪಾಯಿ ಇಟ್ಟು ಕೊಡಬೇಕು. ಸುಮ್ಮನೆ ನೀವು ದುಡ್ಡನ್ನು ತೆಗೆದು ಕೊಡುವುದಲ್ಲ ಈ ರೀತಿ ಮಾಡಿ ಕೊಡಬೇಕಾಗ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *