ದಿನಕ್ಕೆ ಒಂದು ಈ ಹಣ್ಣನ್ನು ತಿಂದರೆ ಒಂದು ವಾರದಲ್ಲಿ ನಿಮಗೆ ಆಶ್ಚರ್ಯಕರವಾದ ಫಲಿತಾಂಶ ಸಿಗುತ್ತದೆ. ನೋಡಿ ಹಾಗಾದ್ರೆ ಅದು ಯಾವ ಹಣ್ಣು ಅಂತ ತಿಳಿದುಕೊಳ್ಳೋಣ ಬನ್ನಿ. ಅದೇ ಸೀಬೆಹಣ್ಣು. ಕೆಲವು ಕಡೆ ಚೇಪೆಕಾಯಿ ಅಂತ ಕರೀತಾರೆ. ಈ ಹಣ್ಣಿನಲ್ಲಿ ಇರುವಂತಹ ವಿಟಮಿನ್ ಸಿ ಅಂಶ ಬೇರೆ ಯಾವುದು ಹಣ್ಣಿನಲ್ಲಿಲ್ಲ. ಹಾಗೆ ಒಳ್ಳೆಯ ಎನರ್ಜಿ ಕೊಡುವ ಹಣ್ಣು ಕೂಡ. ದೇಹದಲ್ಲಿ ಯಾವುದೇ ರೀತಿಯ ವೈರಾಣು ಇದ್ರುನು ಕೂಡ ಅದನ್ನು ಹೊರಗೆ ಹಾಕುವ ಶಕ್ತಿ ಇದಕ್ಕೆ ಇದೆ. ಪ್ರತಿ ಮನೆಮನೆಗಳಲ್ಲೂ ಕೂಡ ಇದನ್ನು ಬೆಳೆದುಕೊಳ್ಳಬಹುದು ತುಂಬಾ ಸುಲಭವಾಗಿ.

ಸಾಕಷ್ಟು ವಿಟಮಿನ್ ಸಿ ಒಳಗೊಂಡಿರುವುದರಿಂದ ಈ ಸೀಬೆಹಣ್ಣು ಅತ್ಯಂತ ಪೋಷಕಾಂಶ ಇರುವ ಹಣ್ಣಿನ ಸಾಲುಗಳಲ್ಲಿ ಮೊದಲನೆಯದಾಗಿದೆ. ಮೊದಲೆಲ್ಲ ಹೇಳುತ್ತಿದ್ದರು ದಿನಾ ಆಗಲು ಒಂದು ಸೇಬು ಹಣ್ಣನ್ನು ತಿನ್ನುವುದರಿಂದ ಡಾಕ್ಟರಿಂದ ದೂರ ಇರುತ್ತೇವೆ ಅಂತ ಆದರೆ ಈಗ ಬದಲಾಗಿದೆ ದಿನಾಲು ಒಂದು ಸೀಬೆ ಹಣ್ಣನ್ನ ತಿನ್ನುವುದರಿಂದ ನಾವು ಡಾಕ್ಟರ್ ಇಂದ ದೂರ ಇರುತ್ತೇವೆ. ಹೇರಳವಾಗಿ ವಿಟಮಿನ್ ಸಿ ಪೋಷಕಾಂಶ ಇರುವುದರಿಂದ ಖಂಡಿತವಾಗಲೂ ಇದು ದೇಹಕ್ಕೆ ಉತ್ತಮವಾದ ರಿಸಲ್ಟ್ ಅನ್ನ ಕೊಡುತ್ತದೆ. ನಮ್ಮ ಇಮ್ಯೂನಿಟಿ ಪವರ್ ಅನ್ನು ಇದು ಹೆಚ್ಚಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಡಬ್ಲ್ಯೂ ಎಚ್ ಓ ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ ಬಗ್ಗೆ ನೀವು ಕೇಳಿರ್ತೀರ ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ ಇದನ್ನ ಹೇಳಿದೆ ಸೀಬೆಹಣ್ಣು ತುಂಬಾ ಒಳ್ಳೆಯದು ಅಂತ ಅಲ್ಲಿ ಇರೋದು ವಿಜ್ಞಾನಿಗಳ ಗುಂಪು. ಅದು ಹೇಳಿದೆ ಅಂದ್ರೆ ಸುಮ್ ಸುಮ್ನೆ ಹೇಳೋದಿಲ್ಲ. ಇದಕ್ಕೆ ಬಲವಾದ ರಿಸರ್ಚ್ ಮಾಡಿ ಹೇಳಲಾಗುತ್ತದೆ.

ನೋಡಿ ನಿಮಗೆ ಕೆಲವು ಪರ್ಸನಲ್ ಪ್ರಾಬ್ಲಮ್ಗಳು ಇರುತ್ತೆ ಅದನ್ನ ಜನರದುರಿಗೆ ಹೇಳಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವಂಥದ್ದು. ಇಂತಹ ಸಮಸ್ಯೆಯನ್ನು ಕೂಡ ಅದು ನಿವಾರಣೆ ಮಾಡುತ್ತೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಇರುವ ಲೈಂಗಿಕ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ. ಪ್ರತಿದಿನ ಒಂದು ಸೀಬೆಹಣ್ಣನ್ನು ನಾವು ತಿಂತಾ ಬಂದ್ರೆ ನಮಗೆ ಆರೋಗ್ಯದಲ್ಲಿರುವ ಬದಲಾವಣೆಯನ್ನು ನೀವೇ ನೋಡಿ. ಮೊದಲನೆಯ ದಿನ ತಿಂದಾಗ ಸ್ವಲ್ಪ ಗಂಟಲು ಕೆರೆತ ಉಂಟಾಗಬಹುದು. ಆದರೆ ನೀವು ಹೆದರಬೇಡಿ. ವಿಟಮಿನ್ ಸಿ ಹೇರಳವಾಗಿರುವುದರಿಂದ ಹಾಗೆ ಆಗುತ್ತದೆ. ದಿನಾಲು ನಾವು ತಿನ್ನುವ ರೂಡಿಯನ್ನು ಮಾಡಿಕೊಂಡರೆ ವಿಟಮಿನ್ ಸಿ ನಮಗೆ ಸಿಕ್ಕಿಬಿಡುತ್ತೆ ಇಮ್ಯುನಿಟಿ ಚೆನ್ನಾಗಿ ಆಗುತ್ತೆ. ಆಮೇಲೆ ಏನು ಸಮಸ್ಯೆಗಳು ಆಗೋದಿಲ್ಲ. ಇದು ಶೀತ ನೆಗಡಿ ಜ್ವರವನ್ನು ಕಮ್ಮಿ ಮಾಡದಷ್ಟೇ ಅಲ್ಲ. ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು ದಿನಾಲು ಇದನ್ನು ತಿಂತಾ ಬಂದ್ರೆ ಚರ್ಮ ಪಳಪಳನೆ ಹೊಳೆಯುತ್ತದೆ.

ಹಾಗಾದ್ರೆ ಬನ್ನಿ ಇದರಲ್ಲಿ ಯಾವ ಯಾವ ರೀತಿ ಪೋಷಕಾಂಶಗಳಿದೆ ವೈಜ್ಞಾನಿಕವಾಗಿ ರುಜುವಾತಾಗಿದೆ ಅಂತ ತಿಳಿದುಕೊಳ್ಳೋಣ. ಒಂದು ಕೆಂಪು ಪೇರಲೆ ಹಣ್ಣಿನಲ್ಲಿ ನಾವು ವಿವಿಧ ರೀತಿಯ ಹೆಚ್ಚು ಪೋಷಕಾಂಶಗಳನ್ನು ನೋಡಬಹುದು ಹಾಗೆ ಬಿಳೇ ಇರುವಂತ ಹಣ್ಣುಗಳಲ್ಲೂ ಕೂಡ ಪೋಷಕಾಂಶಗಳು ಇರುತ್ತೆ. ಇದು ನಮ್ಮ ಸ್ಕಿನ್ನನ್ನ ಯುವಿ ರೇಸ್ ಇಂದ ಕಾಪಾಡೋದಕ್ಕೆ ಸಹಾಯ ಮಾಡುತ್ತೆ. ನೋಡಿ ಮುಖದ ಮೇಲೆ ಬಂಗ್ ಆಗುತ್ತದೆ ಒಂದು ಏಜ್ ನಂತರ ಬಂಗು ಅನ್ನೋದು ಬರುತ್ತೆ ಕಲೆಯಾಗುತ್ತೆ ಕಪ್ಪು ಕಪ್ಪು ಕಲೆಗಳು ಆಗುತ್ತವೆ. ಆ ಕಲೆಗಳು ಬರದೇ ಇದ್ದಹಾಗೆ ತಡೆಯಲು ಇದು ಸಹಾಯ ಮಾಡುತ್ತದೆ. ಆದ್ದರಿಂದ ಸ್ನೇಹಿತರೆ ದಿನಾಲು ಒಂದು ಸೀಬೆಯ ಹಣ್ಣನ್ನು ತಿನ್ನಿ. ಇದು ನಿಮಗೆ ಕಡಿಮೆ ಬೆಲೆಯಲ್ಲೂ ಕೂಡ ಸಿಗುತ್ತದೆ. ಅಥವಾ ಮನೆಯ ಮುಂದೆ ಗಿಡವನ್ನು ಕೂಡ ನೀವು ನೆಡಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *