ಹಿಂದೂಧರ್ಮ ಮತ್ತು ವೇದಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳು ನಮ್ಮ ಮೇನೆಗಳಲ್ಲಿ ಇದ್ದರೆ ಒಳಿತಾಗುತ್ತದೆ ಎಂದು ಹೇಳುತ್ತದೆ. ಆದ್ದರಿಂದ ಮನೆಯಲ್ಲಿರುವ ಪ್ರತಿಯೊಂದು ಸಾಮಾಗ್ರಿಗಳೂ ಮನೆಯವರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮನೆ ಅಲಂಕಾರದಲ್ಲಿ ಕೆಲವೊಂದು ನಿರ್ಧಿಷ್ಟ ವಸ್ತುಗಳನ್ನಿಟ್ಟರೆ ಅದರ ಪಾಸಿಟಿವ್ ಅಥವಾ ನೆಗೆಟಿವ್ ಪರಿಣಾಮ ಕೆಲವೇ ದಿನಗಳಲ್ಲಿ ಕಂಡು ಬರುತ್ತೆ. ವಾಸ್ತುವಿನ ಅನುಸಾರ ಮನೆಯಲ್ಲಿ ಇಡಬಹುದಾದಂತಹ ಕೆಲವೊಂದು ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಆಮೆ ಮೂರ್ತಿ: ಆಮೆಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆಮೆ ಮೂರ್ತಿಯನ್ನು ಮನೆಯ ಮುಖ್ಯದ್ವಾರದ ಬಳಿ ಇಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಜೊತೆಗೆ ಯಾವುದೇ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸದಂತೆ ತಡೆಯುತ್ತದೆ. ಅಲ್ಲದೆ ಮನೆಯವರ ಅರೋಗ್ಯ ಉತ್ತವಾಗಿರಲು ಸಹಾಯ ಮಾಡುತ್ತದೆ.

ಕುದುರೆ ಲಾಳ: ಇದನ್ನು ಮನೆಯ ಮುಂದಿನ ಬಾಗಿಲಿನ ಮೇಲೆ ತೂಗು ಹಾಕಿದರೆ ಅದರಿಂದ ಪಾಸಿಟಿವ್‌ ಎನರ್ಜಿ ಮನೆಯ ತುಂಬಾ ಹರಡುತ್ತದೆ. ಮನೆಯಲ್ಲಿ ಭಾಗ್ಯ ವೃದ್ಧಿಯಾಗಲು ಹಾಗೂ ಸಂತೋಷ ಸಮೃದ್ಧಿ ತುಂಬಬೇಕಾದರೆ ಎರಡು ಕುದುರೆ ಲಾಳವನ್ನು ಮನೆಯ ಮುಂಭಾಗದಲ್ಲಿ ನೇತು ಹಾಕಿ.

ಕಂಚಿನ ಸಿಂಹ: ಆತ್ಮವಿಶ್ವಾಸ ಹೆಚ್ಚಲು ಮನೆಯಲ್ಲಿರಲಿ ಕಂಚಿನ ಸಿಂಹದ ಮೂರ್ತಿ. ಇದು ಮನೆಯವರೆಲ್ಲರೂ ಮೇಲೂ ಪರಿಣಾಮ ಬೀರುತ್ತದೆ. ಕಂಚಿನ ಸಿಂಹವನ್ನು ಮನೆಯ ಉತ್ತರ ಪೂರ್ವ ಅಂದರೆ ಈಶಾನ್ಯ ದಿಕ್ಕಿನಲ್ಲಿಡಬೇಕು. ಇದರಿಂದ ಕೆಲವೇ ಸಮಯಲ್ಲಿ ಮನೆಮಂದಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Leave a Reply

Your email address will not be published. Required fields are marked *