ನಮಸ್ತೆ ಪ್ರಿಯ ಓದುಗರೇ, ನಮ್ಮ ಆರೋಗ್ಯ, ಸಂಪತ್ತು ಹಾಗೂ ಯಶಸ್ಸಿಗೆ ಕಾರಣ ಆಗುವ ಸ್ಪಟಿಕಗಳ ಬಗ್ಗೆ ಇಂದಿನ ಲೇಖನದಲ್ಲಿ ಮಾಹಿತಿ ತಿಳಿಯೋಣ ಸ್ನೇಹಿತರೆ. ಆಯುಷ್ಯ ಆರೋಗ್ಯ ಹಾಗೂ ಯಶಸ್ಸಿನ ಮೇಲೆ ಈ ಸ್ಫಟಿಕಗಳು ಪರಿಣಾಮ ಬೀರಿ ಅವೆಲ್ಲವನ್ನೂ ಉತ್ತಮವಾಗಿ ಸುವ ಶಕ್ತಿ ಈ ಸ್ಪಟಿಕಗಳಿಗೆ ಇದೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸ್ಪಟಿಕ ಅಥವ ಇಂಗ್ಲಿಷ್ ಅಲ್ಲಿ ಕ್ಲಿಯರ್ ಕ್ವಾರ್ಟ್ಜ್ ಅಂತ ಕರೀತಾರೆ. ಎರೆಡೂ ಒಂದೇ ಆಗಿದೆ. ಸಾಮಾನ್ಯವಾಗಿ ತುಂಬಾ ಜನರು ಇವೆರೆಡೂ ಬೇರೆ ಬೇರೆ ಅಂತ ಕನ್ಫ್ಯೂಸ್ ಆಗ್ತಾರೆ. ಇದರ ಮಹತ್ವ ಏನು ಅಂದ್ರೆ ಇದು ನಮಗೆ ಮಾಸ್ಟರ್ ಬ್ರೇಸ್ ಲೆಟ್ ಅಂತಲೂ ಕರೀತಾರೆ ಇದನ್ನ. ಅಂದ್ರೆ ಈ ಏಳು ಬಣ್ಣಗಳು ಇದ್ದಾವೆ, ಈ ಎಲ್ಲಾ ಬಣ್ಣಗಳನ್ನು ಸೇರಿಸಿದರೆ ಬರುವಂತಹ ಕೊನೆಯ ಬಣ್ಣವೇ ಈ ಬಿಳಿ ಸ್ಫಟಿಕದ ಬಣ್ಣ. ಯಾವ ರೀತಿ ನಮ್ಮ ದೇಹದಲ್ಲಿ ಏಳು ಚಕ್ರಗಳು ಇವೆ. ಆ ಏಳು ಚಕ್ರಗಳಿಗೆ ಕೂಡ ಸಂಬಂಧ ಪಟ್ಟ ಏಳು ಬಣ್ಣಗಳು ಇವೆ. ಆ ಏಳು ಬಣ್ಣಗಳನ್ನು ದಾಟಿದಾಗ ಬರುವ ಬಣ್ಣವೇ ಈ ಬಿಳಿ ಸ್ಫಟಿಕದ ಬಣ್ಣ. ಸತರಂಗಿ ಅಥವಾ ಏಳು ಚಕ್ರಗಳು ನಮ್ಮ ದೇಹದಲ್ಲಿ ಒಂದೊಂದು ಚಕ್ರವೂ ಒಂದೊಂದು ಬಣ್ಣವನ್ನು ಹೊಂದಿದೆ. ಈ ವಿಬ್ ಗಯಾರ್ ರೀತಿ ಏಳು ಬಣ್ಣಗಳನ್ನು ಈ ಚಕ್ರಗಳಿಗೆ ಕೊಟ್ಟಿರುತ್ತೇವೆ.

ಅವೆಲ್ಲ ಬಣ್ಣಗಳಿಗೆ ಈ ಬಿಳಿ ಸ್ಫಟಿಕದ ಬಣ್ಣ ಮಾಸ್ಟರ್ ಇದ್ದ ಹಾಗೆ. ಹಾಗಾಗಿ ಇದನ್ನು ಯಾರಾದ್ರೂ ಹಾಕಿಕೊಳ್ಳಬಹುದು. ಇವರೇ ಹಕೊಬೇಕು, ಅವರೇ ಹಾಕೊಬೇಕು, ಈ ಸಮಸ್ಯೆ ಇದ್ದವರು ಮಾತ್ರ ಹಕ್ಕೊಬೇಕು ಅನ್ನುವುದು ಏನಿಲ್ಲ. ಈ ಸ್ಪಟಿಕ ಮಾಲೆ ಧರಿಸುವುದರಿಂದ ಇದರ ಶಕ್ತಿ ನಮ್ಮ ದೇಹ ಮನಸ್ಸಿನ ಮೇಲೆ ಪ್ರಜ್ವಲತೆ ತಂದು ನಮ್ಮನ್ನು ಯಶಸ್ಸು ನೆಡೆಗೆ ಕೊಂಡೊಯ್ಯುತ್ತದೆ. ಈ ಸ್ಫಟಿಕದ ಮಣಿಗಳನ್ನು ಯಾರು ಬೇಕಾದರೂ ಹಾಕಿಕೊಳ್ಳಬಹುದು. ಅಂದ್ರೆ ಚಿಕ್ಕ ಮಕ್ಕಳು ತುಂಬ ತುಂಟತನ ಅಥವಾ ಹಠ ಮಾಡ್ತಾ ಇದ್ರೆ, ರೊಚ್ಚು ಮಾಡ್ತಾ ಇದ್ರೆ ಕೂಡ ಮಕ್ಕಳಿಗೆ ಇದನ್ನು ತೊಡಿಸಬಹುದು. ಇನ್ನೂ ಯುವ ಪೀಳಿಗೆ ಕೂಡ ಇದನ್ನು ಹಾಕಿಕೊಳ್ಳಬಹುದು. ಯಾರು ಹೇಳಿದ ಮಾತನ್ನು ಕೇಳ್ತಾ ಇಲ್ಲ ಮಕ್ಕಳು, ಮತ್ತು ಯಾರ ದೇಹ ತುಂಬಾ ಉಷ್ಣತೆ ಇಂದ ಕೂಡಿರುತ್ತದೆ ಅವರೂ ಸಹಿತ ಇದನ್ನು ಧರಿಸಬಹುದು. ಇದರಲ್ಲಿ ಡೈಮಂಡ್ ಕಟ್ ಮತ್ತು ದುಂಡಾದ ಎರೆಡು ವಿಧಗಳಿದ್ದು, ನಿಮಗೆ ಯಾವುದು ಸಿಗುತ್ತೆ ಅದನ್ನು ಹಾಕಿಕೊಳ್ಳಿ. ಡೈಮಂಡ್ ಕಟ್ ಇರುವ ಬ್ರೇಸ್ ಲೆಟ್ ಒಳ್ಳೆಯದು. ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಈ ಸ್ಪಟಿಕ ಒಂದು ಕಲ್ಲಿನ ಆಕಾರದಲ್ಲಿ ಇರುತ್ತೆ, ಪೆನ್ಸಿಲ್ ರೀತಿ ಉದ್ದವಾಗಿ ಕೂಡ ಸಿಗುತ್ತೆ,

ಹಾಗೆ ಕಲ್ಲಿನ ರೀತಿಯಲ್ಲಿ ಇದನ್ನು ನೋಡಬಹುದು. ಇದನ್ನು ಕೈಗೆ ಹಾಕಿಕೊಳ್ಳಲು ಆಗಲಿಲ್ಲ ಅಂದರೆ, ಅದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿ, ದೈವಿಕ ಶಕ್ತಿ ನಿಮ್ಮನ್ನು ಕಾಪಾಡುತ್ತದೆ. ನಿಮ್ಮ ಆರೋಗ್ಯವನ್ನು ಸುಧಾರಿಸಿ ನೀವು ಮಾಡುವ ಕೆಲಸಗಳಲ್ಲಿ ಯಶಸ್ಸನ್ನು ಕೊಡುತ್ತದೆ. ಒಂದು ವೇಳೆ ನಿಮಗೆ ಬಿಪಿ ಇದ್ದರೆ, ಮೈಂಡ್ ಸ್ಟ್ರೆಸ್ ಲೆವೆಲ್ ಕಡಿಮೆ ಮಾಡಿ ತುಂಬಾ ಅದ್ಭುತವಾದ ಕೆಲಸವನ್ನು ಮಾಡುತ್ತೆ. ಈ ಸ್ಫಟಿಕದ ಮಣಿಗಳನ್ನು ಮನೆಯಲ್ಲಿಟ್ಟರೆ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿ ಇದ್ದರೆ ಅವುಗಳನ್ನು ತನ್ನಲ್ಲಿ ಎಳೆದುಕೊಂಡು ಉತ್ತಮ ಧನಾತ್ಮಕ ಚಿಂತನೆ ಶಕ್ತಿ ಒದಗಿಸುತ್ತದೆ. ನಿಮ್ಮ ಪ್ರತೀ ಸಮಸ್ಯೆಗೆ ಇದು ಮ್ಯಾಜಿಕ್ ತರಹ ಕೆಲಸ ಮಾಡುತ್ತೆ. ನೀವು ಹೊರಗಡೆ ಕೆಲ್ಸಕ್ಕೆ ಹೋಗ್ತೀರಾ ಅಂದ್ರೆ ತುಂಬಾ ಮಾಲೆ ಅವು ಇವು ಧರಿಸಲು ಆಗಲ್ಲ, ಅಂತ ಸಮಯದಲ್ಲಿ ಈ ಕ್ಲಿಯರ್ ಕಾರ್ಟ್ಜ್ ಒಂದನ್ನೇ ಹಾಕಿದರೂ ಸಾಕು. ಇದನ್ನು ಹಾಕುವುದರಿಂದ ಮನೆಯಲ್ಲಿ ಉಲ್ಲಾಸ, ಸಂತೋಷ ನೆಲೆಸಿ ನೀವು ಮೆತ್ತಗೆ ಮಾತನಾಡಲು ಶುರು ಮಾಡ್ತೀರಾ ಹಾಗೆ ಸಿಟ್ಟು ಕೋಪ ಕಡಿಮೆ ಆಗುವುದೂ ಸತ್ಯ. ಹಾಗೆ ನೆಗಟಿವ್ ಶಕ್ತಿಗಳನ್ನು ಮನೆಯಲ್ಲಿ ಇದ್ದರೆ ಅವುಗಳನ್ನು ಮನೆಯಿಂದ ಹಾಗೂ ಮನೆಯವರಿಂದ ದೂರ ಇಡುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *