ನಮಸ್ತೇ ಪ್ರೀಯ ಓದುಗರೇ, ಪ್ರತಿ ಮನೆಯಲ್ಲಿ ಏನಾದರೂ ವಿಶೇಷ ಅಡುಗೆ ಮಾಡಬೇಕೆಂದರೆ ಅಲ್ಲಿ ಘಮ ಘಮ ಪರಿಮಳ ಬೀರುವ ಮಸಾಲ ಪದಾರ್ಥ ಇರಲೇಬೇಕು. ಅದರಲ್ಲಿ ಬೇಗನೆ ನೆನಪಿಗೆ ಬರುವುದು, ಥಟ್ ಅಂತ ನೆನಪಾಗೋದು ದಾಲ್ಚಿನ್ನಿ ಅಥವಾ ಚಕ್ಕೆ. ಈ ದಾಲ್ಚಿನ್ನಿ ಯನ್ನೂ ಬಹಳ ಹಿಂದಿನ ಕಾಲದಿಂದಲೂ ಮಸಾಲ ಪದಾರ್ಥ ದಲ್ಲಿ ಬಳಸಲಾಗುತ್ತಿದೆ. ಈ ದಾಲ್ಚಿನ್ನಿ ಆಹಾರದ ಪರಿಮಳ ಹೆಚ್ಚಿಸುವುದರ ಜೊತೆಗೆ ರುಚಿಯನ್ನೂ ಇಮ್ಮಡಿಗೊಳಿಸುತ್ತದೆ. ಆದರೆ ಇದು ಈಗ ಅಡುಗೆಗೆ ಮಾತ್ರ ಸೀಮಿತವಾಗಿರದೇ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲಿ ಆಯುರ್ವೇದದಲ್ಲಿ ತುಂಬಾ ಔಷಧಿಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. ಈ ದಾಲ್ಚಿನ್ನಿ ಯನ್ನ ಯಾವ ರೀತಿ ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಇವತ್ತಿನ ಈ ಲೇಖನದಲ್ಲಿ ತಿಳಿಯೋಣ. ನಿಮಗೆ ಏನಾದರೂ ನಿದ್ರಾ ಹೀನತೆ ಸಮಸ್ಯೆ ಇದ್ದರೆ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಈ ದಾಲ್ಚಿನ್ನಿ ಚಕ್ಕೆ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಈ ನೀರು ಸಂಪೂರ್ಣವಾಗಿ ಆರಿ ತಣ್ಣಗಾದ ಮೇಲೆ ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ರಾತ್ರಿ ಮಲಗುವ ಮುಂಚೆ ಸೇವಿಸಿದರೆ ನಿಮಗೆ ಚೆನ್ನಾಗಿ ನಿದ್ದೆ ಬರುತ್ತದೆ. ದಯವಿಟ್ಟು ಗಮನಿಸಿ ನೀರು ಆರಿದ ಮೇಲೆಯೇ ಇದಕ್ಕೆ ಜೇನುತಪ್ಪದೊಂದಿಗೆ ಸೇವಿಸಬೇಕು. ಯಾವುದೇ ಕಾರಣಕ್ಕೂ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಬೇಡಿ.

ಇನ್ನೂ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಧಾರಾಕಾರವಾಗಿ ನೆಗಡಿ ಬರುತ್ತಾ ಇರುತ್ತದೆ. ನಿಮಗೂ ಇದೇ ರೀತಿ ನೆಗಡಿ ಶೀತ,ಕಫ, ಸೈನಸ್ ಆಗುತ್ತಿದ್ದರೆ ದಿನಕ್ಕೆ ಎರೆಡರಿಂದ ಮೂರು ಬಾರಿ ಒಂದು ಚಮಚ ಜೇನುತುಪ್ಪ ಜೊತೆ ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕುಡಿದರೆ ಸಾಮಾನ್ಯವಾದ ಶೀತ,ನೆಗಡಿ ಸೈನಸ್ ಅಂತಹ ಸಮಸ್ಯೆಗಳು ಬೇಗನೆ ನಿವಾರಣೆ ಆಗಲು ಸಾಧ್ಯವಾಗುತ್ತದೆ. ಇನ್ನೂ ನಿಮಗೇನಾದರೂ ಸಂಧಿವಾತ, ಕಾಲುನೋವು ಸಮಸ್ಯೆ ಇದ್ದರೆ ಅರ್ಧ ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಮತ್ತು ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ನೋವಿರುವ ಜಾಗದಲ್ಲಿ ಹಚ್ಚಿ ಮಾಲೀಸು ಮಾಡಬೇಕು. ಆಮೇಲೆ 15-20 ನಿಮಿಷಗಳ ನಂತರ ಅದನ್ನು ತೊಳೆಯಿರಿ ಹೀಗೆ ಒಂದು ತಿಂಗಳ ಕಾಲ ಮಾಡಿದರೆ ಸಂಧಿವಾತ ಅಥವಾ ಮಂಡೆ ನೋವಿನ ಸಮಸ್ಯೆ ನಿಧಾನವಾಗಿ ಕಡಿಮೆ ಆಗುತ್ತಾ ಬರುತ್ತದೆ. ಇನ್ನೂ ನಿಮಗೇನಾದರೂ ಹಲ್ಲು ನೋವಿನ ಸಮಸ್ಯೆ ಇದ್ದರೆ ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚ ಅಷ್ಟು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ ಅದನ್ನು ಪೇಸ್ಟ್ ರೂಪದಲ್ಲಿ ತಯಾರಿಸಿ ಹಲ್ಲು ಉಜ್ಜುವುದರಿಂದ ಹಲ್ಲು ನೋವಿನ ಸಮಸ್ಯೆ ನಿಧಾನವಾಗಿ ಕಡಿಮೆ ಆಗುತ್ತದೆ. ಹಾಗೂ ನಿಮ್ಮ ಬಾಯಿಯಲ್ಲಿ ದುರ್ವಾಸನೆ ಬರುತ್ತಿದ್ದರೆ ಒಂದು ಚಿಕ್ಕ ದಾಲ್ಚಿನ್ನಿಯನ್ನ ಬಾಯಲ್ಲಿ ಹಾಕಿಕೊಂಡು ಜಗಿಯುತ್ತಾ ಅದರ ರಸವನ್ನು ಹೀರುತ್ತಾ ಇದ್ದರೆ ಬಾಯಿಯ ದುರ್ವಾಸನೆ ಬೇಗ ಕಡಿಮೆ ಆಗುತ್ತದೆ. ಇನ್ನೂ ನಿಯಮಿತವಾಗಿ ಈ ದಾಲ್ಚಿನ್ನಿಯನ್ನ ಸೇವನೆ ಮಾಡುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ.

ಜೊತೆಗೆ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಕೆಟ್ಟ ಕ್ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಇದು ನಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳ ಲೂ ಸಹಾಯ ಮಾಡುತ್ತದೆ. ಹೌದು ಚಕ್ಕೆಯಿಂದ ನಮ್ಮ ಮೆದುಳು ಕಾರ್ಯ ವೃದ್ಧಿಯಾಗಿ ಅದು ಚೆನ್ನಾಗಿ ಕೆಲಸ ನಿರ್ವಹಿಸಲು ನೆರವಾಗುತ್ತದೆ. ಮತ್ತು ಇದು ಸಕ್ಕರೆ ಕಾಯಿಲೆ ಇದ್ದವರಿಗೂ ಒಳ್ಳೆಯದು. ನಿಯಮಿತವಾಗಿ ನೀವು ದಾಲ್ಚಿನ್ನಿ ಯನ್ನೂ ಬಳಸುತ್ತಾ ಬಂದರೆ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಅಂತಹ ಭಯಾನಕ ಸಮಸ್ಯೆಗಳು ಬರುವುದನ್ನು ತಡೆಗಟ್ಟುತ್ತದೆ. ತಿಳಿದ್ರಲ್ಲ ಸ್ನೇಹಿತರೆ ಅಡುಗೆಗೆ ಬಳಸುವ ದಾಲ್ಚಿನ್ನಿ ಇಂದ ಎಷ್ಟೆಲ್ಲಾ ಉಪಯೋಗಗಳಿವೆ ಎಂದು, ಆದರೆ ಈ ದಾಲ್ಚಿನ್ನಿ ಅನ್ನು ನಿಯಮಿತವಾಗಿ ಸೇವನೆ ಮಾಡಬೇಕು, ಹೆಚ್ಚಾಗಿ ಸೇವನೆ ಮಾಡಬಾರದು. ಯಾಕೆಂದ್ರೆ ಅತಿಯಾದರೆ ಅಮೃತವೂ ವಿಷವೇ. ಹಾಗಾಗಿ ಎಲ್ಲವೂ ಮಿತಿಯಲ್ಲಿದ್ದರೆ ಎಲ್ಲರಿಗೂ, ಎಲ್ಲದಕ್ಕೂ ಒಳ್ಳೆಯದು. ಅತಿಯಾದ ಸೇವನೆ ಇಂದ ಕೆಲವರಿಗೆ ಅಡ್ಡ ಪರಿಣಾಮಗಳೂ ಆಗಬಹುದೂ. ಯಾರಿಗೆ ಉಷ್ಣ ಪ್ರಕೃತಿ ಯಾದ್ದು ಆದರೆ ಮಸಾಲೆ ಪದಾರ್ಥಗಳನ್ನು ಕಡಿಮೆ ಸೇವಿಸಿದರೆ ಉತ್ತಮ. ಅದರಲ್ಲೂ ಬೇಸಿಗೆಯಲ್ಲಿ ಮಸಾಲೆ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ಉಷ್ಣ ಪ್ರಕೃತಿ ಇದ್ದು ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸಿದರೆ ನಿಮಗೆ ಪೈಲ್ಸ್ ಅಥವಾ ಮೂಲವ್ಯಾಧಿ ಅಂತಹ ಸಮಸ್ಯೆಗಳು ಉಂಟಾಗಬಹುದು.

Leave a Reply

Your email address will not be published. Required fields are marked *