ಕಿಯಾರಾ ಅಡ್ವಾಣಿ,ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಚ್ಚು ಬೇಡಿಕೆ ಇರುವ ನಟಿ. ಸದ್ಯ ಕಿಯಾರಾ ಕೈಯಲ್ಲಿ ಹಲವು ಸಿನಿಮಾಳಿವೆ. ಕಿಯಾರಾ ಅಡ್ವಾಣಿ ಟಾಲಿವುಡ್ ನಲ್ಲಿ ನಟಿಸಿದ ಎರಡು ಚಿತ್ರಗಳು ಒಳ್ಳೆಯ ಯಶಸ್ಸನ್ನ ಕಂಡಿವೆ. ಇದೆ ಕಾರಣಕ್ಕೆ ಟಾಲಿವುಡ್ ನಲ್ಲೂ ಕಿಯಾರಾಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಟಾಲಿವುಡ್ ನ ನಿರ್ಮಾಪಕರ ಪಾಲಿಗೆ ಮಾತ್ರ ಕಿಯಾರ ಹುಳಿ ದ್ರಾಕ್ಷಿಯಾಗಿದ್ದಾರೆ.

ಕಿಯಾರಾ ಅಂದ್ರೆ ನಿರ್ಮಾಪಕರು ಮಾತ್ರ,ನಿಮ್ಮ ಸಹವಾಸವೆ ಬೇಡ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಕಾರಣವೇನೆಂದರೆ ಕಿಯಾರ ತನ್ನ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದು. ಹೌದು ಕಿಯಾರ ಒಂದು ಸಿನಾಮಾಗೆ ಸುಮಾರು 3 ಕೋಟಿ ಸಂಭಾವನೆಯನ್ನ ಕೇಳುತ್ತಿದ್ದಾರಂತೆ. ಈ ಕಾರಣದಿಂದ ಕಿಯಾರಾಗೆ ಟಾಲಿವುಡ್ ನಲ್ಲಿ ಅವಕಾಶಗಳಿದ್ದರು,ಸಂಭಾವನೆಯ ವಿಚಾರವಾಗಿ ಸಿನಿಮಾಗಳು ಬೇರೆ ನಟಿಯರ ಪಾಲಾಗುತ್ತಿವೆ.

ಅಂದ ಮಾತ್ರಕ್ಕೆ ಕಿಯಾರಾಗೆ ಬಾಲಿವುಡ್ ನಲ್ಲಿ ಬೇಡಿಕೆ ಕಡಿಮೆ ಆಗಿಲ್ಲ. ಹಾಗೆ ಕಿಯಾರ ಕೇಳಿದಷ್ಟು ಸಂಭಾವನೆಯನ್ನ ಬಾಲಿವುಡ್ ನಿರ್ಮಾಪಕರು ನೀಡುತ್ತಿದ್ದಾರಂತೆ ಎಂಬ ಮಾತು ಕೇಳಿಬರುತ್ತಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *