ವೀಕ್ಷಕರೆ ಆಯುರ್ವೇದದಲ್ಲಿ ಶಿಲಾಜಿ ಅನ್ನು ಔಷಧಿಯನ್ನು ಪರಿಗಣಿಸಲಾಗುತ್ತದೆ ಶಿಲಾಜಿತ್ ಪುರುಷರಲ್ಲಿ ಪೌರತ್ವವನ್ನು ಹೆಚ್ಚಿಸಲು ತಿಳಿದಿರುವಂತಹ ಔಷಧಿಗಳಲ್ಲಿ ಒಂದಾಗಿದೆ. ದೇಶ ವಿದೇಶಗಳಲ್ಲಿ ಈ ಔಷಧಿ ನೆಚ್ಚಿನ ಬೇಡಿಕೆ ಇದೆ ಶಿಲಾಜಿತ್ ಸೇವನೆ ಮಾಡುವುದರಿಂದ ಪುರುಷರಿಗೆ ಒಳ್ಳೆಯ ನಿದ್ದೆ ಬರುತ್ತದೆ ಜೊತೆಗೆ ಲೈಂ-ಗಿಕ ಆರೋಗ್ಯವೂ ಕೂಡ ಸುಧಾರಿಸುತ್ತದೆ. ಇದಷ್ಟೇ ಅಲ್ಲದೆ ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯಾದಂತಹ ಪ್ರಯೋಜನಗಳನ್ನು ಕೂಡ ನಾವು ಪಡೆಯಬಹುದು.

ಇವತ್ತಿನ ಮಾಹಿತಿಯಲ್ಲಿ ಶಿಲಾಜಿತನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯಾದಂತಹ ಪ್ರಯೋಜನಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ಬನ್ನಿ. ಶಿಲಾಜಿತ್‌ನ ಪ್ರಮುಖ ಅಂಶವಾದ ಫುಲ್ವಿಕ್ ಆಮ್ಲವು ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ, ಜ್ಞಾಪಕ ಶಕ್ತಿ ಹೆಚ್ಚಿಸುವ ಮತ್ತು ಆಲ್ಝೈಮರ್ ವಿರೋಧಿ ಗುಣಗಳನ್ನು ಹೊಂದಿದೆ.ಶಿಲಾಜಿತ್‌ ಮಧುಮೇಹ, ಮೂತ್ರನಾಳದ ಕಾಯಿಲೆಗಳು, ಗೆಡ್ಡೆಗಳು, ಎಡಿಮಾ, ಮತ್ತು ಅಪಸ್ಮಾರದಲ್ಲಿ ಅದರ ಪ್ರಯೋಜನಗಳನ್ನು ಒಳಗೊಂಡಿದೆ.

ಮೊದಲೇ ಹೇಳಿದಂತೆ ಈ ಶಿಲಾಜಿತನ್ನು ಸೇವನೆ ಮಾಡುವುದರಿಂದ ಪುರುಷತ್ವ ಹೆಚ್ಚಾಗುತ್ತದೆ. ಹೌದು ಶಿಲಾಜಿತನು ನಿಯಮಿತವಾಗಿ ಸೇವನೆ ಮಾಡುವುದರಿಂದ ಪುರುಷರಲ್ಲಿ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಪುರುಷರ ಪ್ರೈಮರಿ ಸೆಕ್ಸ್ ಹಾರ್ಮೋನ್ ಆಗಿರುತ್ತದೆ. ಇದನ್ನು ಸೇವನೆ ಮಾಡುವುದರಿಂದ ಪುರುಷರಿಗೆ ಹಾರ್ಮೋನ್ ಹೆಚ್ಚಾಗುವುದರಿಂದ ಪುರುಷರ ಲೈಂ-ಗಿಕ ಸಾಮರ್ಥ್ಯ ಕೂಡ ಹೆಚ್ಚಾಗುತ್ತದೆ. ಇದಷ್ಟೇ ಅಲ್ಲದೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಪುರುಷರಲ್ಲಿ ವೀರಾಣದ ಸಂಖ್ಯೆಯು ಕೂಡ ಹೆಚ್ಚಾಗಲು ಸಹಾಯವಾಗುತ್ತದೆ ಅದರಿಂದಾಗಿ ನೀವು ಶಿಲಾಜಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ.

ಸೇವನೆ ಮಾಡುವುದರಿಂದ ನಿಮ್ಮ ವೀರಾಣುಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗಲು ಸಹಾಯವಾಗುತ್ತದೆ. ಇನ್ನು ಯಾರಿಗೆ ನಿದ್ರಾಹೀನತೆ ಸಮಸ್ಯೆ ಇರುತ್ತದೆ ಅಂತ ಅವರು ಕೂಡ ಈ ಶಿಲಾಜಿತನ್ನು ರಾತ್ರಿ ಸಮಯದಲ್ಲಿ ತೆಗೆದುಕೊಂಡು ಮಲಗುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ. ಇನ್ನು ಕೆಲವರು ಸಾಕಷ್ಟು ಯೋಚನೆ ಮಾಡುತ್ತಾ ಇರುತ್ತಾರೆ ಮತ್ತು ಅವರಿಗೆ ಯಾವಾಗಲೂ ಕೂಡ ಒತ್ತಡ ಮತ್ತು ಆತಂಕದ ಮಟ್ಟ ಜಾಸ್ತಿ ಇರುತ್ತದೆ.ಶಿಲಾಜಿತ್ ಮೆದುಳಿನಲ್ಲಿ ಡೋಪಮೈನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ.

ಇದು ಆತಂಕ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಶಿಲಾಜಿತ್ ನಿಮ್ಮ ದೇಹದ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಸಹ ಹೊಂದಿದೆ. ಇದರಲ್ಲಿರುವ ಅಧಿಕ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇದಕ್ಕೆ ಕಾರಣ. ಈ ಘಟಕಗಳು ನಿಮ್ಮ ಹೃದಯದ ಸ್ನಾಯುಗಳನ್ನು ಒಳಗೊಂಡಂತೆ ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುತ್ತವೆ. ಈ ಹಿತವಾದ ಪರಿಣಾಮವು ಒತ್ತಡದ ಮಟ್ಟಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *