ಸಂಸ್ಕೃತಿ ಸಂಪ್ರದಾಯಗಳು ಗಟ್ಟಿಯಾಗಿ ನೆಲೆಯುರಿರುವ ಭಾರತ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅತ್ಯಂತ ವಿಶಿಷ್ಟ ದೇವಾಲಯಗಳಿವೆ ಅದರಲ್ಲಿ ಅಸ್ಸಾಂ ರಾಜ್ಯದ ಗುವಹಾಟಿ ನಗರದಲ್ಲಿರುವ ನೀಲಾಚಲ ಬೆಟ್ಟಗಳ ಮೇಲೆ ಕಾಮಾಕ್ಯ ದೇವಾಲಯವು ಒಂದು. ಇದೊಂದು ಪುರಾತನ ಇತಿಹಾಸವುಳ್ಳ ಪವಿತ್ರ ಶಕ್ತಿ ಪೀಠಗಳಲ್ಲಿ ಇದು ಒಂದು. ಇಲ್ಲಿನ ವಿಶೇಷವೆಂದರೆ ಭಕ್ತರು ಇಲ್ಲಿರುವ ಶಕ್ತಿಯನ್ನು ಪ್ರತಿಮೆಯ ರೂಪದಲ್ಲಲ್ಲದೆ ಕಲ್ಲಿನಲ್ಲಿ ಮಾಡಿರುವ ಯೋನಿಯ ರೂಪದಲ್ಲಿ ಪೂಜೆಯನ್ನು ಮಾಡುವುದನ್ನು ಕಾಣಬಹುದು. ಈ ದೇವಾಲಯ ನಿಮಗೆ ಅಚ್ಚರಿ, ಕುತೂಹಲಗಳನ್ನು ಮೂಡಿಸುವುದಂತು ಖಂಡಿತ.

ಈ ಪ್ರಸಿದ್ಧವಾದ ದೇವಾಲಯವು ಅಸ್ಸಾಂನಲ್ಲಿನ ಬ್ರಹ್ಮಪುತ್ರ ನದಿ ತೀರದ, ಗುವಾಹಟಿ ಸಮೀಪದಲ್ಲಿ ಈ ಕ್ಷೇತ್ರವಿದೆ. ಇಲ್ಲಿಂದ 8 ಕಿ,ಮೀ ದೂರದಲ್ಲಿ ನೀಲಾಚಲ ಎಂಬ ಪರ್ವತ ಇನ್ನಷ್ಟು ಆನಂದವನ್ನು ನೀಡುತ್ತದೆ. ಈ ಪರ್ವತದ ಮೇಲೆ ಪ್ರಖ್ಯಾತ ಶಕ್ತಿ ಪೀಠವಿದೆ. ಇಲ್ಲಿ ನೆಲೆಸಿರುವ ಶಕ್ತಿ ದೇವತೆಯನ್ನು ಕಾಮಾಕ್ಯ ಅಥವಾ ಕಾಮರೂಪಿಣಿ ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿ 10 ದೇವಾಲಯಗಳು ಇವೆ. ಮಹಾವಿದ್ಯೆಗೆ ಅಂಕಿತವಾಗಿವೆ. ಆ ದೇವಾಲಯಗಳು ಕಾಳಿ, ತಾರ, ಸೋದಶಿ, ಭುವನೇಶ್ವರಿ, ಭೈರವಿ, ಚಿನ್ನ, ಮಸ್ತಾ, ಧುಮವತಿ, ಬಂಗಳಮುಖಿ, ಮಾತಂಗಿ ಮತ್ತು ಕಮಲ ದೇವಾಲಯವಾಗಿದೆ.

ಕಾಳಿಕಾ ಪುರಾಣದ ಪ್ರಕಾರ, ಕಾಮಾಕ್ಯ ದೇವಸ್ಥಾನದ ಸ್ಥಳವು ಸತಿಯು ತನ್ನ ಪ್ರಣಯವನ್ನು ಶಿವನೊಂದಿಗೆ ಈಡೇರಿಸಿಕೊಳ್ಳಲು ರಹಸ್ಯವಾಗಿ ಸಂಧಿಸುತ್ತಿದ್ದ ಏಕಾಂತ ಸ್ಥಳವಾಗಿತ್ತೆಂದು ಸೂಚಿಸುತ್ತದೆ, ಮತ್ತು ಶಿವನು ಸತಿಯ ಕಳೇಬರದೊಂದಿಗೆ ನೃತ್ಯ ಮಾಡಿದ ನಂತರ ಅವಳ ಯೋನಿ ಯು ಬಿದ್ದ ಸ್ಥಳವೂ ಕೂಡ ಆಗಿದೆ. ಕಾಮ ಎಂದರೆ ಶಾರೀರದಲ್ಲಿ ಉಂಟಾಗುವ ಚಿತ್ತ ಚಂಚಲ ಎಂದು ಭಾವಿಸಲಾಗುತ್ತದೆ. ಇಲ್ಲಿನ ಕಾಮಾರೂಪಿಣಿ ಹಲವು ರೂಪಗಳಿಂದ ಭಕ್ತರಿಗೆ ದರ್ಶನವನ್ನು ನೀಡಿ ಅವರವರ ಕೋರಿಕೆಗಳನ್ನು ನೆರೆವೇರಿಸುವ ಆದಿ ಶಕ್ತಿಯಾಗಿ ನೆಲೆಸಿದ್ದಾಳೆ.

ಒಮ್ಮೆ ಪಾರ್ವತಿ ದೇವಿಯ ತಂದೆ ದಕ್ಷಪ್ರಜಾಪತಿ ಪತಿಯಾದ ಪರಮೇಶ್ವರನನ್ನು ಕರೆಯದೆ ಪಾರ್ವತಿ ದೇವಿಯನ್ನು ಅವಮಾನ ಮಾಡಲು ಯಾಗವನ್ನು ಮಾಡುತ್ತಾನೆ. ಅವಮಾನ ಸಹಿಸಲಾರದೆ ಪಾರ್ವತಿ ದೇವಿಯು ಅಗ್ನಿ ಪ್ರವೇಶ ಮಾಡುತ್ತಾಳೆ. ಈ ವಿಷಯವನ್ನು ತಿಳಿದ ಪರಮಶಿವನು ಅತ್ಯಂತ ಕೋಪಗೊಂಡು ವೀರಭದ್ರನ ಅವತಾರ ತಾಳಿ ಯಜ್ಞವನ್ನು ಭಗ್ನ ಮಾಡುತ್ತಾನೆ. ಹಾಗೆ ಸಾಧಾರಣ ಮಾನವನಾಗಿ ಲೋಕವನ್ನು ಗಮನದಲ್ಲಿಟ್ಟುಕೊಳ್ಳದೇ ವೈರಾಗಿಯಾಗಿ ಮಾರ್ಪಾಟಾಗುತ್ತಾನೆ. ಮತ್ತು ಪಾರ್ವತಿ ದೇವಿಯ ಮೃತ ದೇಹವನ್ನು ಪರಮಶಿವನು ತನ್ನ ಭುಜದ ಮೇಲೆ ಹುತ್ತಿಕೊಂಡು ತಿರುಗಾಡುತ್ತಿರುತ್ತಾನೆ.

ಆಗ ಶ್ರೀ ಮಹಾ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಪಾರ್ವತಿ ದೇವಿಯನ್ನು ಚೂರು ಚೂರಾಗಿ ಕತ್ತರಿಸುತ್ತಾನೆ. ಪಾರ್ವತಿಯ ದೇವಿಯ ಆ ಹಲವಾರು ಶರೀರದ 108 ಚೂರುಗಳೇ ಶಕ್ತಿ ಪೀಠವಾಗುತ್ತದೆ. ಹೀಗೆ ಪಾರ್ವತಿಯ ದೇವಿಯ ದೇಹದ ಒಂದು ಭಾಗವಾದ ಯೋನಿ ಗುವಾಹಟಿಯ ನೀಲಚಲ ಪರ್ವತದ ಮೇಲೆ ಬೀಳುತ್ತದೆ. ಇಲ್ಲಿ ಪಾರ್ವತಿ ದೇವಿಯ ಯೋನಿ ಭಾಗ ಬಿದ್ದರಿಂದ ಈ ಪರ್ವತವು ನೀಲಿಯಾಗಿ ಮಾರ್ಪಾಟಾಗಿದೆ. ಯೋನಿ ಪೂಜಾ ಇಲ್ಲಿನ ಕಲ್ಲಿನಾಕಾರದ ಯೋನಿಯೇ ಕಾಮಾಕ್ಯ ದೇವಿಯ ನಿವಾಸ ಎಂದು ಹೇಳಲಾಗುತ್ತದೆ. ಒಮ್ಮೆ ಈ ಪರ್ವತಕ್ಕೆ ಬಂದು ಈ ತಾಯಿಯನ್ನು ದರ್ಶನ ಮಾಡಿದರೆ ಅಮರತ್ವ ಪಡೆಯುತ್ತಾರೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಿದೆ.

ಈ ದೇವಸ್ಥಾನದ ಇನ್ನೊಂದು ವಿಶೇಷವೇನೆಂದರೆ ಇಲ್ಲಿನ ದೇವಿಯು ಪ್ರತಿವರ್ಷ ಜೂನ್ ತಿಂಗಳ 2 ನೇ ವಾರದಲ್ಲಿ ಋತುಚಕ್ರ ಆಗುತ್ತಾಳೆ. ಆ ಸಮಯದಲ್ಲಿ ದೇವಾಲಯವನ್ನು 4 ದಿನಗಳು ಮುಚ್ಚುತ್ತಾರೆ. 5 ನೇ ದಿನದಂದು ದೇವಾಲಯವನ್ನು ಶುಚಿಗೊಳಿಸಿ ಭಕ್ತರಿಗೆ ಪ್ರವೇಶವನ್ನು ಕಲ್ಪಿಸಲಾಗುತ್ತದೆ. ಆ ಸಮಯದಲ್ಲಿ ಗರ್ಭಗುಡಿಯಿಂದ ಪ್ರವಹಿಸುವ ನೀರು ಕೆಂಪು ಬಣ್ಣದ ರೀತಿಯಲ್ಲಿ ಋತುಸ್ರಾವದಂತೆಯೇ ಕಾಣಿಸುತ್ತದೆ. ಈ ಸಮಯದಲ್ಲಿ ನಡೆಯುವ ಉತ್ಸವವನ್ನು “ಅಂಬುಬಾಚಿ ಮೇಳ” ಎಂದು ಕರೆಯುತ್ತಾರೆ.

ಕಾಳಿಕ ಪುರಾಣದ ಪ್ರಕಾರ ಕಾಮಾಕ್ಯ ದೇವಿಯು ತಂತ್ರ ಪೂಜೆಗಳಿಗೆ ಬಹಳ ಮುಖ್ಯವಾದವಳು ಹಾಗು ತನ್ನ ಮನಸ್ಸಿನ ಸ್ಥಿತಿಯ ಪ್ರಕಾರ ಬೇರೆ ಬೇರೆ ರೂಪವನ್ನು ಧರಿಸುತ್ತಾಳೆ. ಭಕ್ತಾದಿಗಳ ಅವಳನ್ನು ಕಾಮೇಶ್ವರಿ, ಮಹಾ ತ್ರಿಪುರ ಸುಂದರಿ ಹಾಗು ಶೋಡಷಿ ಎಂದೂ ಕರೆಯುತ್ತಾರೆ. ಇಲ್ಲಿ ಕಾಮಾಕ್ಯ ದೇವಿಯನ್ನು ದರ್ಶನ ಮಾಡುವ ಮೊದಲು ಇಲ್ಲಿ ಲಿಂಗ ಸ್ವರೂಪಿಯಾಗಿರುವ ಲಿಂಗವನ್ನು ದರ್ಶನ ಮಾಡಿಕೊಳ್ಳಬೇಕು. ಕಾಮಾಕ್ಯ ದೇವಿಯನ್ನು ಮಾತ್ರ ದರ್ಶನ ಮಾಡಿ ಲಿಂಗವನ್ನು ದರ್ಶನ ಮಾಡದಿದ್ದರೆ ಯಾತ್ರೆ ಪೂರ್ತಿಯಾಗುವುದಿಲ್ಲ ಎಂದು ಭಕ್ತರು ಭಾವಿಸುತ್ತಾರೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *