ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಮೆಂತ್ಯೆ ಕಾಳು ನಮಗೆ ದೊರೆತಿರುವ ದಿವ್ಯ ಔಷಧವಾಗಿದೆ. ಶತಮಾನಗಳಿಂದ ಆಯುರ್ವೇದ ಪದ್ಧತಿಯಲ್ಲಿ ಇದನ್ನು ಬಳಕೆ ಮಾಡುತ್ತಲೇ ಬಂದಿದ್ದೇವೆ ಅಂತ ಹೇಳಿದರೆ ತಪ್ಪಾಗಲಾರದು. ದೇಹದ ಆರೋಗ್ಯ ಕಾಪಾಡಲು ಮೆಂತ್ಯೆ ಕಾಳು ತುಂಬಾ ಸಹಕಾರಿ. ಅದನ್ನು ನಿತ್ಯವೂ ಸೇವನೆ ಮಾಡಿದರೆ ಏನಾಗುತ್ತದೆ ಗೊತ್ತೇ? ತುಂಬಾ ಕಹಿಯಾಗಿ ಇರುವ ಮೆಂತ್ಯೆ ಕಾಳನ್ನು ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ, ಅದು ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಅದಕ್ಕಾಗಿಯೇ ನಮ್ಮ ಹಿರಿಯರು ಏನೇ ಕಾಯಿಲೆಗಳು ರೋಗ ರುಜಿನಗಳು ಬಂದರು ಕೂಡ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಗುಣಪಡಿಸಿಕೊಳ್ಳುತ್ತಿದ್ದರು. ಅದರಲ್ಲಿ ಮೆಂತ್ಯೆ ಕೂಡ ಆಹಾರ ಪದ್ಧತಿ ಗುಂಪಿಗೆ ಸೇರುತ್ತವೆ. ಮೆಂತ್ಯೆ ಕಾಳು ಅನೇಕ ಬಗೆಯ ಪೋಷಕಾಂಶಗಳನ್ನು ಹೊಂದಿದೆ. ಇದು ಬಲವಾದ ಉತ್ಕಾರ್ಷಕ ನಿರೋಧಕ ಗುಣಗಳನ್ನು ಹೊಂದಿದೆ. ಅನೇಕ ಆರೋಗ್ಯ ತೊಂದರೆಗಳಿಂದ ಪಾರು ಮಾಡುತ್ತದೆ. ಮೆಂತ್ಯೆ ಕಾಳನ್ನು ಹಾಲುಣಿಸುವ ತಾಯಂದಿರು ಸೇವನೆ ಮಾಡಿದರೆ ಅವರ ಎದೆಹಾಲು ಹೆಚ್ಚಿಸಿಕೊಳ್ಳಬಹುದು.

ಈ ವಿಷಯದಲ್ಲಿ ಮುಖ್ಯವಾಗಿ ಎದೆಹಾಲು ಹೆಚ್ಚಿಸುವಲ್ಲಿ ಮೆಂತ್ಯೆ ಕಾಳು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇದನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಬದಲಾಗಿ ಫಲಿತಾಂಶವನ್ನು ನೀಡುತ್ತದೆ. ಹೀಗಾಗಿ ಹಾಲುಣಿಸುವ ತಾಯಂದಿರು ಯಾವುದೇ ಅಡ್ಡಿ ಆತಂಕ ಭಯ ಇಲ್ಲದೆ ಸೇವನೆ ಮಾಡಬಹುದು.

ಮೆಂತ್ಯೆಕಾಳಿನಲ್ಲಿ ನೈಸರ್ಗಿಕವಾದ ನಾರಿನಾಂಶವಿದ್ದು, ಇದು ಹೊಟ್ಟೆಯಲ್ಲಿ ಉಬ್ಬಿಕೊಂಡು ಹೊಟ್ಟೆ ತುಂಬುವಂತೆ ಮಾಡುವುದು. ಹೀಗಾಗಿ ನಿಮ್ಮ ತಿನ್ನುವ ಬಯಕೆ ಕಡಿಮೆ ಆಗುವುದರೊಂದಿಗೆ ತೂಕ ಇಳಿಕೆಗೆ ಸಹಕಾರಿ. ಇನ್ನೂ ಮೆಂತ್ಯೆ ಕಾಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಜೀರ್ಣ ಕ್ರಿಯೆ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಅಜೀರ್ಣತೆ ವಾಯು ಅಸಿಡಿಟಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ಹೋಗಲಾಡಿಸಲು ಸಹಾಯ ಮಾಡುತ್ತದೆ.

ಕರುಳಿನ ಮೇಲೆ ಹಿತವಾದ ಪರಿಣಾಮ ಬೀರುತ್ತದೆ. ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವು ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮೆಂತ್ಯೆ ಕಾಲು ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ತಿನ್ನದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಹಸಿವಾಗದಂತೆ ತಡೆಯುತ್ತದೆ ಇದರಿಂದ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು. ಸ್ಥೂಲಕಾಯ ಮತ್ತು ಬೊಜ್ಜು ಕರಗಿಸುತ್ತದೆ. ಕೂದಲಿನ ಬೆಳವಣಿಗೆ ಉತ್ತೇಜನ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮವ್ಯಾಧಿ ಸಮಸ್ಯೆಯನ್ನು ದೂರ ಮಾಡುತ್ತದೆ.

ಮುಖ್ಯವಾಗಿ ನೆರಿಗೆ ಹಾಗೂ ಕಪ್ಪು ಕಲೆ ಉಂಟು ಮಾಡುವ ಫ್ರೀ ರ್ಯಾಡಿಕಲ್ ನ್ನು ಮೆಂತ್ಯೆಕಾಳು ನಾಶ ಮಾಡುವುದು. ಇದು ಚರ್ಮಕ್ಕೆ ಕಾಂತಿ ನೀಡುವುದು. ಹೀಗಾಗಿ ಚರ್ಮದಲ್ಲಿ ಮೂಡುವಂತಹ ಮೊಡವೆಗಳನ್ನು ನಿವಾರಣೆ ಮಾಡಲು ಇದು ಸಹಕಾರಿ.
ಮತ್ತು ಹೃದ್ರೋಗದ ಸಮಸ್ಯೆಯನ್ನು ದೂರ ಮಾಡುತ್ತದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗುತ್ತದೆ.

ಇನ್ನೂ ಮಹಿಳೆಯರಲ್ಲಿನ ಹಲವಾರು ಸಮಸ್ಯೆಗೆ ಇದು ಪರಿಣಾಮಕಾರಿ ಆಗಿದೆ. ಸ್ತನಗಳ ಗಾತ್ರ ಹಿಗ್ಗಿಸಲು ಮೆಂತ್ಯೆ ಕಾಳನ್ನು ಬಳಸಬಹುದು. ಮೆಂತ್ಯೆಯು ಸ್ತನಗಳ ಅಂಗಾಂಶಗಳ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಸ್ತನಗಳ ಗ್ರಂಥಿಗಳಿಗೆ ಶಕ್ತಿ ನೀಡುವುದು. ಅದಕ್ಕಾಗಿ ಮೆಂತ್ಯೆ ಇಷ್ಟೊಂದು ಆರೋಗ್ಯಕರ ಲಾಭಗಳನ್ನು ಹೊಂದಿದೆ ಅಂದ್ರೆ ತಪ್ಪದೆ ಸೇವನೆ ಮಾಡಿ ಶುಭದಿನ.

Leave a Reply

Your email address will not be published. Required fields are marked *