ನಮಸ್ತೆ ಗೆಳೆಯರೇ ನಾವು ಮಾಡುವ ಕೆಲವೊಂದು ತಪ್ಪುಗಳಿಂದಲೇ ನಕಾರಾತ್ಮಕತೆ ಮನೆಯಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ ಇದರಿಂದಾಗಿ ಮನೆಯ ಸದಸ್ಯರು ನಕಾರಾತ್ಮಕ ಆಲೋಚನೆ ಮಾಡಲು ಪ್ರಾರಂಭ ಮಾಡುತ್ತಾರೆ ಮನೆಯಲ್ಲಿ ದರಿದ್ರ ಆವರಿಸುತ್ತದೆ ಶಾಂತಿ ನೆಮ್ಮದಿ ಇರುವುದಿಲ್ಲ ಆರೋಗ್ಯದಲ್ಲಿ ಏರಿಳಿತಗಳು ಉಂಟಾಗುತ್ತವೆ ಹಾಗುವ ಹಣ ಸ್ಥಿರವಾಗಿ ಇರುವುದಿಲ್ಲ ಎಷ್ಟೇ ಸಂಪಾದನೆ ಮಾಡಿದರು ವಿನಾಕಾರಣ ಖರ್ಚಾಗುತ್ತದೆ ಅದರಿಂದಾಗಿ ಸಾಲದ ಬಾಧೆಗೆ ಒಳಗಾಗಿ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಮತ್ತು ಬಡತನ ಉದ್ಭವವಾಗುತ್ತವೆ ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಜಯ ಪಡೆಯಲು ಆಗುವುದಿಲ್ಲ ಅನೇಕ ಅಡ್ಡಿ ಆತಂಕಗಳಿಂದ ಸಾಕಷ್ಟು ನಷ್ಟವನ್ನು ಅನುಭವಿಸ ಬೇಕಾಗುತ್ತದೆ ಇದಕ್ಕೆಲ್ಲ ಮನೆಯಲ್ಲಿರುವ ವಾಸ್ತುದೋಷ ನಕಾರಾತ್ಮಕ ಶಕ್ತಿ ಮನೆಯಲ್ಲಿ ಪ್ರವೇಶ ಆಗಲು ಕಾರಣ ಆಗುತ್ತದೆ ಹಾಗಾಗಿ ಗೆಳೆಯರೇ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಿವಾರಣೆಯಾಗಬೇಕು ಮನೆಯಲ್ಲಿ ಎಲ್ಲರೂ ಸುಖ ಸಂತೋಷದಿಂದ ಇರಬೇಕು ಎಂದರೆ ಪ್ರತಿದಿನ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು ಹಾಗಾಗಿ ಯಾವ ರೀತಿಯಾಗಿ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಪ್ರತಿದಿನ ನೆಲ ವರಿಸುವಾಗ ನೀರಿನಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿಕೊಂಡು ನೆಲ ವರಿಸಬೇಕು ಉಪ್ಪಿನಲ್ಲಿ ನಕಾರಾತ್ಮಕ ಶಕ್ತಿಯನ್ನು ತೊಲಗಿಸುವ ಅದ್ಭುತವಾದ ಶಕ್ತಿ ಇದೆ.

ಈ ರೀತಿಯಾಗಿ ಮಾಡುವುದರಿಂದ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ ಹಾಗೂ ನಕಾರಾತ್ಮಕ ಶಕ್ತಿ ನಿವಾರಣೆ ಆಗುತ್ತದೆ ಸಕಾರಾತ್ಮಕತೆ ಮನೆಯಲ್ಲಿ ಪಸರಿಸುತ್ತದೆ ಹಾಗೂ ನಿಮ್ಮ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಇನ್ನು ಗೆಳೆಯರೇ ಪ್ರತಿದಿನ ಮನೆಗೆ ಸಾಯಂಕಾಲ ಹಾಗೂ ಬೆಳಗ್ಗಿನ ಸಮಯದಲ್ಲಿ ಗೋಮೂತ್ರವನ್ನು ಸಿಂಪಡಿಸಬೇಕು ಗೋವು ಪವಿತ್ರವಾದ ಕಾಮಧೇನು ಇದರಲ್ಲಿ ಮುಕ್ಕೋಟಿ ದೇವತೆಗಳ ಇರುತ್ತದೆ ಹಾಗಾಗಿ ಗೋಮೂತ್ರವನ್ನು ಮನೆಗೆ ಸಿಂಪಡಿಸುವುದರಿಂದ ಮನೆಯಲ್ಲಿರುವ ಕೆಟ್ಟಶಕ್ತಿಗಳು ನಕಾರಾತ್ಮಕ ಶಕ್ತಿಗಳು ನಿವಾರಣೆಯಾಗುತ್ತದೆ ಮನೆಯಲ್ಲಿ ಸಂತೋಷ ಇರುತ್ತದೆ ಹಾಗೂ ಮನೆಯಲ್ಲಿರುವ ಧನಾತ್ಮಕ ಆಲೋಚನೆಗಳು ವೃದ್ಧಿಯಾಗುತ್ತವೆ ಯಾವುದೇ ಕೆಲಸ ಮಾಡಿದರು ಅದರಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ ಗೋಮೂತ್ರದ ವಾಸನೆ ಮನೆಯಲ್ಲಿ ವಾತಾವರಣವನ್ನು ಬದಲಿಸುತ್ತಾರೆ ಹಾಗೂ ಆರೋಗ್ಯವೃದ್ಧಿ ಆಗುತ್ತದೆ.

ಇನ್ನು ಗೆಳೆಯರೇ ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ಮನೆಯ ಮುಖ್ಯ ಹೊಸ್ತಿಲನ್ನು ತೊಳೆದು ಮನೆಯ ಮುಂದೆ ರಂಗೋಲಿ ಹಾಕಬೇಕು ಇದರಿಂದಾಗಿ ಸಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶ ಆಗುತ್ತದೆ ಹಾಗೂ ಲಕ್ಷ್ಮಿ ಆಹ್ವಾಹನೆ ಮನೆಗೆ ಆಗುತ್ತದೆ ಹಾಗೂ ಮನೆಯ ಮುಂದೆ ಹಾಕಿರುವ ರಂಗೋಲಿ ಸಂತೋಷವನ್ನು ಹೆಚ್ಚಿಸುತ್ತದೆ ಹಾಗೂ ಹಣ ನಿಮ್ಮ ಬಳಿ ಸ್ಥಿರವಾಗಿರುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ಇನ್ನು ಗೆಳೆಯರೇ ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಮನೆಯಲ್ಲಿದ್ದ ದೀಪಾರಾಧನೆ ಮಾಡಿ.

Leave a Reply

Your email address will not be published. Required fields are marked *