ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವ ದೇವರು ಹನುಮಂತ ಶ್ರೀರಾಮನ ಭಕ್ತ ಹನುಮಂತನ ಬಗ್ಗೆ ತಿಳಿಯದವರಿಲ್ಲ ಶನಿವಾರ ಹಾಗೂ ಮಂಗಳವಾರ ಹನುಮಂತನಿಗೆ ಪೂಜೆ ಮಾಡುವುದು ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ ನೆಮ್ಮದಿಯ ಜೀವನ ಬಯಸುವವರು ಶ್ರದ್ಧೆ ಭಕ್ತಿಯಿಂದ ಹನುಮಂತನ ಪೂಜೆ ಮಾಡಿದರೆ ಸಾಕು. ಸರ್ವ ಸುಖ ಗೌರವಗಳಿಗಾಗಿ ಮಂಗಳವಾರ ವ್ರತ ಮಾಡುವುದು ಬಹಳ ಉತ್ತಮ ಈ ವ್ರತದಲ್ಲಿ ಗೋಧಿ ಹಾಗೂ ಬೆಲ್ಲವನ್ನು ಮಾತ್ರ ಸೇವನೆ ಮಾಡಬೇಕು ರಾತ್ರಿ ಮಾತ್ರ ಭೋಜನ ಮಾಡಬೇಕು 21 ವಾರಗಳ ಕಾಲ ಈ ವ್ರತವನ್ನು ಮಾಡಬೇಕಾಗುತ್ತದೆ.

ಈ ವ್ರತದಿಂದ ಮನುಷ್ಯ ಮಾಡಿದ ಎಲ್ಲ ದೋಷಗಳು ನಷ್ಟವಾಗುತ್ತದೆ ವ್ರತದ ಪೂಜೆಯ ವೇಳೆ ಕೆಂಪು ಹೂ ಅರ್ಪಣೆ ಮಾಡಬೇಕು ಹಾಗೆ ಕೆಂಪು ಬಟ್ಟೆಯನ್ನು ಧರಿಸಬೇಕು ಹನುಮಂತನ ಪೂಜೆ ಮಾಡುವ ಜೊತೆಗೆ ಹನುಮಂತನ ಕತೆಯನ್ನು ಓದಬೇಕು ಹನುಮಂತನಿಗೆ ತೆಂಗಿನಕಾಯಿ ಧೂಪ ದ್ರವ್ಯ ದೀಪ ಕುಂಕುಮಗಳನ್ನು ಅರ್ಪಿಸಿ ನಿಯಮ ಬದ್ಧವಾಗಿ ಮಂಗಳವಾರ ಪೂಜೆ ಮಾಡುವುದರಿಂದ ಬಂದ ಕಷ್ಟಗಳೆಲ್ಲ ದೂರವಾಗಿ ಸುಖಪ್ರಾಪ್ತಿಯಾಗುತ್ತದೆ.

ಪ್ರತಿ ಮಂಗಳವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ ಪೂಜೆ, ಆರಾಧನೆಗಳನ್ನು ಮಾಡುವುದರಿಂದ ಸರ್ವ ರೋಗ ಮತ್ತು ದೋಷಗಳಿಂದ ಮುಕ್ತಿ ಪಡೆಯಬಹುದಾಗಿದೆ. ಮಂಗಳವಾರ ಕೆಲವು ಕಾರ್ಯಗಳನ್ನು ಮಾಡುವುದರಿಂದ ಹನುಮಂತನ ವಿಶೇಷ ಕೃಪೆಗೆ ಪಾತ್ರರಾಗಬಹುದಾಗಿದೆ. ಜಾತಕದಲ್ಲಿ ಶನಿದೋಷವಿದ್ದರೆ ಮುಕ್ತಿ ಪಡೆಯಲು ಉದ್ದಿನಕಾಳು ಸಹಾಯ ಮಾಡುತ್ತದೆ. ಶನಿವಾರದಂದು ಉದ್ದಿನಕಾಳನ್ನು ಮೂರು ಬಾರಿ ತಲೆಗೆ ಸುಳಿದುಕೊಂಡು ಆ ಕಾಳನ್ನು ಕೊನೆಗೆ ದಾನ ಮಾಡಬೇಕಾಗುತ್ತದೆ. ಏಳು ಶನಿವಾರ ಇದರ ಆಚರಣೆ ಮಾಡಿದರೆ ಶೀಘ್ರ ಲಾಭವಾಗಲು ಶುರುವಾಗುತ್ತದೆ.

ಹನುಮಂತನಿಗೆ ಪೂಜೆ ಮಾಡುವುದರಿಂದ ಧೈರ್ಯ, ಸ್ಥೈರ್ಯದ ಜೊತೆಗೆ ಶನಿ ಸೇರಿದಂತೆ ಅನೇಕ ಗ್ರಹಗತಿಗಳಿಂದ ಮುಕ್ತಿಪಡೆಯಬಹುದಾಗಿದೆ. ಹನುಮಂತನಿಗೆ ಪೂಜಿಸುವಾಗ ತಪ್ಪದೇ ದೇವರಿಗೆ ಕೆಂಪು ಹೂವು ಮತ್ತು ಕುಂಕುಮವನ್ನು ಅರ್ಪಿಸಬೇಕು. ಮಂಗಳವಾರದ ಉಪವಾಸ ವ್ರತ ನಡೆಸಿ ಆಂಜನೇಯನ ಭಜಿಸಿದರೆ, ಈ ದಿನ ತಪ್ಪದೇ ಹನುಮಾನ್ ಚಾಲೀಸಾವನ್ನು ಪಠಿಸಿ. ಸಂಜೆ ತುಪ್ಪದ ದೀಪವನ್ನು ಬೆಳಗಿಸಿ ಸುಂದರಕಾಂಡವನ್ನು ಪಠಿಸುವುದು, ಇಲ್ಲ ಆಲಿಸುವುದು ಮಾಡಿ.

ಮಕ್ಕಳಿಲ್ಲದ ದಂಪತಿಗಳಿಗೆ ಹನುಮಂತನ ಉಪವಾಸವು ಮಾಡಿ ಪೂಜಿಸಿದರೆ, ಬಯಸಿದ ಫಲಿತಾಂಶವನ್ನು ಪಡೆಯಬಹುದು. ಮಂಗಳವಾರ ಅಶ್ವತ್ಥ ವೃಕ್ಷವನ್ನು ಪೂಜಿಸಿ, ಪ್ರದಕ್ಷಿಣೆಯನ್ನು ಹಾಕುವುದರಿಂದ ವಿಶೇಷ ಫಲವು ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ ಮಂಗಳವಾರದಂದು ಅಶ್ವತ್ಥ ವೃಕ್ಷಕ್ಕೆ ಜಲವನ್ನು ಅರ್ಪಣೆ ಮಾಡುವುದರಿಂದ ಮಂಗಳ ಗ್ರಹದ ದೋಷಗಳಿದ್ದರೆ ಸಹ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *