ನಮಸ್ತೇ ಪ್ರಿಯ ಓದುಗರೇ, ಬದನೆ ಕಾಯಿಯನ್ನು ಬೆಂಗನ್ ಅಂತ ಕರೆಯುತ್ತೇವೆ. ಬದನೆಕಾಯಿ ಪಲ್ಯ ಉಪ್ಪಿನಕಾಯಿ ಹಾಗೂ ಬೆಂಗನ್ ಬರ್ತಾ ಇನ್ನಿತರ ಹಲವಾರು ಬಗೆಯಲ್ಲಿ ಬದನೆಕಾಯಿ ಉಪಯೋಗಿಸುತ್ತಾರೆ. ನಾವು ಬಳಸುವ ಎಲ್ಲಾ ತರಕಾರಿಯಲ್ಲಿ ಬದನೆ ಕಾಯಿ ಕೂಡ ಒಂದಾಗಿದೆ. ಬದನೆಕಾಯಿ ಹಲವರಿಗೆ ಬಹಳಷ್ಟು ಇಷ್ಟವಾದ ಒಂದು ತರಕಾರಿ ಆಹಾರ ಪದಾರ್ಥ. ಬದನೆಕಾಯಿ ಎಂದು ತಕ್ಷಣ ನೆನಪಿಗೆ ಬರುವ ಒಂದು ಸುಲಭದ ಅಡುಗೆಯೆಂದರೆ ಅದು ವಾಂಗಿಬಾತ್. ಇನ್ನೂ ಬಿಳಿ ಬದನೆಕಾಯಿ, ಕೆಂಪು ಬದನೆಕಾಯಿ, ನೇರಳೆ ಬದನೆಕಾಯಿ, ಹಸಿರು ಬದನೆಕಾಯಿ ಮತ್ತು ಕಪ್ಪು ಬದನೆಕಾಯಿಗಳು ಗಾತ್ರದಲ್ಲೂ ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಆದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಬೇಸಿಗೆ ಕಾಲದಲ್ಲಿ ಬದನೆಕಾಯಿ ತಿನ್ನಬಾರದು ಅಂತ ಹೇಳುತ್ತಾರೆ ಅದರ ಬಗ್ಗೆ ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಬೇಸಿಗೆ ಕಾಲದಲ್ಲಿ ಬದನೆ ಕಾಯಿ ತಿಂದರೆ ದೇಹದ ಉಷ್ಣತೆ ಹೆಚ್ಚುತ್ತದೆ ಹಾಗೂ ಇನ್ನಿತರ ಅನಾರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ ಅಂತ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಯಾವುದೇ ತರಕಾರಿ ಇರಲಿ ಹಣ್ಣುಗಳು ಇರಲಿ ಪ್ರತಿಯೊಂದು ಅನುಕೂಲದ ಜೊತೆಗೆ ಅನಾನುಕೂಲತೆಯನ್ನು ಹೊಂದಿರುತ್ತದೆ. ಹೀಗಾಗಿ ನಾವು ಅವುಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡರೆ ಮಾತ್ರ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮೊದಲಿಗೆ ಬದನೆಕಾಯಿಯಲ್ಲಿ ಅಧಿಕವಾದ ನೀರಿನಾಂಶ ಮತ್ತು ನಾರಿನಂಶ ಎರಡು ಅಧಿಕವಾಗಿದೆ. ಇದರಿಂದ ಬದನೆಕಾಯಿ ತಿನ್ನುವುದರಿಂದ ನಿಮ್ಮ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ. ವಿವಿಧ ಪದಾರ್ಥಗಳನ್ನು ತಿಂದು ಅನಾರೋಗ್ಯವನ್ನು ಹಾಳು ಮಾಡಿಕೊಂಡು ದೇಹದಲ್ಲಿ ಅಧಿಕವಾದ ಬೊಜ್ಜು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಜನರುಗಳಿಗೆ ಬದನೆ ಕಾಯಿ ಸೂಕ್ತ ಆಹಾರ. ಹಾಗೂ ತೀರಾ ಕಡಿಮೆ ಕ್ಯಾಲೋರಿ ಹೊಂದಿರುವ ಬದನೆಕಾಯಿ ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ತುಂಬಾನೇ ಒಳ್ಳೆಯದು. ಬದನೆಕಾಯಿಯಲ್ಲಿ ಹೇರಳವಾದ ಪೋಷಕಾಂಶಗಳು ದೊರೆಯುತ್ತವೆ ಹೀಗಾಗಿ ನೀವು ಬದನೆಕಾಯಿ ಸೇವನೆ ಇಂದ ದುಪ್ಪಟ್ಟು ಲಾಭಗಳ ನಿರೀಕ್ಷೆಯನ್ನು ಮಾಡಬಹುದು. ಹೃದಯದ ಆರೋಗ್ಯಕ್ಕಾಗಿ ಬದನೆ ಕಾಯಿ ಬಳಕೆ ತುಂಬಾನೇ ಅವಶ್ಯಕ. ದೇಹದಲ್ಲಿ ಫ್ರೀ ರಾಡಿಕಲ್ ಅನ್ನು ಹೋಗಲಾಡಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಜೊತೆಗೆ ಕ್ಯಾನ್ಸರ್ ನಂತಹ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ. ಬದನೆ ಕಾಯಿಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶವಿದ್ದು, ಮನುಷ್ಯನ ಜೀರ್ಣ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.

ನಾರಿನ ಅಂಶ ಅಧಿಕವಿರುವ ಕಾರಣದಿಂದ ಮನುಷ್ಯನ ದೇಹದಲ್ಲಿ ಜೀರ್ಣ ಪ್ರಕ್ರಿಯೆ ನಿಧಾನವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಅಂಶಗಳು ಮನುಷ್ಯನ ದೇಹ ಸೇರುವುದಿಲ್ಲ. ಇದರಿಂದ ಮನುಷ್ಯನ ದೇಹದ ತೂಕ ಯಾವುದೇ ಕಾರಣಕ್ಕೂ ಹೆಚ್ಚಾಗುವುದಿಲ್ಲ. ದೇಹದಲ್ಲಿ ಕಬ್ಬಿಣದ ಸಮಸ್ಯೆ ಕಂಡು ಬಂದಾಗ ಅನೀಮಿಯಾ ಸಮಸ್ಯೆ ಕಂಡು ಬರುವುದು ಸಹಜ. ಇದು ವಯಸ್ಸಾದವರಲ್ಲಿ ಹಾಗೂ ಮಕ್ಕಳಲ್ಲಿ ಕೂಡ ಕಂಡು ಬರಬಹುದು. ಇದರಿಂದ ಆಯಾಸ ಸುಸ್ತು ಮಾನಸಿಕ ಖಿನ್ನತೆ, ಜ್ಞಾಪಕ ಶಕ್ತಿ ಕೊರತೆ ಈ ರೀತಿ ಇತ್ಯಾದಿ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಅಧಿಕವಾದ ಕಬ್ಬಿಣ ಅಂಶವನ್ನು ಒಳಗೊಂಡಿರುವ ಬದನೆಕಾಯಿ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಇನ್ನೂ ನಿಮ್ಮ ಮೂಳೆಗಳಲ್ಲಿ ಕ್ಯಾಲ್ಷಿಯಂ ಕೊರತೆ ಉಂಟಾದರೆ ಬದನೆ ಕಾಯಿ ಸೇವಿಸಿ ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಿ ಸಂಪೂರ್ಣವಾಗಿ ಮೂಳೆಗಳ ಬೆಳವಣಿಗೆಯನ್ನು ಸಧೃಡ ಮಾಡುತ್ತದೆ.ಮುರಿದ ಮೂಳೆಗಳನ್ನು ಕೂಡ ಸರಿ ಪಡಿಸುವ ಗುಣವನ್ನು ಈ ಬದನೆಕಾಯಿ ಹೊಂದಿದೆ. ಈ ತರಕಾರಿಯನ್ನು ನೀವು ಇಷ್ಟ ಬಂದ ಹಾಗೆ ಬಳಕೆ ಮಾಡಿಕೊಳ್ಳಬಹುದು. ಅಂದ್ರೆ ಪಲ್ಯ ಉಪ್ಪಿನಕಾಯಿ ಚಟ್ನಿ ಫ್ರೈ ಮಾಡಿ ತಿನ್ನಬಹುದು. ನೋಡಿದ್ರಲಾ ಬದನೆಕಾಯಿ ಅದ್ಭುತವಾದ ಮಾಹಿತಿಯನ್ನು. ಶುಭದಿನ.

Leave a Reply

Your email address will not be published. Required fields are marked *