ನಮಸ್ತೆ ಪ್ರಿಯ ಓದುಗರೇ, ಈಗಿನ ದಿನಗಳಲ್ಲಿ ಬೆರಳುಗಳಿಗೆ ಉಂಗುರವನ್ನು ತೊಡುವುದು ಒಂದು ಫ್ಯಾಷನ್ ಆಗಿ ಬಿಟ್ಟಿದೆ. ಕೆಲವರು ಚಿನ್ನದ ಉಂಗುರವನ್ನು ಹಾಕಿಕೊಳ್ಳುತ್ತಾರೆ ಇನ್ನೂ ಕೆಲವರು ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಲು ಇಷ್ಟ ಪಡುತ್ತಾರೆ. ಕೋರೋಣ ಬಂದು ಜನರ ಜೀವನ ಪಾಡು ದಿಕ್ಕಾಪಾಲು ಮಾಡಿದೆ. ಚಿನ್ನದ ಬೆಲೆಯೂ ಗಗನಕ್ಕೆ ಏರಿದೆ. ಬಡವರಿಗೆ ಚಿನ್ನದ ಉಂಗುರವನ್ನು ಧರಿಸುವುದು ಒಂದು ಕನಸು ಆಗಿ ಉಳಿದು ಬಿಡುವ ಪರಿಸ್ಥಿತಿ ಬಂದು ಬಿಟ್ಟಿದೆ. ಆದರೆ ಚಿನ್ನದ ಉಂಗುರಿನ ಬೆನ್ನು ಹಿಂದೆ ಏಕೆ ಓಡಿ ಹೋಗಬೇಕು. ನಾವು ತಾಮ್ರದ ಉಂಗುರವನ್ನು ಧರಿಸಬಹುದು ಅಲ್ಲವೇ

ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ಬಂಗಾರದ ಉಂಗುರಕ್ಕಿಂತ ತಾಮ್ರದ ಉಂಗುರುವಿನ ಶ್ರೇಷ್ಟತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಜನರು ಅವರ ಅಂತಸ್ತಿಗೆ ತಕ್ಕ ಹಾಗೆ ಮತ್ತು ಸಮಾಜದಲ್ಲಿ ಅವರ ಗೌರವಕ್ಕೆ ತಕ್ಕ ಹಾಗೆ ಅವರ ಸ್ಥಿತಿಗತಿಗೆ ತಕ್ಕ ಹಾಗೆ ಅವರ ವೇಷಭೂಷಣ ಇರುತ್ತದೆ. ಕೆಲವು ಬೆಳ್ಳಿಯ ಆಭರಣವನ್ನು ಕಡಿಮೆ ಧರಿಸಿದರೆ ಇನ್ನೂ ಕೆಲವರು ಚಿನ್ನದ ಆಭರಣವನ್ನು ಹೆಚ್ಚಾಗಿ ಮೈ ಮೇಲೆ ಹಾಕಿಕೊಳ್ಳಲು ಇಷ್ಟ ಪಡುತ್ತಾರೆ ಅಲ್ಲವೇ?

ಅದರಲ್ಲಿ ಮಹಿಳೆಯರಲ್ಲಿ ಹೇಳ ತೀರದು ಅವರು ಮೂಗುತಿ ಬಳೆಗಳು ಒಲೆಗಳು ಗೆಜ್ಜೆಗಳನ್ನು ಧರಿಸುತ್ತಾರೆ. ಇದು ಅವರ ಸಾಮಾನ್ಯ ವೇಷಭೂಷಣ ಆಗಿರುತ್ತದೆ. ಅವರು ಹಾಕಿಕೊಳ್ಳುವ ಆಭರಣಗಳು ಶ್ರೀಮಂತರ ಜನರು ಚಿನ್ನದ ರೂಪದಲ್ಲಿ ಮಾಡಿಕೊಂಡು ಹಾಕಿಕೊಂಡರೆ ಇನ್ನೂ ಮಧ್ಯಮ ವರ್ಗದ ಜನರು ಬೆಳ್ಳಿಯಲ್ಲಿ ಮಾಡಿ ಹಾಕಿಕೊಳ್ಳುತ್ತಾರೆ ಇನ್ನೂ ಬಡವರು ಪಾಪ ಅವರು ತಾಮ್ರದ ರೂಪದಲ್ಲಿ ಮಾಡಿಕೊಂಡು ಆಭರಣವನ್ನು ಧರಿಸುತ್ತಾರೆ. ಇನ್ನೂ ಬೆಳ್ಳಿ ಚಿನ್ನವನ್ನು ಬಿಟ್ಟು ಬೇರೆ ಯಾವುದನ್ನು ಉಪಯೋಗ ಮಾಡಬೇಡಿ ಅಂತ ಯಾವುದೇ ಶಾಸ್ತ್ರದಲ್ಲಿ ಉಲ್ಲೇಖ ಮಾಡಿಲ್ಲ ಮಿತ್ರರೇ.

ನಾವು ಶಕ್ತಿಯ ಅನುಗುಣವಾಗಿ ಅಂತಸ್ತಿಗೆ ತಕ್ಕಂತೆ ನಮ್ಮ ಉಡುಗೆ ತೊಡುಗೆ ಇರಬೇಕು ಅಂತ ನಿಯಮವನ್ನು ಮಾಡಲಾಗಿದೆ. ಈ ತಾಮ್ರಕ್ಕೆ ಪಂಚಲೋಹದಲ್ಲಿ ವಿಶೇಷವಾದ ಸ್ಥಾನವಿದೆ. ಈಗ ತಾಮ್ರದ ಪಾತ್ರೆಯಲ್ಲಿ ನಾವು ನೀರು ಶೇಖರಣೆ ಮಾಡಿ ಕುಡಿಯುವುದರಿಂದ ನಮಗೆ ಬರುವ ಹಲವಾರು ಕಾಯಿಲೆಯಿಂದ ನಾವು ಮುಕ್ತಿಯನ್ನು ಪಡೆಯಬಹುದು ಅಂತ ತಿಳಿದಿದೆ. ಅದೇ ರೀತಿ ನಿಮ್ಮ ಕಿರು ಬೆರಳಿಗೆ ನೀವು ತಾಮ್ರದ ಉಂಗುರವನ್ನು ಧಾರಣೆ ಮಾಡಬೇಕು. ಇದು ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಜೊತೆಗೆ ನಿಮ್ಮ ದೇಹದ ಒತ್ತಡವು ಈ ತಾಮ್ರದ ಉಂಗುರದ ಮೇಲೆ ಬೀಳುವುದರಿಂದ ಅನಾರೋಗ್ಯ ಒಳಿತು ಆಗುತ್ತದೆ ಜೊತೆಗೆ ಗ್ರಹದೋಷ ನಿವಾರಣೆ ಆಗುತ್ತದೆ. ಮಾತ್ರೆಗಳನ್ನು ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳುವ ಬದಲು ತಾಮ್ರದ ಉಂಗುರವನ್ನು ಧರಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸೂಕ್ತವಾಗಿದೆ. ಹಾಗೆಯೇ ಅಶಾಂತಿ ಇಂದ ದೂರವಾಗಲು ಕೂಡ ಈ ಉಂಗುರವನ್ನು ಧರಿಸಬಹುದು ಇದು ರಕ್ತವನ್ನು ಶುದ್ಧೀಕರಿಸುತ್ತದೆ ಜೊತೆಗೆ ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮುಖ್ಯವಾಗಿ ಈ ರಾಶಿಯವರಿಗೆ ಮೇಷ ರಾಶಿ ತುಲಾ ರಾಶಿ ಕಟಕ ರಾಶಿ ಸಿಂಹ ರಾಶಿ. ಈ ರಾಶಿಯವರು ಈ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ಸಾಕಷ್ಟು ಲಾಭವನ್ನು ಪಡೆಯಬಹುದು ಮತ್ತು ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನೂ ಮಾರುಕಟ್ಟೆಯಲ್ಲಿ ಸಿಗುವ ತಾಮ್ರದ ಉಂಗುರವನ್ನು ತಂದು ಮೊದಲನೆಯ ದಿನ ಅದನ್ನು ಹಾಲಿನಲ್ಲಿ ಚೆನ್ನಾಗಿ ಅದ್ದು ಮಾರನೆಯ ದಿನ ನೀವು ಅದನ್ನು ಧರಿಸಬೇಕು. ಇದರಿಂದ ನಿಮ್ಗೆ ಸಾಕಷ್ಟು ಆರೋಗ್ಯವಾಗಿ ಲಾಭದಾಯಕ ಆಗುತ್ತದೆ.

Leave a Reply

Your email address will not be published. Required fields are marked *