ನಮಸ್ತೆ ಗೆಳೆಯರೇ, ನಮ್ಮ ಕರ್ನಾಟಕದ ಮುಖ್ಯ ಮಂತ್ರಿ ರಾಜ್ಯದಂತ ರೈತರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಆಸ್ತಿ ಅನ್ನುವುದು ಎಷ್ಟು ಇದ್ದರೂ ಸಾಲದು. ಕೆಲವರಿಗೆ ಇದೇ ವಿಷಯವಾಗಿ ಜಗಳಗಳು ಆಗಿ ಕೊಲೆ ಕೂಡ ಆಗುತ್ತದೆ. ಆದ್ರೆ ನಮ್ಮ ಮುಖ್ಯಮಂತ್ರಿ ಈ ತೀರ್ಮಾನವನ್ನು ಮಾಡಿ ರೈತರಿಗೆ ತುಂಬಾನೇ ಖುಷಿ ಕೊಡುವ ಸುದ್ಧಿಯನ್ನು ಘೋಷಣೆ ಮಾಡಿದ್ದಾರೆ. ನಿಮಗೆ ಸೇರುವ ಆಸ್ತಿಯೂ ನಿಮ್ಮ ತಂದೆ ಅಥವ ತಾತನ ಹೆಸರಿನಲ್ಲಿ ಇದ್ದರೆ ರಾಜ್ಯ ಸರ್ಕಾರದಿಂದ ಬಂಪರ್ ಆಫರ್ ಕೊಟ್ಟಿದ್ದಾರೆ.

ನೀವು ಉಳುಮೆ ಮಾಡುವ ಹೊಲ ಇರಲಿ ಗದ್ದೆ ಇರಲಿ ಅದು ನಿಮ್ಮ ಹೆಸರಿನಲ್ಲಿ ಇಲ್ಲದೆ ಇದ್ದರೆ ಅದನ್ನು ನಿಮ್ಮ ಹೆಸರಿಗೆ ನೇರವಾಗಿ ಬದಲಾವಣೆ ಮಾಡಿಕೊಳ್ಳುವ ಒಂದು ಬಂಗಾರದ ಅವಕಾಶವೂ ರಾಜ್ಯ ಸರ್ಕಾರ ಒದಗಿಸಿ ಕೊಟ್ಟಿದೆ. ಇನ್ನೂ ಆಸ್ತಿಯನ್ನು ನಿಮ್ಮ ಹೆಸರಿನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸುಲಭವಾದ ಕೆಲಸವೇ? ನಿಜಕ್ಕೂ ಇಲ್ಲ ಮಿತ್ರರೇ. ಈ ಸರ್ಕಾರದ ಕೆಲಸಗಳು ನಿಜಕ್ಕೂ ಆದರೂ ಕೂಡ ತುಂಬಾನೇ ಸಮಯವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ತುಂಬಾನೇ ಆಧಾರಿತ ಪತ್ರಗಳನ್ನು ಇದಕ್ಕೆ ಲಗತ್ತಿಸಬೇಕಾಗುತ್ತದೆ.

ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಯಾಕೆ ಆಗುವುದಿಲ್ಲ ಅಂದ್ರೆ ಹಿಂದಿನ ಕಾಲದಲ್ಲಿ ಸತ್ತ ಮನುಷ್ಯನ ಮರಣ ಪ್ರಮಾಣ ಪತ್ರ ಸಿಗುವುದಿಲ್ಲ ಜನನ ಪತ್ರ ಮತ್ತು ಆಸ್ತಿಯನ್ನು ವರ್ಗಾವಣೆ ಮಾಡಲು ಬೇಕಾಗುವ ದಾಖಲೆಗಳು ಸಿಗದೇ ಇರುವುದು ಇದಕ್ಕೆ ತುಂಬಾನೇ ಬಲವಾದ ಕಾರಣಗಳು ಆಗಿರುತ್ತವೆ. ಈ ಕಾರಣದಿಂದಲೇ ರೈತರು ಅವರ ಸ್ವಂತ ಜಮೀನು ಅಥವಾ ಭೂಮಿಯನ್ನು ತಮ್ಮ ಹೆಸರಿನಲ್ಲಿ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ರೈತರ ಗಂಭೀರವಾದ ಸಮಸ್ಯೆಯನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರ ಮುಂದೆ ಬಂದಿದೆ.

ಅಂದ್ರೆ ನಿಮ್ಮ ಪೂರ್ವಜರ ಯಾವುದೇ ದಾಖಲೆಗಳು ಸಿಗದೇ ಇದ್ದರೂ ಕೂಡ ಸುಲಭವಾಗಿ ನಿಮ್ಮ ಉಳುಮೆ ಮಾಡುವ ಭೂಮಿಯನ್ನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡು ರೈತರಿಗೆ ಇರುವ ಕರ್ನಾಟಕ ಸರ್ಕಾರದಿಂದ ಒದಗಿಸುವ ಎಲ್ಲ ಬಗೆಯ ಸುವರ್ಣ ಅವಕಾಶವನ್ನು ಪಡೆದುಕೊಳ್ಳಬಹುದು ಅಂತ ಘೋಷಣೆ ಮಾಡಲಾಗಿದೆ. ಅಂದ್ರೆ ಒಂದು ಖಾತೆಯನ್ನು ರಚಿಸುವುದರ ಮೂಲಕ ಈ ಅವಕಾಶವನ್ನು ಪಡೆಯಬಹುದು. ಆ ಖಾತೆಯ ಹೆಸರು ಪೌತಿ ಖಾತೆ.

ಇದರಲ್ಲಿ ನಿಮ್ಮ ತಂದೆ ಅಜ್ಜ ಮುತ್ತಜ್ಜನ ಭೂಮಿಗೆ ಸಂಭಂದ ಪಟ್ಟ ಯಾವುದೇ ದಾಖಲೆಗಳು ಸಿಗದೇ ಇದ್ದರೂ ಕೂಡ ನೀವು ಪ್ರಸ್ತುತ ರೈತನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬಹುದು ಅಂತ ಸರ್ಕಾರ ಘೋಷಣೆ ಮಾಡಿದೆ. ಇದರ ಜೊತೆಗೆ ಕಿಸಾನ್ ಸಮ್ಮಾನ ಯೋಜನೆ, ವಿಮೆ ಬೆಲೆ ಇನ್ನಿತರ ಸರ್ಕಾರದ ಯಾವುದೇ ಯೋಜನೆಗಳು ನಿಜವಾದ ಒಡೆಯನಾದ ರೈತನಿಗೆ ಸಿಗುತ್ತವೆ. ಅದಕ್ಕಾಗಿ ಈ ಖಾತೆಯನ್ನು ತೆರೆಯಲಾಗಿದೆ. ಪಿತ್ರಾರ್ಜಿತ ಆಸ್ತಿಯನ್ನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಲು ಈ ಪೌತೀ ಆಂದೋಲನ ಖಾತೆಯನ್ನು ತೆರೆಯಲಾಗಿದೆ.

ಪೂರ್ವಜರ ಆಸ್ತಿಯನ್ನು ಪಡೆಯಲು ಸಾಧ್ಯವಾಗದೆ ಇರುವುದಕ್ಕೆ ಕಾರಣ ದಾಖಲೆಗಳ ಲಗತ್ತಿನ ಸಮಸ್ಯೆ. ಪೂರ್ವಜರ ಪ್ರಮಾಣ ಪತ್ರವನ್ನು ಪಡೆಯಲು ಕಾನೂನು ಮೂಲಕ ಸಹಾಯ ಮಾಡಲಾಗುವುದು. ನಂತ್ರ ಜಿಲ್ಲೆಯ ಎಲ್ಲಾ ಹೋಬಳಿ ಭಾಗಗಳಿಗೆ ವಿಸ್ತಾರ ಮಾಡಲಾಗುವುದು. ರಾಜ್ಯ ಸರ್ಕಾರ ಘೋಷಣೆ ಮಾಡಿದ ಈ ಖಾತೆಯಿಂದ ಬಂದ ಅರ್ಜಿಯ ಸಂಖ್ಯೆಯೂ 2.71ಲಕ್ಷ ಅಂತ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ನೀವು ಕೂಡ ರೈತರ ಮಕ್ಕಳಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ಶೇರ್ ಮಾಡಿ ಪೌತಿ ಖಾತೆಯನ್ನು ತೆಗೆಸಿ ನಿಮ್ಮ ಆಸ್ತಿಯ ವಾರಸುದಾರ ಆಗಿ. ಈ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.