ಸಿಲಿಕಾನ್ ಸಿಟಿಯ ಮುಖ್ಯ ಏರಿಯಾದಲ್ಲಿರುವ Indian oil ಪೆಟ್ರೋಲ್ ಬಂಕ್‌ನಲ್ಲಿ ನಡೆದಿದ್ದು, ಪೆಟ್ರೋಲ್ ಪ್ರಮಾಣದಲ್ಲಿ ಗ್ರಾಹಕರಿಗೆ ಮೋಸಗೊಳಿಸುತ್ತಿರುವಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಪ್ರತಿನಿತ್ಯವೂ ಮೋಸಕ್ಕೆ ಒಳಗಾಗುತ್ತಿದ್ದ ಯುವಕರು ಇದನ್ನು ಹೇಗಾದರೂ ಮಾಡಿ ಪತ್ತೆಹಚ್ಚಲೆ ಬೇಕು ಅಂತ ಪ್ಲಾನ್ ಮಾಡಿ ಮೊದಲು 130 ರೂ ಹಣ ನೀಡಿ ಎರಡು ಲೀಟರ್ ಪೆಟ್ರೋಲ್ ಬೈಕ್ -ಗೆ ಹಾಕಲು ಹೇಳಿದ್ದಾರೆ. ಬಂಕ್ ಹುಡುಗ ನಂಬರ್ ಒತ್ತಿ ಪೆಟ್ರೋಲ್ ಹಾಕಲು ಬಂದಾಗೆ ಅದನ್ನು ತಡೆದು 2 ಲೀಟರ್ ಬಾಟಲಿಗೆ ಹಾಕಲು ಹೇಳಿದ್ದಾರೆ, ಅಲ್ಲಿ ಎರಡು ಲೀಟರ್ ಬಿಳ್ಳಬೇಕಾದ ಪೆಟ್ರೋಲ್ ಬರಿ ಅರ್ಧ ಲೀಟರ್ ಬಿದ್ದಿದೆ. ಇದನ್ನು ಕಂಡ ಜನರಿಗೆ ಒಂದು ನಿಮಿಷ ದಿಕ್ಕುತಪ್ಪಿದೆ. ಪ್ರತಿನಿತ್ಯವೂ ಎಷ್ಟೊಂದು ಮೋಸ ಆಗುತ್ತಿದೆ ದುಡಿದ ಹಣವನ್ನು ಪಟ್ರೋಲ್-ಗೆ ಹಾಕಿ ಮೋಸ ಹೋಗುತ್ತಿದೇವೆ ಎಂದು ಪಂಪ್ ಮಾಲಿಕರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತೆ ಮೋಸ: ಕಳೆದ ತಿಂಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಎಸ್‌ಐಟಿ ಅಧಿಕಾರಿಗಳು ಗ್ರಾಹಕರ ದೂರಿನ ಮೇಲೆ ನಡೆಸಿದ ದಾಳಿ ವೇಳೆ ಪೆಟ್ರೋಲ್ ಬಂಕ್‌ಗಳಲ್ಲಿ ನೂರಾರು ರಿಮೋಟ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ರಿಮೋಟ್ ಮೂಲಕ ಪೆಟ್ರೋಲ್ ಬಂಕ್‌ನ ಫ್ಯೂಲ್ ಯೂನಿಟ್‌ಗಳನ್ನು ನಿಯಂತ್ರಿಸುವ ಮಾಲೀಕರು ಬೈಕ್ ಸವಾರರಗಿಂತ 1 ಸಾವಿರ, 2 ಸಾವಿರ ರೂಪಾಯಿ ಲೆಕ್ಕದಲ್ಲಿ ಡೀಸೆಲ್, ಪೆಟ್ರೋಲ್ ತುಂಬಿಸುವ ಕಾರು ಮಾಲೀಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೋಸ ಮಾಡುತ್ತಾರೆ.

ಬೈಕ್‌ಗಳಿಗೆ ಪೆಟ್ರೋಲ್ ತುಂಬಿಸುವಾಗ ಮೋಸ ಮಾಡಿದ್ದಲ್ಲಿ ಮಾಲೀಕರಿಗೆ ಇದು ಗೊತ್ತಾಗಬಹುದಾದ ಎನ್ನುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನ ತುಂಬಿಸುವಾಗ ಮಾತ್ರ ರಿಮೋಟ್ ಕಂಟ್ರೋಲ್ ಬಳಕೆ ಮಾಡಿ ಇಂಧನ ಪ್ರಮಾಣದಲ್ಲಿ ಕಡಿತ ಮಾಡುತ್ತಾರೆ. ಅದು ಹೇಗೆ ಅಂದ್ರೆ, ನೀವು ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿದ್ದರೆ ನಿಮ್ಮ ವಾಹನದಲ್ಲಿ ಕೇವಲ 900ಮಿ. ಲೀಟರ್ ಮಾತ್ರ ತುಂಬಿಕೊಳ್ಳುತ್ತದೆ.

ಆದರೆ ಮೀಟರ್‌ನಲ್ಲಿ ಮಾತ್ರ 1 ಲೀಟರ್ ಹಾಕಿದ್ದಾಗಿ ಲೆಕ್ಕ ತೋರಿಸುತ್ತದೆ. ಕರ್ನಾಟಕದಲ್ಲೂ ಸುಮಾರು 2 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಈ ರೀತಿಯಾಗಿ ಮೋಸ ನಡೆಯುತ್ತಿದ್ದು ಇದರ ಹಿಂದೆ ರಾಜಕೀಯ ನಾಯಕರು ಇರುವುದು ಸತ್ಯವಾಗಿದೆ. ಆದ ಕಾರಣ ಪೆಟ್ರೋಲ್ ಪಂಪ್-ನಲ್ಲಿ ಅನುಮಾನ ಬಂದರೆ ಕಾಲಿ ಬಾಟಲಿಯಲ್ಲಿ ತುಂಬಿಸಿ ಪರೀಕ್ಷಿಸಿ, ಇದರ ವಿರುದ್ದ ದೂರು ನೀಡಿ. ಸಂಗ್ರಹ ಮಾಹಿತಿ.

Leave a Reply

Your email address will not be published. Required fields are marked *