ನಮಸ್ತೆ ನಮ್ಮ ಪ್ರಿಯ ಓದುಗರೇ, ದಾಂಪತ್ಯ ಜೀವನದ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತದೆ. ಪ್ರತಿಯೊಂದು ವಿಚಾರವೂ ಸಂಬಂಧವನ್ನು ಗಟ್ಟಿ ಮಾಡುತ್ತದೆ ಹಾಗೂ ಸಂಬಂಧವನ್ನು ಕೆಡಿಸುವ ಶಕ್ತಿಯನ್ನು ಸಹ ಹೊಂದಿದೆ ಎಂದರೆ ತಪ್ಪಾಗಲಾರದು. ದಂಪತಿಗಳ ನಡುವೆ ಪರಿಣಾಮ ಬೀರುವ ಅಂಶಗಳಲ್ಲಿ ವಯಸ್ಸಿನ ಅಂತರವೂ ಒಂದು. ಮೊದಲಿನಿಂದಲೂ ವಯಸ್ಸಿನ ಅಂತರ ಎಂಬುದು ವಿಭಿನ್ನ ರೀತಿಯಲ್ಲಿ ಸಂಬಂಧ ಉಳಿಯಲು ಮತ್ತು ಹಾಳಾಗಲು ಕಾರಣವಾಗಿದೆ. ಇದು ಪ್ರತಿಯೊಂದು ದಂಪತಿಗಳ ನಡುವೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಕೆಲವರಿಗೆ ಕಡಿಮೆ ವಯಸ್ಸಿ ಅಂತರ ಸರಿಯೆನಿಸಿದರೆ, ಇನ್ನೂ ಕೆಲವರಿಗೆ ಹೆಚ್ಚಿನ ವಯಸ್ಸಿನ ಅಂತರ ಉತ್ತಮ ಎಂದು ಅನಿಸುತ್ತದೆ. ಆದರೆ, ದಂಪತಿಗಳ ನಡುವೆ ಹೊಂದಾಣಿಕೆ, ಪ್ರೀತಿ ಹಾಗೂ ಅರ್ಥ ಮಾಡಿಕೊಳ್ಳುವ ಗುಣದ ಆಧಾರದ ಮೇಲೆ ವೈವಾಹಿಕ ಜೀವನದ ಸಾರ ನಿಂತಿದೆ ಎಂಬುದು ಬಹಳ ಮುಖ್ಯ. ಆದರೆ, ಯಶಸ್ವಿ ದಾಂಪತ್ಯಕ್ಕೆ ವಯಸ್ಸಿನ ಅಂತರ ಎಷ್ಟಿರಬೇಕು? ಎಷ್ಟಿದ್ದರೆ, ಸಮಸ್ಯೆಗಳು ಕಡಿಮೆ ಎಂಬುದು ಇಲ್ಲಿದೆ. ಕೆಲವು ದಂಪತಿಗಳಲ್ಲಿ 20 ವರ್ಷಗಳ ಅಂತರವಿರುತ್ತದೆ. ಹಿಂದಿನ ಸಮಯದಲ್ಲಿ ಪೋಷಕರು ಒಳ್ಳೆಯ ವರ ಸಿಗುತ್ತಿದೆ ಎಮದು ಚಿಕ್ಕ ಮಗಳಿಗೆ ದೊಡ್ಡ ವಯಸ್ಸಿನ ವರನಿಗೆ ಮದುವೆ ಮಾಡುತ್ತಿದ್ದರು. ಆದರೆ ಇದು ದಂಪತಿಗಳಾಗುವುದಕ್ಕೆ ಉತ್ತಮ ವಯಸ್ಸಿನ ಅಂತರವಲ್ಲ ಎನ್ನಲಾಗುತ್ತದೆ. 20 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಂತರವಿರುವ ಅನೇಕ ಪ್ರಸಿದ್ಧ ಜೋಡಿಗಳು ಇದ್ದರೂ, ಅವರ ನಡುವೆ ವ್ಯತ್ಯಾಸಗಳು ತುಂಬಾ ಹೆಚ್ಚಿರುತ್ತವೆ. ಅವರ ನಡುವೆ ಹೆಚ್ಚಿನ ಜಗಳಗಳು, ಗೊಂದಲಗಳು ಉಂಟಾಗುತ್ತದೆ. ಗುರಿಗಳು, ಮಹತ್ವಾಕಾಂಕ್ಷೆಗಳು ಮತ್ತು ಅಭಿಪ್ರಾಯಗಳಲ್ಲಿ ದೊಡ್ಡ ಬದಲಾವಣೆ ಇರುತ್ತದೆ. ಭಿನ್ನಾಭಿಪ್ರಾಯ ಹೆಚ್ಚಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಕ್ಕಳನ್ನು ಪಡೆಯುವ ವಿಚಾರವಾಗಿ ಸಮಸ್ಯೆ ಉಂಟಾಗುತ್ತದೆ. ವಯಸ್ಸು ಹೆಚ್ಚಿರುವ ಸಂಗಾತಿಯು ಆದಷ್ಟು ಬೇಗ ಮಕ್ಕಳನ್ನು ಹೊಂದಲು ಬಯಸಬಹುದು ಆದರೆ ಕಿರಿಯ ಸಂಗಾತಿಯು ಈ ಬಗ್ಗೆ ಅಷ್ಟೊಂದು ಉತ್ಸುಕರಾಗಿರುವುದಿಲ್ಲ. ಅವರ ಆಲೋಚನಾ ಮಟ್ಟದಲ್ಲಿನ ವ್ಯತ್ಯಾಸವು ದೊಡ್ಡ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ.

10 ವರ್ಷಗಳ ವಯಸ್ಸಿನ ಅಂತರ: ಸಂಗಾತಿಗಳ ನಡುವೆ ಸಾಕಷ್ಟು ಪ್ರೀತಿ ಮತ್ತು ಹೊಂದಾಣಿಕೆ ಇದ್ದರೆ 10 ವರ್ಷಗಳ ವಯಸ್ಸಿನ ಅಂತರವಿದ್ದರೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಹಲವಾರು ದಂಪತಿಗಳು 10 ವರ್ಷದ ಅಂತರವಿದ್ದರೂ ಸಹ ಸುಖವಾಗಿರುವ ಅನೇಕ ದಂಪತಿಗಳಿದ್ದಾರೆ. ಅವರು ತಮ್ಮ ಜೀವನದ ಗುರಿಗಳು, ಮಹತ್ವಾಕಾಂಕ್ಷೆಗಳು ಮತ್ತು ದೃಷ್ಟಿಕೋನಗಳನ್ನು ಪರಸ್ಪರ ಅರ್ಥಮಾಡಿಕೊಂಡರೆ, 10 ವರ್ಷಗಳ ಅಂತರವು ಯಾವುದೇ ತೊಂದರೆ ಮಾಡುವುದಿಲ್ಲ. ಪ್ರತಿಯೊಂದು ಸಂಬಂಧದಲ್ಲಿ ಅರ್ಥ ಮಾಡಿಕೊಳ್ಳುವ ಮನೋಭಾವವೇ ಸಂಬಂಧ ಚನ್ನಾಗಿರುತ್ತದೆ. ಆದರೆ, ಸಾಮಾನ್ಯ ದಂಪತಿಗಳಿಗೆ, ಇದು ಸ್ವಲ್ಪ ಕಷ್ಟವಾಗಬಹುದು. ಕೆಲವೊಮ್ಮೆ, ವಯಸ್ಸಿನಲ್ಲಿ ಚಿಕ್ಕವರಿರುವವರು, ವಯಸ್ಸಾದವರ ಬುದ್ದಿಯ ಮಟ್ಟಕ್ಕೆ ಸರಿಹೊಂದುವುದಿಲ್ಲ. ಅದು ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನಲಾಗುತ್ತದೆ.

5-7 ವರ್ಷಗಳ ವಯಸ್ಸಿನ ಅಂತರ: ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವಿನ ಅಂತರ 5 ರಿಂದ 7 ವರ್ಷ ಇರುತ್ತದೆ. ಹೆಣ್ಣು ಮಕ್ಕಳು ತಮಗಿಂತ ಹೆಚ್ಚು ವಯಸ್ಸಿನವರನ್ನು ಮದುವೆಯಾಗಲು ಇಷ್ಟಪಡುವುದಿಲ್ಲ. ಈ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳಲ್ಲಿ ಕಡಿಮೆ ಭಿನ್ನಾಭಿಪ್ರಾಯಗಳು ಉಂಟು ಬರುತ್ತದೆ. ಅಲ್ಲದೇ ಅವರ ನಡುವೆ ವಾದಗಳು ಕಡಿಮೆಯಾಗುತ್ತದೆ. ಇಂತಹ ವೈವಾಹಿಕ ಜೀವನದಲ್ಲಿ ಒಬ್ಬರು ಯಾವಾಗಲೂ ಪ್ರಬುದ್ಧರಾಗಿರುತ್ತಾರೆ. ಅವರು ಆ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಹಾಗೂ ಸಂಬಂಧದಲ್ಲಿ ಬಿರುಕು ಮೂಡದಂತೆ ಕಾಪಾಡುತ್ತಾರೆ. ಈ ವಯಸ್ಸಿನ ಅಂತರವು ಇತರರಿಗಿಂತ ಹೆಚ್ಚು ಸೂಕ್ತ ಎನ್ನಲಾಗುತ್ತದೆ. ಏಕೆಂದರೆ ಇದು ದಂಪತಿಗಳ ನಡುವೆ ಸ್ಥಿರತೆಯನ್ನು ಸಾಧಿಸಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಮಾಹಿತಿ ಇಷ್ಟವಾದಲ್ಲಿ ನೀವೂ ಅನುಸರಿಸಿ ಇತರರಿಗೂ ತಿಳಿಸಿ. ಶುಭದಿನ.

Leave a Reply

Your email address will not be published. Required fields are marked *