ಹೌದು ಮನೆಯಲ್ಲೇ ಇರುವ ಎಷ್ಟೋ ಮದ್ದುಗಳಿಂದ ಅದೆಷ್ಟೋ ರೋಗಗಳನ್ನು ಹೋಗಲಾಡಿಸಬಹುದು ಹಾಗಾಗಿ ಹಳ್ಳಿಗಳಲ್ಲಿ ಎಷ್ಟೋ ರೋಗಗಳನ್ನು ತಮ್ಮ ಮನೆಯಲ್ಲಿರುವ ಮನೆಮದ್ದುಗಳಿಂದ ವಾಸಿ ಮಾಡುತ್ತಾರೆ.

ಅಂಗೈ ಮತ್ತು ಅಂಗಾಲು ಹೆಚ್ಚಾಗಿ ಬೆವರುವ ಸಮಸ್ಯೆ ಕೆಲವರಲ್ಲಿ ಮಾತ್ರ ಕಂಡುಬರುತ್ತದೆ. ಹೀಗೆ ಬೆವರು ಬರುತ್ತದೆ ಎಂದು ನೀವು ಆತಂಕಕ್ಕೆ ಒಳಗಾಗಬೇಡಿ, ಈ ರೀತಿ ಆಗುವುದು ಒಂದು ಬೆವರು ವ್ಯಾದಿ. ಈ ರೀತಿಯ ಬೆವರು ಇದೊಂದು ವ್ಯಾಧಿಯಾಗಿರುವುದರಿಂದ ಈ ರೀತಿ ಬೆವರು ಬರುವವರು ತಮ್ಮ ಮನೆಯಲ್ಲಿಯೇ ಈ ರೋಗಕ್ಕೆ ಔಷದಿ ಕಂಡುಕೊಳ್ಳಬಹುದಾಗಿದೆ.

ಬದನೆ ಹೋಳುಗಳ ಜೊತೆಗೆ ಗಸಗಸೆ ರುಬ್ಬಿ ಕೈಗೆ ಕಾಲಿಗೆ ಮೈಗೆ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡುತ್ತಾ ಇದೇ ರೀತಿ ನಿಲ್ಲುವವರೆಗೂ ಮಾಡುವುದರಿಂದ ಗುಣವಾಗುತ್ತದೆ. ನೆಲ್ಲಿರಸ ರಾತ್ರಿ ಕೈ ಕಾಲು ದೇಹಗಳಿಗೆ ಸವರಿ,ಬೆಳಿಗ್ಗೆ ಸ್ನಾನ ಮಾಡಬೇಕು. ಇದನ್ನು ಬೆವರು ನಿಲ್ಲುವವರೆಗೂ ಮಾಡಬೇಕು.

ಅಳಲೆಕಾಯಿಯ ಚೂರ್ಣವನ್ನು ನೀರಿನಲ್ಲಿ ನೆನಸಿ ಕೈ, ಕಾಲು, ಮೈ ಗೆ ಚೆನ್ನಾಗಿ ಲೇಪಿಸಿ ಬೆಳಿಗ್ಗೆ ಸ್ನಾನ ಮಾಡುವುದರಿಂದ ಬೆವರುವುದು ನಿಂತು ಹೋಗುತ್ತದೆ.

Leave a Reply

Your email address will not be published. Required fields are marked *