ನಮಸ್ತೆ ಪ್ರಿಯ ಓದುಗರೇ, ಕೆಲವೊಮ್ಮೆ ಸತತವಾಗಿ ಸೀನು ಬರುತ್ತಾ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ಅಂದರೆ ಕರೋನ ಬಂದ ನಂತರ ನಾವು ಒಮ್ಮೆ ಆದರೂ ಸೀನಿದರೋ ಕೂಡ ಜನರು ನಮ್ಮ ಕಡೆ ತಿರುಗಿ ನೋಡುವ ಪರಿಸ್ಥಿತಿ ಉದ್ಭವ ಆಗಿದೆ. ಆದ್ರೆ ಹಲವಾರು ಬಾರಿ ನಿಮಗೆ ಸೀನು ಬರುತ್ತಿದ್ದರೆ ಇದು ಮುಜುಗರಕ್ಕೆ ಕೂಡ ಉಂಟು ಮಾಡುತ್ತದೆ. ಈ ಸೀನನ್ನು ನಾವು ತಡೆಗಟ್ಟಲು ಬರುವುದಿಲ್ಲ. ಒಂದುವೇಳೆ ತದೆಗಟ್ಟಿದರೆ ಹಲವಾರು ರೀತಿಯ ಸಮಸ್ಯೆಗಳು ಕೂಡ ಎದುರಾಗಬಹುದು. ಇನ್ನೂ ಸತತವಾಗಿ ಸೀನು ಬರುತ್ತಾ ಇದದ್ರೆ ನಾವು ಮನೆಯಲ್ಲಿ ಇರುವಂತಹ ವಸ್ತುಗಳನ್ನು ಬಳಸಿಕೊಂಡು ಇದನ್ನು ಯಾವ ರೀತಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೋಡೋಣ. ಸ್ನೇಹಿತರೆ ಸೀನು ಸಾಮಾನ್ಯವಾಗಿ ಕೆಲವು ವಾಸನೆಗಳಿಂದ ಅಥವಾ ಶೀತ, ಅಲರ್ಜಿ ಹಾಗೂ ಹೊಗೆ ಇಂದ ಸೀನು ಬರಬಹದು. ಸತತವಾಗಿ ಸೀನು ಬರುತ್ತಾ ಇದ್ದರೆ, ಕೆಲವೊಂದಿಷ್ಟು ಮನೆ ಮದ್ದುಗಳನ್ನು ಉಪಯೋಗಿಸಿ ಇದನ್ನು ನಿಲ್ಲಿಸಬಹುದು. ಸೀನನ್ನೂ ನಿಲ್ಲಿಸಲು ನೀಲಗಿರಿ ಎಣ್ಣೆ ಬಹಳ ಉಪಯುಕ್ತ ಆಗಿದೆ. ನೀಲಗಿರಿ ಎಣ್ಣೆ ಕೆಲ ಹನಿಗಳನ್ನು ಕುಡಿಯುವ ನೀರಿನಲ್ಲಿ ಹಾಕಿ ಅದರಿಂದ ಬರುವ ಹಬೆಯನ್ನು ತೆಗೆದುಕೊಳ್ಳುವುದರಿಂದ ಸೀನು ಬೇಗ ನಿಲ್ಲುತ್ತದೆ. ಇದಲ್ಲದೆ ಈ ಎಣ್ಣೆಯ ಹನಿಗಳನ್ನು ನಿಮ್ಮ ಕರವಸ್ತ್ರದ ಮೇಲೆ ಹಾಕಿ ಅದರ ವಾಸನೆಯನ್ನು ಕುಡಿಯುವುದರಿಂದ ಸತತವಾಗಿ ಬರುವ ಸಿನುಗಳಿಂದ ದೂರ ಮಾಡಬಹುದು.

ಇನ್ನೂ ಜೇನುತುಪ್ಪ ಕೂಡ ನಮ್ಮ ದೇಹದಲ್ಲಿ ಇರುವಂತಹ ಅಲರ್ಜಿ ಯಾನ್ನ ದೂರ ಮಾಡಲು ಸಹಾಯ ಮಾಡುತ್ತದೆ. ಶೀತ ಮತ್ತು ಜ್ವರಕ್ಕೆ ಸಂಭಂದ ಪಟ್ಟಂತೆ ಸೀನಿನ ಸಮಸ್ಯೆಗೂ ಕೂಡ ಜೇನುತುಪ್ಪ ಸಹಾಯ ಮಾಡುತ್ತದೆ. ಅಲ್ಲರ್ಜಿಯ ಪ್ರತಿಕ್ರಿಯೆಯ ಸಂದರ್ಭದಲ್ಲಿ ಜೇನುತುಪ್ಪ ವೂ ಒಂದು ಉತ್ತಮವಾದ ಆಯ್ಕೆ ಆಗಿದೆ. ನಮ್ಮ ಪರಿಸರದಲ್ಲಿ ಇರುವಂತಹ ಅಲರ್ಜಿ ಗೆ ಹೊಂದಿಕೊಳ್ಳಲು ಜೇನುತುಪ್ಪ ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. ಒಂದು ಟೀ ಚಮಚದಷ್ಟು ಜೇನುತುಪ್ಪವನ್ನು ನಾವು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿರುವ ಅಲರ್ಜಿ ಗಳು ದೂರ ಆಗಿ ಉರಿಯೂತವನ್ನು ಸಹ ಕಡಿಮೆ ಮಾಡಿ ತ್ವರಿತ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಜೇನುತುಪ್ಪ ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದಲ್ಲಿ ಇರುವಂಥ ಎಲ್ಲಾ ರೀತಿಯ ಅಲರ್ಜಿ ಗಳು ದೂರಾಗಿ ಸೀನಿನ ಸಮಸ್ಯೆ ದೂರಾಗುತ್ತದೆ. ಇನ್ನೂ ಸತತವಾಗಿ ಸೀನು ಬರುತ್ತಾ ಇದ್ದರೆ ಅದಕ್ಕೆ ಇನ್ನೊಂದು ಉತ್ತಮ ಪರಿಹಾರ ಅಂದ್ರೆ ಶುಂಠಿ ರಸ ಹಾಗೂ ಬೆಲ್ಲ. ಒಂದು ಎರೆಡು ಮೂರು ಇಂಚು ಶುಂಠಿ ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ಬೇರ್ಪಡಿಸಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಸೇವನೆ ಮಾಡಿದರೆ ಬಹುಶಃ ಸೀನಿನ ಸಮಸ್ಯೆ ಗೆ ಬೇಗನೆ ಪರಿಹಾರ ಸಿಗುತ್ತದೆ. ಇನ್ನೂ ಬಿಸಿ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯುವದರಿಂದ ಸೀನಿನ ಸಮಸ್ಯೆ ಆಗಿರಬಹುದು ಅಥವಾ ಇನ್ನಿತರ ಅಲರ್ಜಿ ಸಮಸ್ಯೆಗಳು ಬೇಗನೆ ನಿವಾರಣೆ ಆಗಲು ಸಹಾಯ ಆಗುತ್ತದೆ.

ಇನ್ನೂ ವಿಟಮಿನ್ ‘ಸಿ’ ಹೇರಳವಾಗಿ ಇರುವ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ‘ಸಿ’ ವಿಟಮಿನ್ ಇರುವಂಥ ಹಣ್ಣುಗಳಾದ ಕಿತ್ತಳೆ ಹಣ್ಣು, ನಿಂಬೆ ಹಣ್ಣು ಗಳನ್ನ ಹೆಚ್ಚಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಉತ್ತಮವಾದ ಪೌಷ್ಟಿಕಾಂಶ ಸಿಗುತ್ತದೆ ಜೊತೆಗೆ ಇವುಗಳು ಶಕ್ತಿಯುತವಾದ ಉತ್ಕರ್ಷಗಳು ಆಗಿವೆ. ಇದರಿಂದ ಅಲರ್ಜಿ ದೂರಾಗುವುದರ ಜೊತೆಗೆ ನಮ್ಮ ದೇಹದ ಶಕ್ತಿ ಯುಕ್ತಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಶೀತ ಮತ್ತು ಇತರೆ ಅಲರ್ಜಿಗಳು ಉಂಟು ಮಾಡುವ ಅನಗತ್ಯ ಬ್ಯಾಕ್ಟೀರಿಯಾ ಗಳ ವಿರುದ್ಧ ದೇಹವು ಹೋರಾಡಲು ಸಹ ಸಹಾಯ ಮಾಡುತ್ತದೆ. ಇನ್ನೂ ಎಷ್ಟೇ ಮನೆ ಮದ್ದು ಪ್ರಯೋಗ ಮಾಡಿದರೂ ನಿಮ್ಮ ಸೀನು ನಿಲ್ಲುತ್ತಿಲ್ಲ ಎಂದರೆ ನೀವು ಇರುವಂಥ ಸ್ಥಳ ಶುಚಿಯಾಗಿ ಇರದೇ ಇದ್ದರೆ ಅದರಿಂದ ನಿಮಗೆ ಪದೇ ಪದೇ ಧೂಳಿನ ಅಲರ್ಜಿ ಆಗಿ ಸೀನು ಬರುತ್ತಾ ಇರುತ್ತದೆ. ಇನ್ನೂ ಈವು ಮಲಗುವಂತ ಸ್ಥಳ ಕೂಡ ಶುಭ್ರವಾಗಿ ಕ್ಲೀನ್ ಆಗಿ ಇರಬೇಕು. ಅದ್ರಲ್ಲೂ ನಿಮ್ಮ ಥಡೀ ಧೂಳು ರಹಿತವಾಗಿ ಇರದೇ ಇದ್ದರೆ ನಿಮಗೆ ಸೀನು ಖಂಡಿತವಾಗಿ ಕೂಡ ನಿಲ್ಲುವುದಿಲ್ಲ. ಹಾಗಾಗಿ ವಾರಕ್ಕೆ ಒಮ್ಮೆ ಆದ್ರೂ ಕೂಡ ನಿಮ್ಮ ಹಾಸಿಗೆಯನ್ನು ಹೊಗೆದು ಶುಭ್ರ ಮಾಡುತ್ತಾ ಇರಿ. ಯಾಕಂದ್ರೆ ಪ್ರತಿನಿತ್ಯ ನೀವು 7-8 ಗಂಟೆಗಳ ಕಾಲ ಅದೇ ಹಾಸಿಗೆ ಮೇಲೆ ಮಲಗುತ್ತಿರ ಇಂಥ ಸಂದರ್ಭದಲ್ಲಿ ನಿಮ್ಮ ಹಾಸಿಗೆ ಧೂಳಿನಿಂದ ಕೂಡಿದ್ದರೆ ನಿಮಗೆ ಅಲರ್ಜಿ ಉಂಟಾಗಿ ಸೀನು ಬಂದೆ ಬರುತ್ತದೆ. ಇನ್ನೂ ನೀವು ಮನೆಯಿಂದಲೇ ಆನ್ಲೈನ್ ಕೆಲಸ ಮಾಡುತ್ತೀರಾ ಎಂದರೆ ಇಡೀ ದಿನ ನೀವು ಅದೇ ಬೆಡ್ ಮೇಲೆ ಇರುತ್ತೀರಿ ಹಾಗಾಗಿ ನಿಮ್ಮ ಬೆಡ್ ಆನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ ಆಗಿರುತ್ತದೆ. ನೋಡಿದ್ರಲ್ವ ಸ್ನೇಹಿತರೆ ಪದೇ ಪದೇ ಸೀನು ಬಂದರೆ ಏನು ಮಾಡಿದರೆ ಒಳ್ಳೆಯದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *