ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ದೇವರ ಪೂಜೆಯನ್ನು ಮಾಡುವುದು ಒಳ್ಳೆಯದಾಗಬೇಕು, ದೇವರ ಅನುಗ್ರಹದಿಂದ ಜೀವನದಲ್ಲಿ ಎಲ್ಲಾ ರೀತಿಯಿಂದ ಚೆನ್ನಾಗಿ ಇರಬೇಕು ಎಂಬ ಉದ್ದೇಶಕ್ಕಾಗಿ, ಆದರೆ ದೇವರ ಪೂಜೆಯನ್ನು ಮಾಡಬೇಕಾದರೆ ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ಅಥವಾ ಪರಿಸ್ಥಿತಿಗೆ ಒಳಗಾಗಿ ಮಾಡುವಂತಹ ಕೆಲವು ತಪ್ಪುಗಳು ನಮಗೆ ಪೂಜೆಯ ಉತ್ತಮ ಫಲಗಳು ದೊರೆಯುವ ಬದಲು ಶಾಪವಾಗಿ ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿ ಬರಬಹುದು, ಹಾಗಾದರೆ ಪೂಜೆಯನ್ನು ಮಾಡಬೇಕಾದರೆ ಯಾವ ತಪ್ಪುಗಳನ್ನು ಮಾಡಬಾರದು ಎಂದು ನೋಡೋಣ. ಮೊದಲನೆಯದಾಗಿ ದೇವರ ಪೂಜೆಯನ್ನು ಮಾಡಬೇಕಾದರೆ ಮುಂಜಾನೆಯ ಸಮಯದಲ್ಲಿ ಮಾಡಬೇಕು, ಪ್ರಸ್ತುತ ಜನರ ಜೀವನ ಶೈಲಿಯಿಂದ ಪೂಜೆಯ ಸಮಯ 10 ಗಂಟೆಯ ನಂತರ ನಡೆಯುತ್ತದೆ, ಇದು ದೇವರ ಪೂಜೆಗೆ ಸೂಕ್ತವಲ್ಲ.

ಇನ್ನು ಮನೆಯಲ್ಲಿ 10 ಗಂಟೆಯ ಮೇಲೆ 12 ಗಂಟೆಯ ಆಸುಪಾಸಿನಲ್ಲಿ ಪೂಜೆಯನ್ನು ಮಾಡಬೇಕಾದರೆ ಕಣ್ಣೀರು ಹಾಕಿದರೆ ದಾರಿದ್ರ್ಯತೆಯನ್ನು ತರುತ್ತದೆ, ಇದರಿಂದ ನಿಮ್ಮ ಮನೆಗೆ ದರಿದ್ರತನವನ್ನು ನೀವೇ ತಂದುಕೊಂಡಂತೆ ಆಗುತ್ತದೆ, ಅಷ್ಟೇ ಅಲ್ಲದೆ ಪೂಜೆಯ ಸಮಯದಲ್ಲಿ ಕಣ್ಣೀರು ಹಾಕುವುದರಿಂದ ಮನೆಯ ಅದೃಷ್ಟವು ನಶಿಸಿಹೋಗುತ್ತದೆ, ಅಷ್ಟೇ ಅಲ್ಲದೆ ಮನೆಯಲ್ಲಿ ಧನಾತ್ಮಕ ಶಕ್ತಿಗಳು ದೂರವಾಗಿ ಋಣಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ,

ಇದರಿಂದ ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ ಗಂಡ-ಹೆಂಡತಿಯ ನಡುವೆ ಜಗಳ, ಮಕ್ಕಳ ಕಿರಿಕಿರಿ, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಬರಿ ನಷ್ಟ, ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ದೇವರ ಪೂಜೆಯನ್ನು ಮಾಡಬೇಕಾದರೆ ಯಾವಾಗಲೂ ಶ್ರದ್ಧಾಭಕ್ತಿಯಿಂದ ಪೂಜೆಯನ್ನು ಮಾಡಬೇಕು, ಕೆಲವೊಮ್ಮೆ ಅಹಿತಕರ ಘಟನೆಗಳು ನಡೆದಾಗ ಕಣ್ಣೀರು ಅನಿವಾರ್ಯವಾಗಿರುತ್ತದೆ, ಇದರೂ ಪೂಜೆಯ ಸಮಯದಲ್ಲಿ ಅದನ್ನು ತಡೆದು

ಪೂಜೆಯನ್ನು ಸಲ್ಲಿಸುವುದು ಉತ್ತಮ. ಇನ್ನು ಒಂದು ವೇಳೆ ಕಣ್ಣೀರು ಹಾಕಿ ಮನೆಯಲ್ಲಿ ಕಳಶವನ್ನು ಪ್ರತಿಷ್ಠಾಪಿಸಿದ್ದರೆ ಅಲ್ಲಿಂದ ಲಕ್ಷ್ಮೀದೇವಿಯು ಹೊರಟು ಹೋಗುತ್ತಾಳೆ ಮತ್ತು ಇದರಿಂದ ಕುಲದೇವರ ಶಾಪವು ಕೂಡ ತಗಲುತ್ತದೆ, ಆದ್ದರಿಂದ ದೇವರಕೋಣೆಯಲ್ಲಿ ಕುಳಿತುಕೊಂಡು ದೇವರ ಪೂಜೆಯನ್ನು ಮಾಡಬೇಕಾದರೆ ಯಾವುದೇ ಕಾರಣಕ್ಕೂ ಕಣ್ಣೀರು ಹಾಕಬಾರದು. ಗೋಧೂಳಿ ಸಮಯದಲ್ಲಿ ಪೂಜೆ ಮಾಡಬೇಕಾದರೆ ವಿಷ್ಣುಸಹಸ್ರನಾಮವನ್ನು ಹಾಕಿಕೊಂಡು ಕೇಳುವುದು ತುಂಬಾ ಒಳ್ಳೆಯದು.

ಈ ರೀತಿಯಾಗಿ ಮನಸ್ಸಿನಲ್ಲಿ ಎಷ್ಟೇ ದುಃಖ ಇದ್ದರೂ ಕೂಡ ಅದನ್ನು ತಡೆದುಕೊಂಡು ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸಾಕು ದೇವರಿಗೆ ನಿಮ್ಮ ನೋವು ದುಃಖ ಅರ್ಥವಾಗಿ ನಿಮಗೆ ಒಳ್ಳೆಯದನ್ನು ಮಾಡುತ್ತಾನೆ, ಇದರ ಜೊತೆಗೆ ಪೂಜೆಯ ಸಮಯ ಕೂಡ ಬಹಳ ಮುಖ್ಯವಾದದ್ದು, ಈ ರೀತಿಯ ನಿಯಮಗಳನ್ನು ಪಾಲಿಸಿಕೊಂಡು ತಪ್ಪುಗಳನ್ನು ಮಾಡದೆ ದೇವರಿಗೆ ಪೂಜೆಯನ್ನು ಸಲ್ಲಿಸಿದರೆ ನಿಮ್ಮ ಪೂಜೆಯ ಫಲವು ಖಂಡಿತವಾಗಿ ನಿಮಗೆ ದೊರೆಯುತ್ತದೆ.

Leave a Reply

Your email address will not be published. Required fields are marked *