ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಧರ್ಮಗಳ ಪ್ರಕಾರ ಮಂತ್ರಗಳಿಗೆ ಅಪಾರವಾದ ಶಕ್ತಿ ಇದೆ ಎಂದು ನಂಬಲಾಗಿದೆ. ಭಗವಂತನನ್ನು ಭಕ್ತಿಯಿಂದ ಸ್ಮರಿಸಲು ಮಂತ್ರಗಳು ಸದಾ ಕಾಲ ಪ್ರೇರೇಪಣೆ ಆಗುತ್ತವೆ. ಸಾಮಾನ್ಯವಾಗಿ ಗಣೇಶ, ಶಿವ, ಪಾರ್ವತಿ, ಸುಬ್ರಮಣ್ಯ, ಚಾಮುಂಡಿ, ದುರ್ಗಾ ಪರಮೇಶ್ವರಿ ನಾನಾ ಬಗೆಯ ದೇಗುಲಗಳಿಗೆ ಗುಡಿ ಗೋಪುರಗಳನ್ನು ನಿರ್ಮಿಸಿರುವುದನ್ನು ನೀವು ನೋಡಿರ್ತೀರಿ. ಆದ್ರೆ ಯಾವತ್ತಾದರೂ ಗಾಯತ್ರಿ ದೇವಿಗಾಗಿ ನಿರ್ಮಿಸಲಾದ ಮಂದಿರದ ಕುರಿತು ಕೇಳಿದ್ದೀರಾ? ಬನ್ನಿ ಇವತ್ತಿನ ಲೇಖನದಲ್ಲಿ ಗಾಯತ್ರಿ ದೇವಿಗೆಂದು ನಿರ್ಮಿತವಾದ ಆ ಭವ್ಯ ಆಲಯ ಯಾವುದು ಗಾಯತ್ರಿ ಮಂತ್ರದ ಮಹತ್ವಗಳನ್ನು ತಿಳಿದುಕೊಂಡು ಬರೋಣ. ವಿಶಾಲವಾದ ಜಾಗದಲ್ಲಿ ನಿರ್ಮಿತವಾಗಿರುವ ಗಾಯತ್ರಿ ದೇವಿಯ ಈ ಪುಣ್ಯ ಆಲಯವು ಶ್ವೇತ ವರ್ಣದಿಂದ ಶೋಭಿಸುತ್ತಿದೆ.

ದಕ್ಷಿಣ ಭಾರತದಲ್ಲಿ ನಿರ್ಮಿತವಾದ ಗಾಯತ್ರಿ ದೇವಿಯ ಏಕೈಕ ದೇವಾಲಯದ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ದೇವಿಯ ಸನ್ನಿಧಾನಕ್ಕೆ ಹೋದ್ರೆ ಮನಸ್ಸಿನ ದುಃಖ ದೂರ ಆಗಿ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಸುಂದರವಾದ ಗರ್ಭಗೃಹದಲ್ಲಿ ತಾಯಿ ಗಾಯತ್ರಿ ದೇವಿಯ ಕಪ್ಪು ವರ್ಣದ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಿಯು ಸುಕೋಮಲ ಶರೀರ ಹಾಗೂ ಮಂದಸ್ಮಿತ ಆದ ಐದು ಮುಖಗಳನ್ನು ಹೊತ್ತು ಅಭಯ ಹಸ್ತ ಹಿಡಿದು ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಇಲ್ಲಿ ಗಾಯತ್ರಿ ದೇವಿಯ ಜೊತೆಗೆ ಗಣಪತಿ, ಸ್ಕಂದ ಹಾಗೂ ಅನ್ನ ಪೂರ್ಣೆಯರ ವಿಗ್ರಹಗಳನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಈ ದೇಗುಲಕ್ಕೆ ಬಂದು ಗಾಯತ್ರಿ ದೇವಿಯನ್ನು ಭಕ್ತಿಯಿಂದ ಪಠಿಸಿ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಗಾಯತ್ರಿ ಮಂತ್ರ ಯಾವುದೇ ವರ್ಗ, ಜಾತಿಗೆ ಸಂಭಂದ ಪಟ್ಟಿಲ್ಲ. ಇದನ್ನು ಯಾರು ಬೇಕಾದರೂ ಪಠಿಸಬಹುದು ಎಂದು ಅನೇಕ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಗಾಯತ್ರಿ ಮಂತ್ರ ಪಟಿಸುವವರಿಗೆ ಆಯಸ್ಸು ವೃದ್ಧಿ ಆಗುತ್ತೆ. ದುಷ್ಟ ಶಕ್ತಿ ನಿವಾರಣೆ ಆಗಿ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ಮಾಡುವ ಎಲ್ಲಾ ಕೆಲಸದಲ್ಲಿ ಸಕಾರಾತ್ಮಕತೇ ತುಂಬಿ ಸಕಲ ಅಭೀಷ್ಟೆಗಳು ಸಿದ್ದಿಸುತ್ತೆ ಹಾಗೆ ಈ ದೇವಿಯನ್ನು ಆರಾಧಿಸುವವರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಯಶಸ್ಸು ತುಂಬಿರುತ್ತದೆ ಎನ್ನುವುದು ಅನೇಕ ಭಕ್ತ ಜನರ ಮನದ ಮಾತಾಗಿದೆ.

ಅತ್ಯಂತ ಶಕ್ತಿಶಾಲಿ ಆದ ಗಾಯತ್ರಿ ಮಂತ್ರವು 24 ಅಕ್ಷರದ ತ್ರಿಪದಿ ಆಗಿದ್ದು, ಓಂ ಭೂರ್ಭುವ ಸ್ವಹ ತತ್ಸವಿ ತುರ್ವ ರೆಣ್ಯಂ, ಭರ್ಗೋ ದೇವಸ್ಯ ಧಿಮಹಿ ಧಿಯೋ ಯೋನಃ ಪ್ರಚೋದಯಾತ್. ಎಂದು ಪಠಿಸಬೇಕು. 18,24,108 ಸಂಖ್ಯೆಗಳಲ್ಲಿ ಮಂತ್ರವನ್ನು ಹೇಳುವುದರಿಂದ ಮನದ ಕಾಮನೆಗಳು ಎಲ್ಲವೂ ಸಿದ್ಧಿ ಆಗುತ್ತವೆ. ಈ ದೇಗುಲಕ್ಕೆ ಬರುವ ಪ್ರತಿ ಭಕ್ತಾದಿಗಳಿಗೆ ಗಾಯಿತ್ರಿ ಮಂತ್ರದ ಮಹತ್ವವನ್ನು ತಿಳಿಸಿ ಕೊಡಲಾಗುತ್ತದೆ. ಪ್ರತಿ ದಿನ ದೇವರಿಗೆ 3 ಹೊತ್ತು ಪೂಜೆ ಮಾಡಲಾಗುತ್ತಿದ್ದು, ಇಲ್ಲಿಗೆ ಬರುವ ಭಕ್ತಾದಿಗಳಿಗೆ ಉಚಿತ ಊಟಾ ಹಾಗೂ ವಸತಿಯನ್ನು ಕಲ್ಪಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ಪುಷ್ಪಾಲಂಕಾರ ಸೇವೆ, ಸಪ್ತ ಶತಿ ಪಾರಾಯಣ, ಪಂಚಾಮೃತ ಅಭಿಷೇಕ, ಸರ್ವಾಲಂಕಾರ ಸೇವೆ, ಸಹಸ್ರ ನಮವಳಿ ಸಹಿತ ಕುಂಕುಮಾರ್ಚನೆ ಸೇವೆಗಳನ್ನು ಮಾಡಿಸಬಹುದು. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7.30 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಗಾಯತ್ರಿ ದೇವಿಗೆಂದು ನಿರ್ಮಿತವಾದ ಈ ಭವ್ಯ ಆಲಯವು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ ಎಂಬ ಗ್ರಾಮದಲ್ಲಿ ಇದೆ. ಸಾಧ್ಯವಾದರೆ ಒಮ್ಮೆ ನಿಮ್ಮ ಜೀವಮಾನದಲ್ಲಿ ಭೇಟಿ ನೀಡಿ ಅಲ್ಲಿನ ಶಕ್ತಿಯನ್ನು ಅರಿಯಿರಿ. ಶುಭದಿನ.

Leave a Reply

Your email address will not be published. Required fields are marked *