ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಶದ ಇತಿಹಾಸದ ಪುಟವನ್ನು ತಿರುಗಿ ಹಾಕಿದ್ರೆ, ನಮಗೆ ನಮ್ಮ ದೇಶವನ್ನು ಆಳಿ ಹೋದ ಅನೇಕ ರಾಜರುಗಳ ಬಗ್ಗೆ ಮಾಹಿತಿ ಸಿಗುತ್ತೆ ಅದ್ರಲ್ಲೂ ಶಿವಾಜಿ ಮಹಾರಾಜರ ಹೆಸರನ್ನು ಕೇಳದೆ ಹೋದವರ ಸಂಖ್ಯೆ ತುಂಬಾ ವಿರಳ ಎಂದೇ ಹೇಳಬಹುದು. ಇಂದಿನ ಲೇಖನದಲ್ಲಿ ಭಕ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಶಿವಾಜಿ ಹೆಸರು ಹೇಳಲು ಒಂದು ಕಾರಣ ಇದೆ. ಏನು ಕಾರಣ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಸುಮಾರು 1000 ವರ್ಷಕ್ಕಿಂತಲೂ ಹೆಚ್ಚು ಇತಿಹಾಸವನ್ನು ಹೊಂದಿರುವ ಶ್ರೀಮಂತ ಗಡದ ಕೋಟೆಯ ಮೇಲೆ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಹೊಳಲಮ್ಮ ದೇವಿಯ ಪುಣ್ಯ ಆಲಯ ಇದ್ದು, ಈ ದೇವಿಯ ದರ್ಶನದಿಂದ ಮನಸ್ಸಿಗೆ ಶಾಂತಿ ಸಿಗುತ್ತೆ ಎಂದು ಹೇಳಲಾಗುತ್ತದೆ. ಗರ್ಭ ಗುಡಿಯಲ್ಲಿ ಕಪ್ಪು ವರ್ಣದ ಏಕ ಶಿಕೆಯಲ್ಲಿ ಕಂಗೊಳಿಸುತ್ತಿರುವ ಹೊಳಲಾಮ್ಮ ದೇವಿಯು ಚಾಮುಂಡಿ ದೇವಿಯ ಅವತಾರ ಆಗಿದ್ದು, ತಾಯಿಯು ಕೈಗಳಲ್ಲಿ ಶಂಖ ಚಕ್ರ ಬಿಲ್ಲು ತ್ರಿಶೂಲ ದಿವ್ಯಸ್ಥ್ರ ಗದೆಯನ್ನು ಹಿಡಿದು ಭಕ್ತರಿಗೆ ತನ್ನ ರೂಪವನ್ನು ತೋರುತ್ತಾಳೆ.

ಹೊಳಲಮ್ಮಾ ಹೊಳಮ್ಮ ಎಂಬೆಲ್ಲ ಹೆಸರಿನಿಂದ ಕರೆಯೂ ಈ ಜಗದ ಜನನಿ ತನ್ನ ಬಳಿ ಯಾರೇ ಬಂದು ಏನನ್ನೇ ಬೇಡಿದರೂ ಅವುಗಳನ್ನು ಈ ತಾಯಿ ಕರುಣಿಸುತ್ತಾಳೆ ಎಂಬ ಪ್ರತೀತಿ ಇದ್ದು, ನೂರಾರು ಮಂದಿ ಈ ದೇವಿಯನ್ನು ತಮ್ಮ ಆರಾಧ್ಯ ದೇವಿಯಾಗಿ ಪೂಜಿಸುತ್ತಿದ್ದಾರೆ. ಇನ್ನೂ ಈ ದೇವಸ್ಥಾನದ ಸುತ್ತ ಮುತ್ತ ಸಪ್ತ ರಾಮದಾಸರ ಮಂದಿರ ಬಟ್ಟಲು ಬಾವಿ ಬನ್ನಿ ಮುಡಿಯುವ ಸ್ಥಳ, ಬಾರಮ್ಮ ದೇವಿ, ಮುದ್ದಿಯ ಹೊಂಡ, ಸ್ನಾನ ದ ಹೊಂಡ ಆನೆ ಹೊಂಡ ಇನ್ನೂ ಮುಂತಾದ ಸ್ಥಳಗಳು ಇದ್ದು, ಇಲ್ಲಿರುವ ನೀರಿನ ಹೊಂಡದಲ್ಲಿ ಮಿಂದೆದ್ದರೆ, ಚರ್ಮ ರೋಗಗಳು ವಾಸಿ ಆಗುತ್ತೆ ಎನ್ನುವ ಪ್ರತೀತಿ ಇದೆ. ಕಪಿಲ ಮಹರ್ಷಿಗಳು ತಪಸ್ಸು ಮಾಡಿದ ಈ ಸ್ಥಳ ಧಾರ್ಮಿಕವಾಗಿ ಐತಿಹಾಸಿಕವಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಇಲ್ಲಿನ ಸ್ಥಳೀಯ ಕಥೆಗಳ ಪ್ರಕಾರ ಈ ಸ್ಥಳವು 17 ನೆ ಶತಮಾದಲ್ಲಿ ರಸದುಲ್ಲ ಖಾನ್ ಎಂಬ ರಾಜನ ವಶದಲ್ಲಿತ್ತು. ಆತ ತಾನು ದೋಚಿದ ಅಪಾರ ಸಂಪತ್ತನ್ನು ಈ ಬೆಟ್ಟದ ಮೇಲೆ ಬಚ್ಚು ಇಟ್ಟಿದ್ದನಂತೆ, ಹಾಗೂ ಈ ಖಜಾನೆಯ ರಕ್ಷಣೆಗೆ ದೇವಿಯನ್ನು ವಶೀಕರಣ ಗೊಳಿಸಿ ಕೋಟೆಯನ್ನು ಆಳುತ್ತಿದ್ದ ಎಂಬ ಜಾನಪದ ಕತೆ ಇದ್ದು, ಒಂದು ಬಾರಿ ಶಿವಾಜಿ ಮಹಾರಾಜರ ಕನಸಲ್ಲಿ ಕಾಣಿಸಿಕೊಂಡ ಹೋಳಲಮ್ಮ ದೇವಿಯು ರಸದುಲ್ಲ ಖಾನ್ ನನ್ನು ಸಂಹರಿಸಿ ಧರ್ಮ ಪಾಲನೆ ಮಾಡಬೇಕು ಎಂದು ಶಿವಾಜಿಗೆ ಆಜ್ಞೆ ಇಟ್ಟಲಂತೆ.

ನಂತರ ಶಿವಾಜಿಯು ಖಾನ್ ನ ಮೇಲೆ ಯುದ್ಧ ಮಾಡಿ ರಸದುಲ್ಲ ಖಾನ್ ನನ್ನು ಸಂಹರಿಸಿ ಕೋಟೆಯನ್ನು ವಶ ಪಡಿಸಿಕೊಂಡು ಅಪಾರ ಪ್ರಮಾಣದ ನಿಧಿ ಸಿಕ್ಕ ಜಾಗದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಪನೆ ಮಾಡಿದನೆಂದು ಶಿವಾಜಿಯ ಕಾರ್ಯಕ್ಕೆ ಮೆಚ್ಚಿ ಹೊಳಲಮ್ಮಾ ದೇವಿಯು ಶಿವಾಜಿಗೆ ವಿಜಯದ ಖಡ್ಗವನ್ನು ದಯಪಾಲಿಸಿ ಆತನನ್ನು ಹರಸಿದಳು ಎಂಬ ಕಥೆಯೂ ಈ ಕ್ಷೇತ್ರದ ಕುರಿತಾಗಿ ಕೇಳಿ ಬರುತ್ತಿದೆ. ಇಂದಿಗೂ ಕೂಡ ಕೋಟೆಯ ಕುರುಹುಗಳನ್ನು ನಾವು ನೀಡಬಹುದಾಗಿದೆ. ಇನ್ನೂ ಪ್ರತಿ ವರ್ಷವೂ ಭರತ ಹುಣ್ಣಿಮೆಯಂದು ಇಲ್ಲಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ, ಛತ್ರಿ ಚಾಮರ ಸೇವೆ, ದೀವಟಿಗೆ, ಡೊಳ್ಳು ಕುಣಿತದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಈ ಸಮಯದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ಸರ್ವಲಂಕೃತ ಭೋಷಿತೆ ಆದ ದೇವಿಯ ದರ್ಶನ ಪಡೆಯುತ್ತಾರೆ. ಮಂಗಳವಾರ ಶುಕ್ರವಾರ ದಿನದಂದು ವಿಶೇಷ ಪೂಜೆಗೊಳ್ಳುವ ಈ ದೇವಿಗೆ ನವರಾತ್ರಿ ಯಲ್ಲಿ ಬಗೆ ಬಗೆಯ ಅಲಂಕಾರ ಮಾಡಲಾಗುತ್ತದೆ. ಹೊಳಲಮ್ಮಾ ನೆಲೆಸಿರುವ ಈ ಜಾಗೃತ ಕ್ಷೇತ್ರ ಗದದ ಜಿಲ್ಲೆಯ ಶಿರಾಳಹಟ್ಟಿ ತಾಲೂಕಿನ ಶ್ರೀಮಂತ ಗಡ ಎಂಬ ಊರಿನಲ್ಲಿ ದೆ. ಸಾಧ್ಯವಾದರೆ ನೀವು ನಿಮ್ಮ ಜೀವನದಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ

Leave a Reply

Your email address will not be published. Required fields are marked *