ನಮಸ್ತೇ ಪ್ರಿಯ ಓದುಗರೇ, ನಮ್ಮ ರಾಜ್ಯದಲ್ಲಿ ದೇವಾಲಯಗಳಿಗೆ ಕೊರತೆಯಿಲ್ಲ. ದೇವಾಲಯಗಳೇ ದೇವಾಲಯಗಳಿಂದ ಕೂಡಿದೆ ನಮ್ಮ ರಾಜ್ಯ. ಒಂದೊಂದು ದೇವಾಲಯಕ್ಕೂ ತನ್ನದೇ ಆದ ಇತಿಹಾಸ ಹಾಗೂ ವಿಶೇಷತೆ ಮತ್ತು ಪೌರಾಣಿಕ ಹಿನ್ನೆಲೆ ಕೂಡ ಇರುತ್ತದೆ. ಅಂಥಹ ಅದ್ಭುತವಾದ ದೇವಾಲಯಗಳಲ್ಲಿ ಪ್ರಸಿದ್ದತೆ ಪಡೆದಿರುವ ಮಾಯಮ್ಮ ದೇವಿ ದೇವಾಲಯದ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ದೇವಾಲಯಕ್ಕೆ ಹೋದರೆ ಸಾಮಾನ್ಯವಾಗಿ ನಾವು ಏನು ಮಾಡುತ್ತೇವೆ. ದೇವರಿಗೆ ಹಣ್ಣು ಕಾಯಿ ಹೂವು ಅಗರಬತ್ತಿ ಎಲ್ಲವನ್ನೂ ದೇವರಿಗೆ ಅರ್ಪಣೆ ಮಾಡಿ ಪೂಜೆ ಮಾಡಿಸುತ್ತೇವೆ. ಇದನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಆಸೆಗಳು ಈಡೇರಬೇಕೆಂದು ದೇವರಲ್ಲಿ ಹರಕೆಯನ್ನು ಹೊತ್ತಿರುತ್ತಾರೆ. ಆಗ ಹರಕೆಗಳು ಬೇಡಿಕೆಗಳು ನೆರವೇರಿದ ಮೇಲೆ ನಾವು ದೇವರಿಗೆ ಇಷ್ಟವಾದದ್ದನ್ನು ಕಾಣಿಕೆ ರೂಪದಲ್ಲಿ ಕೊಡುತ್ತೇವೆ. ಇಷ್ಟವಾದ ವಸ್ತುಗಳನ್ನು ದೇವರಿಗೆ ನೀಡಿದರೆ ದೇವರು ಬೇಗನೆ ಆಸೆಗಳನ್ನು ಕನಸುಗಳನ್ನು ನೆರವೇರಿಸುತ್ತಾರೆ ಎಂಬ ನಂಬಿಕೆಯಿಂದ. ಕೆಲವು ದೇವರಿಗೆ ಕಾಣಿಕೆ ರೂಪದಲ್ಲಿ ಚಿನ್ನವನ್ನು ಕೊಡುತ್ತಾರೆ ಬೆಳ್ಳಿ ಆಭರಣಗಳನ್ನು ನೀಡುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ದೇವರಿಗೆ ಕೆಲವು ವಸ್ತುಗಳನ್ನು ಹರಕೆ ತೀರಿದ ಮೇಲೆ ನೀಡುತ್ತಾರೆ.

ಬಳ್ಳಾರಿ ಜಿಲ್ಲೆಯ ಗಾಣಗಟ್ಟೆ ಎಂಬ ಊರಿನಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನ ಕೇವಲ ದುಡ್ಡಿನಿಂದ ಅಲಂಕಾರವನ್ನು ಮಾಡಿರುತ್ತಾರೆ. ಹೌದು ತಾಯಿಯ ಗರ್ಭ ಗುಡಿಯನ್ನು ನೋಟುಗಳಿಂದ ಶೃಂಗಾರ ಮಾಡುತ್ತಾರೆ. ಹಾಗೂ ತಾಯಿಗೆ ಅಂತೂ ಹೇಳಲಾಗದು ಕೇವಲ ದುಡ್ಡಿನಿಂದಲೇ ಶೃಂಗಾರ ಮಾಡಿರುತ್ತಾರೆ. 10 ರೂಪಾಯಿ ನೋಟುಗಳಿಂದ ಹಿಡಿದು 2000 ರೂಪಾಯಿ ನೋಟುಗಳ ಮಾಲೆಯಿಂದ ತಾಯಿಗೆ ಹಾರವನ್ನು ಮಾಡಿ ಹಾಕುತ್ತಾರೆ
ಈ ತಾಯಿಗೆ ಭಕ್ತಿಯಿಂದ ದುಡ್ಡನ್ನು ಅರ್ಪಿಸಿದರೆ ಮಾತ್ರ ಒಲಿಯುತ್ತಾಳೆ ಏಕೆಂದ್ರೆ ದುಡ್ಡು ಎಂದರೆ ತಾಯಿಗೆ ಬಲು ಪ್ರೀತಿ. ಅಂತ ನಂಬಲಾಗಿದೆ. ಇನ್ನೂ ಸಂತಾನ ಭಾಗ್ಯ ಲಭಿಸದೆ ಇದ್ದವರು ಇಲ್ಲಿಗೆ ಬಂದು ತಾಯಿಯಲ್ಲಿ ಬೇಡಿಕೊಂಡರೆ ಮಕ್ಕಳು ಆಗುತ್ತವೆ ಅಂತ ಪ್ರಭಲವಾದ ನಂಬಿಕೆ. ತದ ನಂತರ ಸಂತಾನ ಭಾಗ್ಯ ಲಭಿಸಿದ ಮೇಲೆ ಮಗುವಿದ್ದಷ್ಟೆ ಅಂದ್ರೆ ಮಗುವಿನ ತೂಕವಷ್ಟೆ ತಾಯಿಗೆ ಹಣವನ್ನು ಅರ್ಪಿಸಬೇಕು.ಅಂದ್ರೆ ತುಲಾಭಾರ ಮಾಡಿಸಬೇಕು. ಮಾಯಮ್ಮ ದೇವಿ ಕೊಲ್ಲಾಪುರ ಮಹಾಲಕ್ಷ್ಮೀ ಸ್ವರೂಪವಾಗಿದೆ. ಇದರ ಹಿಂದೆ ಇರುವ ಪೌರಾಣಿಕ ಕಥೆ ಬಗ್ಗೆ ಹೇಳುವುದಾದರೆ ಕೊಲ್ಲಾಪುರ ಎಂಬ ಊರಿನಿಂದ ಚಿನ್ನವನ್ನು ಕೋಣದ ಮೇಲೆ ಹೇರಿಕೊಂಡು ವ್ಯಾಪಾರಕ್ಕಾಗಿ ಬರುತ್ತಿದ್ದರು. ಆಗ ಒಬ್ಬ ವ್ಯಾಪಾರಿ ಚಿನ್ನದ ತೂಕವಷ್ಟೆ ಒಂದು ಕಲ್ಲನ್ನು ತನ್ನ ಬಳಿ ತೆಗೆದುಕೊಂಡು ಹೋಗುತ್ತಾನೆ ಆಗ ಅವನು ಮರೆತು ಆ ಕಲ್ಲನ್ನು ಅಲ್ಲಿಯೇ ಬಿಟ್ಟು ಹೋಗುತ್ತಾನೆ. ಹೀಗಾಗಿ ಅದೇ ಕಲ್ಲು ಮಾಯಮ್ಮ ದೇವಿಯಾದಳು ಅಂತ ಇತಿಹಾಸ ಹೇಳುತ್ತದೆ.

ಇದಾದ ಬಳಿಕ ಒಂದು ಹೆಣ್ಣು ಮಗುವಿನ ದೇಹದೊಳಗೆ ದೇವಿ ಬಂದು ದೇವಸ್ಥಾನ ನಿರ್ಮಾಣ ಮಾಡಬೇಕೆಂದು ಹೇಳಿದಾಗ ಊರಿನ ಜನರು ಮಾಯಮ್ಮ ದೇವಿ ಎಂಬ ದೇವಾಲಯವನ್ನು ನಿರ್ಮಿಸುತ್ತಾರೆ. ಅಂತ ಭಕ್ತರ ನಂಬಿಕೆಯಾಗಿದೆ. ಪ್ರತಿದಿನವೂ ತಾಯಿಯನ್ನು ಸಂಜೆ 6.30 ಗಂಟೆಯಿಂದ ಮೆರವಣಿಗೆ ಮಾಡಿಸಿ ರಾತ್ರಿ ಎಂಟು ಗಂಟೆಗೆ ಮತ್ತೆ ಗದ್ದುಗೆಯ ಮೇಲೆ ಕುಳ್ಳಿರಿಸುತ್ತಾರೆ. ಈ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ದೇವಿಯ ದರ್ಶನವನ್ನು ಪಡೆಯಲು ಜನರು ನೂಕುನೂಗ್ಗಲೂ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಮಾವಾಸ್ಯೆ ದಿನ ದೇವಿಯ ದರ್ಶನವನ್ನು ಪಡೆಯಲು ಬೇರೆ ಬೇರೆ ಊರುಗಳಿಂದ ಬರುತ್ತಾರೆ. ಪ್ರತಿ ಅಮಾವಾಸ್ಯೆಯ ದಿನ ಈ ದೇವಾಲಯದಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ. ಇಲ್ಲಿ ತಂಗಲು 15 ಕೊಠಡಿಗಳಿವೆ. ಸದ್ಯದಲ್ಲಿ ರಾಜಗೋಪುರ ಕೂಡ ನಿರ್ಮಾಣವಾಗಿದೆ. ದೇವಿಗೆ ಚಿನ್ನದ ಬಳೆ ಸೀರೆ ಗಾಜಿನ ಬಳೆ ಇಡುವ ಸಂಪ್ರದಾಯವಿದೆ. ಈ ದೇವಾಲಯದಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಅಂತ ನಂಬಲಾಗಿದೆ. ಫೆಬ್ರುವರಿ ಮಾರ್ಚ್ ತಿಂಗಳಲ್ಲಿ ಈ ಮಾಯಮ್ಮ ದೇವಿ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತದೆ. ಬಳ್ಳಾರಿಗೆ ಹೋದರೆ ತಪ್ಪದೇ ಮಾಯಮ್ಮ ದೇವಿ ದರ್ಶನವನ್ನು ಮಾಡಿಕೊಂಡು ಬನ್ನಿ. ಒಳ್ಳೆಯದಾಗಲಿ.

Leave a Reply

Your email address will not be published. Required fields are marked *