ನಮಸ್ತೆ ಪ್ರಿಯ ಓದುಗರೇ, ಹಿಂದೂ ಧರ್ಮದಲ್ಲಿ ಸಾಕಷ್ಟು ಜನರು ಭಕ್ತಿಯಿಂದ ಆರಾಧಿಸುವ ದೇವರಲ್ಲಿ ಪರಮೇಶ್ವರ ಕೂಡ ಒಬ್ಬನಾಗಿದ್ದು, ಈತ ಕಾಶಿಯಲ್ಲಿ ವಿಶ್ವೇಶ್ವರ ಆಗಿ ನೆಲೆ ನಿಂತು ತನ್ನ ಬಳಿ ಬರುವ ಭಕ್ತರನ್ನು ಉದ್ಧರಿಸುತ್ತಾ ಇದ್ದಾನೆ. ಸ್ನೇಹಿತರೆ ಶಿವನನ್ನು ಸ್ಮಶಾನ ವಾಸಿ ಎಂದೇ ಕರೆಯಲಾಗುತ್ತದೆ. ವಿಶ್ವೇಶ್ವರ ನೆಲೆ ನಿಂತ ವಾರಣಾಸಿಯು ಸ್ಮಶಾನದ ಸಮೀಪದಲ್ಲಿ ಇರುವುದರಿಂದ ಈ ಕ್ಷೇತ್ರಕ್ಕೆ ಹೋದ್ರೆ ಮೋಕ್ಷ ದೊರಕುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಎಲ್ಲರಿಗೂ ಕಾಶಿಗೆ ಹೋಗಲು ಸಾಧ್ಯ ಆಗೋದಿಲ್ಲ ಅಲ್ವಾ? ಶಿವನ ಯಾವುದಾದರೂ ದೇವಸ್ಥಾನಕ್ಕೆ ಹೋಗಬಹುದು ಆದರೆ ಸ್ಮಶಾನದ ಬಳಿ ನಿರ್ಮಿಸಿದ ಶಿವನ ಆಲಯಕ್ಕ ಹೋಗಬೇಕು ಅಂದ್ರೆ ಅದು ಕಾಶಿಯನ್ನು ಬಿಟ್ರೆ ಈ ಸ್ಥಳದಲ್ಲಿ ಮಾತ್ರ. ಹಾಗಾದ್ರೆ ಅಂತಹ ಪುಣ್ಯ ಕ್ಷೇತ್ರ ಎಲ್ಲಿದೆ ಆ ಕ್ಷೇತ್ರದ ಮಹಿಮೆ ಏನು ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಹತ್ತೊರಿನ ಒಡೆಯನಾದ ಮಹಾಲಿಂಗೇಶ್ವರ ದೇವರು ಮುತ್ತಿನಂಥ ಊರು ಎಂದೇ ಕರೆಯುವ ಪುತ್ತೂರಿನಲ್ಲಿ ಸ್ವಯಂಭೂ ಆಗಿ ನೆಲೆ ನಿಂತು ಈ ದೇವಾಲಯವು 800 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿದೆ. ದೇಗುಲದ ಮುಖ್ಯ ಗರ್ಭ ಗುಡಿಯಲ್ಲಿ ಮಹಾಲಿಂಗೇಶ್ವರನು ಲಿಂಗ ರೂಪದಲ್ಲಿ ನೆಲೆ ನಿಂತು ಭಕ್ತರಿಗೆ ತನ್ನ ದಿವ್ಯ ರೂಪವನ್ನು ತೋರುತ್ತಾನೆ. ಈ ಕ್ಷೇತ್ರದ ವಿಶೇಷತೆ ಏನೆಂದರೆ ಶಿವನ ಆಲಯವನ್ನು ಸ್ಮಶಾನದ ಎದುರಿಗೆ ನಿರ್ಮಿಸಿರುವುದು. ಕಾಶಿಯನ್ನು ಬಿಟ್ರೆ ಈ ಕ್ಷೇತ್ರದಲ್ಲಿ ಮಾತ್ರ ಶಿವನ ಆಲಯವನ್ನು ಸ್ಮಶಾನದ ಬಳಿ ನಿರ್ಮಿಸಲಾಗಿದೆ. ಈ ಕಾರಣದಿಂದ ಈ ಸ್ಥಳವನ್ನು ಕರ್ನಾಟಕದ ಕಾಶಿ ಎಂದು ಹೇಳಲಾಗುತ್ತದೆ. ಇಲ್ಲಿಗೆ ಬಂದು ಭಕ್ತಿಯಿಂದ ರುದ್ರಾಭಿಷೇಕ ಪೂಜೆ ಮಾಡಿಸಿದರೆ ಕರುಣಾ ಪೂರೀತನಾದ ಮಹಾಲಿಂಗೇಶ್ವರ ನಮ್ಮ ಕೋರಿಕೆಗಳನ್ನು ಮಾನ್ಯ ಮಾಡುತಾನೆ ಎಂದೇ ಹೇಳಬಹುದು.

ಕೌರವ ಮತ್ತು ದ್ರಾವಿಡ ಶೈಲಿಯಲ್ಲಿ ನಿರ್ಮಿತವಾದ ರಾಜ ಗೋಪುರ ಹೊಂದಿರುವ ಈ ಆಲಯದ ಒಳಾಂಗಣದಲ್ಲಿ ಶ್ರೀ ಸುಬ್ರಮಣ್ಯ ಗುಡಿ, ಗಣಪತಿ ಗುಡಿ, ಶ್ರೀದೇವಿ ಗುಡಿ, ದೈವಗಳ ಗುಡಿಗಳು ಹಾಗೂ ಅಷ್ಟ ದಿಲ್ಪಾಲಕರು, ಚಂಡಿಕೇಶ್ವರ ಬಾಲಕ ಹಾಗೂ ನಂದಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಅತ್ಯಂತ ಹಳೆಯ ಈ ಆಲಯವನ್ನು 2013 ರಲ್ಲೀ ಪುನರ್ ನಿರ್ಮಾಣ ಮಾಡಿ ವೈಭವದ ಬ್ರಹ್ಮ ಕಲಾಶೋತ್ಸವ ವನ್ನಾ ನಡೆಸಲಾಗಿದೆ. ದೇಗುಲದ ಗೋಡೆಗಳ ಮೇಲೆ ಸ್ಥಳ ಪುರಾಣ ಮತ್ತು ಶಿವ ಪುರಾಣದ ವರ್ಣನೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ಅತ್ಯಂತ ಶಕ್ತಿಶಾಲಿ ಆದ ಈ ಪರಮೇಶ್ವರ ದೇವರು ಈ ಕ್ಷೇತ್ರದಲ್ಲಿ ಬಂದು ನೆಲೆ ನಿಲ್ಲುವುದ ರ ಹಿಂದೆ ಒಂದು ರೋಮಾಂಚನಕಾರಿ ಕಥೆ ಇದೆ. ಹಿಂದೆ ಹೋಳಲಿ ಮೂಲದ ನಾಟ್ಟೋಜಿ ಮನೆತನದ ವ್ಯಕ್ತಿ ಒಬ್ಬರು ಕಾಶಿಗೆ ಹೋಗಿ ಗಂಗಾ ತಟದಲ್ಲಿ ಮಿಂದೆದ್ದು ವಿಶ್ವೇಶ್ವರನ ದರ್ಶನ ಮಾಡಿ ಪುತ್ತೂರಿಗೆ ಬರುವಾಗ ಶಿವ ಲಿಂಗವನ್ನು ತೆಗೆದುಕೊಂಡು ಬರುತ್ತಾರೆ. ಇವರು ಶಿವ ಲಿಂಗವನ್ನು ಕೈಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಾ ಪುತ್ತೂರಿಗೆ ಬಂದು ನೆಲೆ ನಿಲ್ಲುತ್ತಾರೆ. ಒಂದು ದಿನ ಅಚಾತುರ್ಯಿಂದಾಗಿ ಶಿವ ಲಿಂಗವನ್ನು ಭೂಮಿ ಮೇಲೆ ಇಟ್ಟು ಬಿಡುತ್ತಾರೆ. ನಂತರ ಲಿಂಗವನ್ನು ಎತ್ತಲು ಹೋದ್ರೆ ಅದು ಮೇಲೆ ಬರೋದೇ ಇಲ್ಲ. ಈ ವಿಷಯವನ್ನು ಅವರು ಬಂಗರಸ ರಾಜನಿಗೆ ತಿಳಿಸುತ್ತಾರೆ. ರಾಜ ವಿಷ್ಯ ತಿಳಿದು ತನ್ನ ಜನರನ್ನು ಕಳುಹಿಸುತ್ತಾನೆ, ಆದ್ರೂ ಅವರ ಕೈಯಲ್ಲಿ ಲಿಂಗವನ್ನು ಭೂಮಿಯಿಂದ ಹೊರ ತೆಗೆಯಲು ಸಾಧ್ಯ ಆಗೋದಿಲ್ಲ. ನಂತರ ರಾಜನು ತನ್ನ ಪಟ್ಟದ ಆನೆಯನ್ನು ತರಿಸಿ ಅದಕ್ಕೆ ಕಬ್ಬಿಣದ ಸರಪಳಿ ಬಿಗಿದು ಶಿವ ಲಿಂಗವನ್ನು ಎತ್ತಲು ಪ್ರಯತ್ನ ಮಾಡುತ್ತಾನೆ. ಆಶ್ಚರ್ಯ ಏನು ಅಂದ್ರೆ ಆನೆಯು ಎಳೆಯುತ್ತಿದ್ದ ಹಾಗೆ ಚಿಕ್ಕದಾಗಿ ಇದ್ದ ಲಿಂಗ ಮಹದಾಗಿ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ, ಈ ಸಮಯದಲ್ಲಿ ಲಿಂಗವನ್ನು ಎಳೆಯುತ್ತಿದ್ದ ಆನೆಯು ಚಿದ್ರ ಚಿದ್ರವಾಗಿ ಹೋಗುತ್ತೆ.

ದೊಡ್ಡದಾಗಿ ಬೆಳೆದ ಲಿಂಗವನ್ನು ನೋಡಿದ ರಾಜ ಈ ದೇವರಿಗೆ ಶರಣಾಗಿ ಲಿಂಗಕ್ಕೆ ಒಂದು ಗುರಿಯನ್ನು ಕಟ್ಟುತ್ತಾನೆ. ಹಾಗೂ ಶಿವ ಲಿಂಗವನ್ನು ಮಹಾ ಲಿಂಗೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ರೀತಿಯಾಗಿ ಹತ್ತೂರಿನ ಒಡೆಯನಾದ ಈ ಮಹಾಲಿಂಗೇಶ್ವರನು ಪುತ್ತೂರಿನಲ್ಲಿ ನೆಲೆ ನಿಂತ ಎಂದು ಉಲ್ಲೇಖಿಸಲಾಗಿದೆ. ಸ್ನೇಹಿತರೆ ಈ ದೇಗುಲದಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ದೇವರ ಬ್ರಹ್ಮ ರಥೋತ್ಸವ ನಡೆಯುತ್ತದೆ ಈ ಸಮಯದಲ್ಲಿ ಲಕ್ಷಾಂತರ ಮಂದಿ ಇಲ್ಲಿಗೆ ಆಗಮಿಸಿ ಮಹಾಲಿಂಗೇಶ್ವರ ನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಇನ್ನೂ 9 ದಿನಗಳ ಕಾಲ ನಡೆಯುವ ಜಾತ್ರೆ ಯಲ್ಲಿ ಎಳೆಯುವ ಬ್ರಹ್ಮ ರಥವು ದಕ್ಷಿಣ ಭಾರತದಲ್ಲಿ ಅತ್ಯಂತ ಎತ್ತರವಾದ ಬ್ರಹ್ಮ ರಥವಾಗಿದ್ದು, ಈ ರಥವು ಬರೋಬ್ಬರಿ 72 ಅಡಿಗಳಷ್ಟು ಎತ್ತರವಿದೆ. ಅಲ್ಲದೆ ಇಲ್ಲಿ ನಡೆಯುವ ಸುಡು ಮದ್ದು ಪ್ರದರ್ಶನ ಹೆಚ್ಚು ಪ್ರಸಿದ್ಧಿ ಆಗಿದ್ದು, ಸುಡು ಮದ್ದು ಪ್ರಕ್ರಿಯೆಗೆ ಪುತ್ತೂರು ವೇಳಿ ಎಂದು ಹೇಳಲಾಗುತ್ತದೆ. ಪ್ರತಿ ವರ್ಷವೂ ಸುಮಾರು 7 ಲಕ್ಷದ ಮೊತ್ತದ ಸುಡು ಮದ್ದುಗಳನ್ನು ಇಲ್ಲಿ ಸಿಡಿಸಲಾಗುತ್ತದೆ. ಆಕಾಶದಲ್ಲಿ ವರ್ಣ ರಂಜಿತ ಚಿತ್ತಾರ ಮಾಡುವ ಈ ಪುತ್ತೂರು ಬೇಡಿಯನ್ನ ನೋಡೋಕೆ ದೇಶ ವಿದೇಶಗಳಿಂದ ಜನರು ಇಲ್ಲಿಗೆ ಬರ್ತಾರೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಈ ಕ್ಷೇತ್ರದಲ್ಲಿ ಯುಗಾದಿ, ಶಿವರಾತ್ರಿ, ಮಕರ ಸಂಕ್ರಾಂತಿ, ಕಾರ್ತಿಕ ಮಾಸಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅತ್ಯಂತ ಶಕ್ತಿಶಾಲಿ ಆದ ಈ ಮಹಾಲಿಂಗೇಶ್ವರ ನನ್ನು ಬೆಳಿಗ್ಗೆ 5.30 ರಿಂದ ಮಧ್ಯಾನ 12.45 ರ ವರೆಗೆ ಸಂಜೆ 4 ರಿಂದ 7.30 ರ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಈ ಆಲಯವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇದೆ. ಸಾಧ್ಯವಾದರೆ ಒಮ್ಮೆ ಭೇಟಿ ನೀಡಿ ಶಿವನ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.

Leave a Reply

Your email address will not be published. Required fields are marked *