ನಮಸ್ಕಾರ ವೀಕ್ಷಕರೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ವೀಕ್ಷಕರ ನಮ್ಮ ಭಾರತದಲ್ಲಿ ಸಾವಿರಾರು ವರ್ಷಗಳಿಂದಲೂ ಕೂಡ ಈ ತಾಮ್ರದ ಪಾತ್ರೆಗಳಲ್ಲಿ ಆಹಾರವನ್ನು ತಿನ್ನುವುದು ಮತ್ತು ನೀರನ್ನು ಕೊಡುವ ಸಂಪ್ರದಾಯ ಇದೆ. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ತಾಮ್ರದ ಪಾತ್ರೆಯಲ್ಲಿ ಇರುವಂತಹ ನೀರನ್ನು ಕುಡಿದರೆ ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನವಿದೆ. ಆದರೆ ನೀರನ್ನು ಹೊರತಾಗಿ ಕೆಲವೊಂದು ಪಾನೀಯಗಳನ್ನು ಈ ತಾಮ್ರದ ಪಾತ್ರೆಯಲ್ಲಿ ಇಟ್ಟು ಕೊಂಡು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಹಾನಿ ಉಂಟಾಗುತ್ತದೆ. ಹಾಗಾಗಿ ಕೆಲವೊಂದು ಪಾನೀಯಗಳನ್ನು ನಾವು ಎಂದಿಗೂ ಕೂಡ ಈ ತಾಮ್ರದ. ಪಾತ್ರೆಯಲ್ಲಿ ಹಾಕಿಕೊಂಡು ಸೇವನೆ ಮಾಡ ಬಾರದು. ಇವತ್ತಿನ ಇದರಲ್ಲಿ ಯಾವ ಪಾನೀಯಗಳನ್ನು ಈ ತಾಮ್ರದ ಪಾತ್ರೆಯಲ್ಲಿ ಇಟ್ಟು ಕೊಂಡು ಸೇವನೆ ಮಾಡ ಬಾರದು ಅಂತ ತಿಳಿದುಕೊಳ್ಳೋಣ.

ಮೊದಲನೇದಾಗಿ ನೀವೇನಾದ್ರು ತಾಮ್ರದ ಪಾತ್ರೆಯಲ್ಲಿ ಹಾಲನ್ನು ಕುಡಿಯುತ್ತಾ ಇದ್ದರೆ ಅದನ್ನು ಇಂದಿಗೆ ನಿಲ್ಲಿಸಿ ಬಿಡಿ. ಯಾಕಂದ್ರೆ ತಾಮ್ರದ ಪಾತ್ರೆಯ ಲ್ಲಿ ಇರುವಂತಹ ಹಾಲು ವಿಷ ಆಗಬಹುದು. ಇಂತಹ ಪರಿಸ್ಥಿತಿಯಲ್ಲಿ ಕೂಡ ನೀವು ತಾಮ್ರದ ಪಾತ್ರೆಯಲ್ಲಿ ಹಾಲನ್ನು ಸೇವನೆ ಮಾಡಬೇಡಿ. ಇನ್ನು ಮಜ್ಜಿಗೆ ಕೂಡ ಈ ತಾಮ್ರದ.ಪಾತ್ರೆಯಲ್ಲಿ ಹಾಕಿಕೊಂಡು ಸೇವನೆ ಮಾಡಬಹುದು. ಮಜ್ಜಿಗೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನವಿದೆ. ಆದ್ರೆ ನೀವು ತಾಮ್ರದ ಪಾತ್ರೆಯಲ್ಲಿ ಮಜ್ಜಿಗೆ ಯನ್ನು ಸೇವನೆ ಮಾಡುವುದರಿಂದ ಅದು ನಿಮ್ಮ ಆರೋಗ್ಯಕ್ಕೆ ಪ್ರಯೋಜನವಾಗುವ ಬದಲು ಹಾನಿ ಉಂಟಾಗುತ್ತದೆ. ಯಾಕೆಂದರೆ ಮಜ್ಜಿಗೆಯಲ್ಲಿ ಇರುವಂತಹ ಹಲವಾರು ರೀತಿಯ ಹುಳಿ ಅಂಶ ಗುಣಗಳು ಅದು ತಾಮ್ರ ದೊಂದಿಗೆ ಪ್ರತಿಕ್ರಿಯಿಸಬಹುದು. ಹಾಗಾಗಿ ಮಜ್ಜಿಗೆಯನ್ನು ತಾಮ್ರದ ಪಾತ್ರೆಯ ಲ್ಲಿ ಸೇವನೆ ಮಾಡ ಬೇಡಿ. ಇನ್ನು ಹುಳಿ ರಸಗಳ ಸೇವನೆ ತಾಮ್ರದ ಪಾತ್ರೆಯಲ್ಲಿ ಜ್ಯೂಸ್ ಅಥವಾ ಉಪ್ಪಿನಕಾಯಿ ಇತ್ಯಾದಿ ಹುಳಿ ಪದಾರ್ಥಗಳ ನ್ನು ಹಾಕಿ ತಿನ್ನುವುದು.ನಿಮ್ಮ ಆರೋಗ್ಯದ ಮೇಲೆ ಹಾನಿ ಉಂಟಾಗುತ್ತದೆ.

ಎಲ್ಲ ರೀತಿಯ ಹುಳಿ ಪದಾರ್ಥಗಳು, ತಾಮ್ರದ ಪಾತ್ರೆಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಹಾಗಾಗಿ ತಾಮ್ರದ ಪಾತ್ರೆಯಲ್ಲಿ ಹುಳಿ ಪದಾರ್ಥಗಳನ್ನು ತಿನ್ನುವುದರಿಂದ ವಾಂತಿ ಕೂಡ ಉಂಟಾಗಬಹುದು. ಹಾಗಾಗಿ ಹುಳಿ ಪದಾರ್ಥಗಳನ್ನು ತಾಮ್ರದ ಪಾತ್ರೆ ಯೊಂದಿಗೆ ಸೇರಿಸಿ ಸೇವನೆ ಮಾಡಬೇಡಿ. ಇನ್ನು ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರು ನಿಂಬೆ ರಸ ಅಥವಾ ನಿಂಬೆ ಪಾನಕ ವನ್ನು ಸೇವನೆ ಮಾಡುತ್ತಾ ಇರುತ್ತಾರೆ. ಹಲವಾರು ರೀತಿಯ ದಂತಹ ರೆಸ್ಟೋರೆಂಟ್ ಗಳಲ್ಲಿ ಕೂಡ ಈ ಪಾನಕ ವನ್ನು ತಾಮ್ರದ ಲೋಟ ಗಳಲ್ಲಿ ಕೊಡುತ್ತಾ ಇರುತ್ತಾರೆ. ಆದರೆ ತಾಮ್ರದ ಲೋಟಗಳಲ್ಲಿ ನಿಂಬೆ ರಸ ವನ್ನು ಅಥವಾ ನಿಂಬೆ ಪಾನಕ ವನ್ನು ಸೇವನೆ ಮಾಡೋದ್ರಿಂದ ನಿಂಬೆಹಣ್ಣನಲ್ಲಿ ಇರುವಂತಹ ಆಮ್ಲವು ತಾಮ್ರ ದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದರಿಂದ ನಿಮಗೆ ಹೊಟ್ಟೆ ನೋವು ಅಥವಾ ವಾಂತಿ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಈ ನಿಂಬೆ ಹಣ್ಣಿನ ರಸ ಅಥವಾ ಪಾನಕವನ್ನು ತಾಮ್ರದ ಲೋಟಗಳಲ್ಲಿ ಸೇವನೆ ಮಾಡ ಬೇಡಿ.

Leave a Reply

Your email address will not be published. Required fields are marked *