ನಮಸ್ಕಾರ ಸ್ನೇಹಿತರೆ 2023 ರಲ್ಲಿ ಬರುವ ಗಣೇಶ ಚತುರ್ಥಿ ಯಾವ ದಿನ ಬಂದಿದೆ? ಪೂಜೆಯ ಶುಭ ಸಮಯ, ಪೂಜಾ ವಿಧಾನ ಹಾಗೆ ಚತುರ್ಥಿಯ ಮಹತ್ವವೇನು? ಈ ಎಲ್ಲ ಮಾಹಿತಿಯನ್ನು ತಿಳಿಯೋಣ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸುವ ಹಬ್ಬವೇ ಗಣೇಶ ಚತುರ್ಥಿ ಈ ಗಣೇಶ ಚತುರ್ಥಿ ಹಬ್ಬವನ್ನು ಭಾರತದಾದ್ಯಂತ ಅತ್ಯಂತ ಸಂಭ್ರಮ ದಿಂದ ಆಚರಿಸಲಾಗುತ್ತದೆ. ದಿನ ಅನಂತ ಚತುರ್ದಶಿಯಂದು ವೈಭವದಿಂದ ಮುಗಿಸುತ್ತಾರೆ. ಈ 10 ದಿನಗಳಲ್ಲಿ ಮಾಡುವ ಪೂಜೆಯು ತುಂಬಾ ಫಲ ನೀಡುತ್ತದೆ ಎಂಬ ನಂಬಿಕೆ ಇದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶನ ಜನನವಾಯಿತು. 2023 ರಲ್ಲಿ ಬರುವ ಭಾದ್ರಪದ ಶುಕ್ಲ ಚತುರ್ಥಿ ಅಥವಾ ಗಣೇಶ ಚತುರ್ಥಿ ಸೆಪ್ಟೆಂಬರ್ ಹತ್ತೊಂಬತ್ತನೇ ತಾರೀಕು ಮಂಗಳ ವಾರದಂದು ಬಂದಿದೆ.

ಸೆಪ್ಟೆಂಬರ್ ಹತ್ತೊಂಬತ್ತನೇ ತಾರೀಕು ಬೆಳಿಗ್ಗೆ 11:07 ದಿಂದ ಮಧ್ಯಾಹ್ನ 1:34 ನಿಮಿಷದ ವರೆಗೆ ಗಣೇಶ ಸ್ಥಾಪನೆ ಮತ್ತು ಪೂಜೆಗೆ ಶುಭ ಸಮಯವಾಗಿದೆ. ನಿಷೇಧಿತ ಚಂದ್ರನ ವೀಕ್ಷಣೆಯ ಸಮಯ, ಬೆಳಿಗ್ಗೆ 9:00 ಘಂಟೆ 45 ನಿಮಿಷದಿಂದ ರಾತ್ರಿ 8:44 ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಚಂದ್ರನನ್ನು ವೀಕ್ಷಿಸಬಾರದು. ಚತುರ್ಥಿ ತಿಥಿ ಪ್ರಾರಂಭವಾಗುವುದು ಸೆಪ್ಟೆಂಬರ್ ಹದಿನೆಂಟ ನೆ ತಾರೀಖು ಮಧ್ಯಾಹ್ನ 12:00 ಘಂಟೆ 39 ನಿಮಿಷ ದಿಂದ. ಚತುರ್ಥಿ ತಿಥಿ ಕೊನೆಗೊಳ್ಳುವುದು ಸೆಪ್ಟೆಂಬರ್ ಹತ್ತೊಂಬತ್ತನೇ ತಾರೀಖು ಮಧ್ಯಾಹ್ನ 1:43 ಕ್ಕೆ ಗಣೇಶನ ವಿಸರ್ಜನೆಯನ್ನು ಸೆಪ್ಟೆಂಬರ್ ಇಪ್ಪತ್ತೆಂಟನೇ ತಾರೀಖು ಅನಂತ ಚತುರ್ದಶಿಯಂದು ಮಾಡಲಾಗುತ್ತದೆ. 2023 ರಲ್ಲಿ ಗಣೇಶ ಚತುರ್ಥಿಯು ಸೆಪ್ಟೆಂಬರ್ ಹದಿನೆಂಟನೆ ತಾರೀಖು ಮಧ್ಯಾಹ್ನ ಪ್ರಾರಂಭವಾಗಿ ಸೆಪ್ಟೆಂಬರ್ 19 ನೇ ತಾರೀಖು ಮಧ್ಯಾಹ್ನ ಅಂತ್ಯವಾಗುವುದರಿಂದ ನಾವು ಸೂರ್ಯೋದಯದ ಪ್ರಕಾರ ಈ ಹಬ್ಬ ವನ್ನು ಸೆಪ್ಟೆಂಬರ್ 19 ಮಂಗಳ ವಾರದಂದು ಆಚರಿಸುತ್ತೇವೆ. ಸಂಜೆಯ ಸಮಯದಲ್ಲಿ ಗಣೇಶನನ್ನು ಸ್ಥಾಪನೆ ಮಾಡುವ ಪದ್ಧತಿ.

ನಿಮ್ಮ ಮನೆಯಲ್ಲಿದ್ದ ರೆ ನೀವು ಸೆಪ್ಟೆಂಬರ್ ಹದಿನೆಂಟರಂದು ಆಚರಿಸ ಬಹುದು. ಆದರೆ ಸೂರ್ಯೋದಯದ ಪ್ರಕಾರ ಗಣೇಶ ಚತುರ್ಥಿಯು ಸೆಪ್ಟೆಂಬರ್ 19 ಮಂಗಳವಾರದಂದು ಆಚರಿಸಲಾಗುತ್ತದೆ. ತಲೆಗೆ ಸ್ನಾನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ ಮೊದಲನೆಯದಾಗಿ ಗಂಗಾಜಲವನ್ನು ಚಿಮುಕಿಸಿ ಪೂಜಾ ಸ್ಥಳವನ್ನು ಶುದ್ದೀಕರಿಸಿ ಮಣ್ಣಿನ ಗಣೇಶ ಮೂರ್ತಿಯನ್ನು ಮನೆಗೆ ತಂದು ಮನೆಗೆ ತರುವಾಗ ಮನೆಯೊಳಗೆ ಬರುವಾಗ ಗಣೇಶನಿಗೆ ಆರತಿಯನ್ನು ಮಾಡಿ ಮನೆಯೊಳಗೆ ಬರ ಮಾಡಿಕೊಳ್ಳಿ. ನಂತರ ಪೂಜಾ ಸ್ಥಳದಲ್ಲಿ ಗಣೇಶನನ್ನು ಸ್ಥಾಪಿಸಿ ಗಣೇಶನಿಗೆ ಶ್ರದ್ಧಾ ಭಕ್ತಯಿಂಜ ಪೂಜೆ ಮಾಡಿ ಮಂತ್ರಗಳನ್ನು ಪಠಿಸಿ 21 ಗರಿಕೆ ಹುಲ್ಲನ್ನು ಗಣೇಶನಿಗೆ ಅರ್ಪಿಸಿ ನಂತರ ನೆಚ್ಚಿನ ಮೋದಕ ಮತ್ತು ಲಡ್ಡುಗಳನ್ನು ನೈವೇದ್ಯವಾಗಿ ನೀಡಿ ಗಣಪತಿಗೆ ಗರಿಕೆ ಹುಲ್ಲ ನ್ನು ಅರ್ಪಿಸುವಾಗ ಓಂ ಗಣಾಧಿಪಾಯ ನಮಃ ಎಂಬ ಮಂತ್ರವನ್ನು ಪಠಿಸಿ ಪೂಜೆಯ ನಂತರ ಮನೆ ಮಂದಿಯೆಲ್ಲಾ ಪ್ರಸಾದ ವನ್ನು ಸೇವಿಸಿ.

ಇದೇ ರೀತಿಯಲ್ಲಿ 10 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಣೇಶನಿಗೆ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಚತುರ್ದಶಿ ತಿಥಿಯಂದು ಗಣೇಶನಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿ ಶಾಸ್ತ್ರೋಕ್ತ ವಾಗಿ ಗಣೇಶ್‌ನನ್ನು. ನೀರಿನಲ್ಲಿ ಮುಳುಗಿಸಿ ಹಿಂದೂ ಧರ್ಮದಲ್ಲಿ ಗಣೇಶನನ್ನು ಮೊದಲ ಪೂಜೆ ದೇವರು ಎಂದು ಪರಿಗಣಿಸ ಲಾಗಿದೆ. ಯಾವುದೇ ಮಂಗಳಕರ ಕೆಲಸಗಳು ಗಣೇಶನ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ. ಗಣೇಶ ಶಕ್ತಿ ಬುದ್ಧಿವಂತಿಕೆ, ಸಂತೋಷ, ಸಮೃದ್ಧಿಯ ನ್ನು ನೀಡುವ ದೇವರು, ಪೌರಾಣಿಕ ಕಥೆಗಳ ಪ್ರಕಾರ ಗಣೇಶನು ಮಧ್ಯಾಹ್ನ ಬಾದ್ರಪದ ಶುಕ್ಲ ಚತುರ್ಥಿ, ಸ್ವಾತಿ ನಕ್ಷತ್ರ ಮತ್ತು ಸಿಂಹ ರಾಶಿಯಲ್ಲಿ ಜನಿಸಿದರು. ನೀವು ಸಹ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಬಯಸಿದರೆ ಚತುರ್ಥಿಯ ಶುಭ ಸಮಯದಲ್ಲಿ ಗಣೇಶನ ನ್ನು ಸ್ಥಾಪಿಸಿ.

Leave a Reply

Your email address will not be published. Required fields are marked *