ಸ್ನೇಹಿತರೆ ಈ ಮಾಹಿತಿ ಪ್ರತಿಯೊಬ್ಬರ ತಂದೆ ತಾಯಿಯ ಕಣ್ಣು ತೆರೆಸುತ್ತೆ ಪುಟ್ಟ ಪುಟ್ಟ ಮಕ್ಕಳು ಎಷ್ಟು ಜೋಪಾನ ಮಾಡಿದರೂ ಸಾಕಾಗಲ್ಲ. ಸ್ವಲ್ಪ ಯಾಮಾರಿದರೂ ದೊಡ್ಡ ದುರಂತವೇ ಸಂಭವಿಸಿ ಬಿಡುತ್ತೆ ಈಗ ತಾನೆ ನಡೆಯಲು ಅಥವಾ ಅಂಬೆಗಾಲಿಡುವ ಮಕ್ಕಳ ಮೇಲೆ ಒಂದು ಕಣ್ಣು ಇರಲೇಬೇಕು. ಈ ಮಕ್ಕಳನ್ನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಸ್ ನಿಲ್ದಾಣದಲ್ಲಿ ರೈಲು ನಿಲ್ದಾಣದಲ್ಲಿ ವಿಮಾನ ನಿಲ್ದಾಣದಲ್ಲಿ ಎಂದಿಗೂ ಕೈಬಿಡಬಾರದು. ಮೈಮರೆತು ಈ ಮಕ್ಕಳ ಕೈ ಬಿಟ್ಟರೆ ಎಂತಹ ಅನಾಹುತ ಆಗುತ್ತದೆ ಎಂಬುದು ಗೊತ್ತಾಗುತ್ತದೆ. ಈ ಘಟನೆ ನಡೆದಿರೋದು ಅಮೇರಿಕಾ ದೇಶದಲ್ಲೇ ಈ ಘಟನೆಯಿಂದ ಪ್ರಪಂಚಕ್ಕೆ ಒಂದು ಪಾಠ ಕಲಿತ ಹಾಗೆ ಆಗಿದೆ. ಅಮೆರಿಕದಲ್ಲಿ ನೆಲೆಸಿರುವ ರಿಚರ್ಡ್ ದಂಪತಿಯ ಏಕೈಕ ಪುತ್ರ ಆಂಕರ್ ರಿಚರ್ಡ್ ತಮ್ಮ ಸ್ನೇಹಿತರು ರಷ್ಯಾ ದೇಶಕ್ಕೆ ಹಿಂದುರುಗಿ ಹೋಗುತ್ತಿರುತ್ತಾರೆ. ರಷ್ಯಾ ದೇಶದಲ್ಲಿ ಯಾವಾಗ ಯುದ್ಧ ಆರಂಭವಾಗಿತ್ತು ಹೆದರಿಕೊಂಡು ಅಮೆರಿಕದ ರಿಚರ್ಡ್ ಅವರ ಮನೆಯಲ್ಲಿ ವಾಸ ಮಾಡುತ್ತಾ ಇರುತ್ತಾರೆ.

ಆದರೆ ಈಗ ರಷ್ಯಾ ದೇಶದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಹಾಗಾಗಿ ವಾಪಾಸ್ ಹೋಗಲು ನಿರ್ಧಾರ ಮಾಡುತ್ತಾರೆ. ಸ್ನೇಹಿತರ ಬೀಳ್ಕೊಡೂಗೆಗೆ ಎಲ್ಲರೂ ಏರ್ಪೋರ್ಟ್ಗೆ ಆಗಮಿಸುತ್ತಾರೆ ಅವರ ಕೇವಲ 1 ವರ್ಷ ಐದು ತಿಂಗಳು ಈ ಕಂದ ಅಂಬೆಗಾಲು ಇಡುತ್ತಾನೆ. ಅಷ್ಟೇ ಅಲ್ಲದೆ ಆಗ ತಾನೆ ನಡೆಯಲು ಶುರು ಮಾಡಿರುತ್ತದೆ. ಸ್ನೇಹಿತನನ್ನು ರಷ್ಯಾ ದೇಶಕ್ಕೆ ವಾಪಸ್ ಕಲಿಸಲು ಲಾಸ್ ಏಂಜಲ್ಸ್‌ನ ಇಂಟರ್ ನ್ಯಾಷನಲ್ ಏರ್ ಪೋರ್ಟ್ಗೆ ಬರುತ್ತಾರೆ. ಲಾಸ್ ಏಂಜಲ್ಸ್‌ನ ಏರ್ಪೋರ್ಟ್ ಒಳಗಡೆ ಇರುವ ಒಂದು ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸುತ್ತ ಎಲ್ಲರೂ ಹರಟೆ ಹೊಡೆಯಲು ಆರಂಭ ಮಾಡುತ್ತಾರೆ. ಯಾಕಪ್ಪ ಅಂದ್ರೆ ವಿಮಾನ ಹಾರಾಡಲು ಇನ್ನು 1 ಗಂಟೆ ಸಮಯ ಇದೆ. ಸ್ನೇಹಿತರ ಜೊತೆ ಹರಟೆ ಹೊಡೆಯುವಾಗ ಮೇಲೆ ತನ್ನ ಪಾಪುನ ಕಡೆ ಗಮನ ಕೊಡೋದೇ ಇಲ್ಲ. ಕೈ ಬಿಟ್ಟು ಬಿಡುತ್ತಾಳೆ. ದೊಡ್ಡ ಅನಾಹುತವೇ ಸಂಭವಿಸುತ್ತದೆ.

ಈ ಕಂದಮ್ಮ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕೊಂಡು ಏರ್ ಪೋರ್ಟ್ ನಲ್ಲಿ ನೆಲೆಸಿದ್ದ ಸಾಕಷ್ಟು ಪ್ರಯಾಣಿಕರ ಜೊತೆ ಆಟವಾಡುತ್ತ ಏರ್‌ಪೋರ್ಟ್‌ನಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳಿಗೆ ಈ ಪಾಪ ಬಗ್ಗೆ ಯಾವುದೇ ಅನುಮಾನ ಬರುವುದಿಲ್ಲ. ಹಾಗೆ ಮುಂದಕ್ಕೆ ಹೋಗುತ್ತಾ ಹೋಗುತ್ತಾ ಲೋಷನ್‌ಗಳಲ್ಲಿ ನಿಂತಿರುವ ಕಾರ್ಗೋ ತುಂಬಿಸಲು ಸಜ್ಜಾಗಿದ್ದ ಪಾರ್ಸಲ್ ಬಾಕ್ಸ್ ನಲ್ಲಿ ಸೇರಿಕೊಳ್ಳುತ್ತಾನೆ. ಕಾರ್ಗೋ ಪ್ಲೇಟ್ ಅಂದರೆ ಮನುಷ್ಯರನ್ನು ಹೊತ್ತುಕೊಂಡು ಹೋಗುವ ಏರೋ ಪ್ಲೇನ್ ಅಲ್ಲ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕೊರಿಯರ್ ಪಾರ್ಸಲ್ ಗಳನ್ನು ತೆಗೆದುಕೊಂಡು ಹೋಗುವ ಡಿಲಿವರಿ ಏರೋ ಪ್ಲೇನ್ ಗಳು ಈ ಕಾರ್ಗೋ ವಿಮಾನ ಲಾಸ್ ಏಂಜಲೀಸ್‌ನಿಂದ ಫ್ರಾನ್ಸ್‌ಗೆ ಹೋಗುತ್ತೆ. ಸುಮಾರು 4500 ಕಿಲೋಮೀಟರ್ ದೂರ ಏಳು ತಾಸು ಪ್ರಯಾಣ ಈ ವಿಮಾನ ಫ್ರಾನ್ಸ್ ದೇಶದ ಕ್ಯಾಪಿಟಲ್ ಸಿಟಿ ಪ್ಯಾರಿಸ್‌ನಲ್ಲಿ ನಿಲುಗಡೆ ಆಗುತ್ತದೆ ಪಾರ್ಸಲ್ ಬಾಕ್ಸ್ ಒಳಗೆ ಎಲೆಕ್ಟ್ರಿ ಕ್ ವೆಂಟಿಲೇಟರ್ ಮತ್ತು ಆಕ್ಸಿಜನ್ ಇರುತ್ತೆ.

ಉಸಿರಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಒಳಗಡೆಯಿಂದ ಹೊರಗಡೆ ಏನೇ ಶಬ್ದ ಮಾಡಿದರು. ಯಾರಿಗೂ ಕೇಳಿಸುವುದಿಲ್ಲ. ನಂತರ ಏರ್ಪೋರ್ಟ್ ಸಿಬ್ಬಂದಿಗಳು ಈ ಪಾರ್ಸಲ್ ಬಾಕ್ಸ್ ಅನ್ನು ವಿಮಾನದಲ್ಲಿ ತುಂಬಿಸುತ್ತಾರೆ. ಪಾಪು ವಿಮಾನದ ಒಳಗಡೆ ಇದೆ. ವಿಮಾನ ಹಾರಿ ಕೊಂಡು ಹೋಗುತ್ತೆ. ಇಷ್ಟೆಲ್ಲ ಆದ ಮೇಲೆ ಆಮೇಲೆ ಗೊತ್ತಾಗುತ್ತೆ ಪಾಪು ನಮ್ಮ ಜೊತೆ ಇಲ್ಲ. ಕಳೆದುಹೋಗಿದೆ ಅಂತ ನಂತರ ಏರ್ಪೋರ್ಟ್ ಸೆಕ್ಯುರಿಟಿ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಗೆ ಮಾಹಿತಿ ರವಾನೆ ಆಗುತ್ತೆ. ಈ ಕಾರ್ಗೋ ವಿಮಾನ ಫ್ರಾನ್ಸ್ ದೇಶದ ಪ್ಯಾರಿ ಸ್ ನಗರಕ್ಕೆ ತಲುಪುತ್ತದೆ. ಆಮೇಲೆ ಪೊಲೀಸರ ಸಹಾಯದಿಂದ ಈ ಮಗುವನ್ನು ಕಂಡು ಹಿಡಿಯುತ್ತಾರೆ. ನೋಡಿದ್ರಲ್ಲ ನಿಮ್ಮ ಮಗುವಿನ ಮೇಲೆ ಗಮನವಿರಲಿಲ್ಲ ಎಂದರೆ ಏನೆಲ್ಲಾ ವಿಷಯಗಳಾಗುತ್ತವೆ ಅಂತ

Leave a Reply

Your email address will not be published. Required fields are marked *