ತಲೆಯಲ್ಲಿ ಹೊಟ್ಟು ಅಂದರೆ ತಲೆಯ ಮೇಲೇನಿನ ಚರ್ಮದ ಅಲರ್ಜಿ ಕಾರಣ ವಾಗಿರುತ್ತದೆ, ಸಧ್ಯ ಪರಿಸರದಲ್ಲಿನ ಕಲುಷಿತ ಗಾಳಿಯಿಂದ ನಿಮ್ಮ ಕೂದಲನ್ನ ರಕ್ಷಿಸಿಕೊಳ್ಳಬೇಕು ಹಾಗು ಕೂದಲಿಗೆ ಪೂರಕವಾದ ಶಕ್ತಿಯನ್ನು ನೀಡಬೇಕಾಗುತ್ತದೆ ಇಲ್ಲವಾದರೆ ಬಿಳಿ ಕೂದಲ ಸಮಸ್ಯೆ ಅಥವಾ ತಲೆಯಲ್ಲಿ ಹೇನಿನ ಸಮಸ್ಯೆಗಳು ಕಾಡ ತೊಡಗುತ್ತವೆ.

ಇಂದು ನಾವು ತಿಳಿಸುವ ಸುಲಭ ಮನೆ ಮದ್ದಿನ ಸಹಾಯದಿಂದ ತಲೆ ಕೂದಲಿಗೆ ಸಂಭಂದ ಪಟ್ಟ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ.

ಮಿನರಲ್ ಆಯಿಲ್ ಹಾಗು ವಿನೆಗರ್ ಸಮಪ್ರಮಾಣದಲ್ಲಿ ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ ನಂತರ ಈ ಮಿಶ್ರಣವನ್ನ ನಿಮ್ಮ ತಲೆ ಕೂದಲ ನೆತ್ತಿಯ ಮೇಲೆ ಹಚ್ಚಬೇಕು ಹಾಗು ಸ್ವಲ್ಪ ಮಸಾಜ್ ಮಾಡಬೇಕು, ಸ್ವಲ್ಪ ಸಮಯ ಬಿಟ್ಟು ಕೂದಲ ಕ್ಯಾಪ್ ಅನ್ನು ಕಟ್ಟಿ ರಾತ್ರಿ ಮಲಗಿಬಿಡಿ, ಬೆಳಗ್ಗೆ ಎದ್ದು ಶಂಪೂ ಬಳಸಿ ಸ್ನಾನ ಮಾಡಿ, ಹೀಗೆ ಮಾಡುವುದರಿಂದ ತಲೆಯ ಹೊಟ್ಟು ಹಾಗು ಹೇನಿನ ಸಮಸ್ಯೆಯೇ ಇರುವುದಿಲ್ಲ.

ತಲೆಯ ಹೇನಿಗೆ ಇನ್ನೊಂದು ಸುಲಭ ಉಪಾಯವೆಂದರೆ ಮನೆಯಲ್ಲೇ ಇರುವ ತೆಂಗಿನ ಎಣ್ಣೆಯನ್ನ ಕಾಯಿಸಬೇಕು ಹಾಗು ಅದಕ್ಕೆ ಸ್ವಲ್ಪ ಕರ್ಪೂರವನ್ನು ಸೇರಿಸ ಬೇಕು, ಚೆನ್ನಾಗಿ ಮಿಶ್ರಣ ಮಾಡಿ ನಂತರ ಮೇಲೆ ತಿಳಿಸಿದ ಹಾಗೆ ತಲೆಯ ನೆತ್ತಿಗೆ ಹಚ್ಚಿ ಕ್ಯಾಪ್ ತೊಟ್ಟು ಮಲಗಿ ಬೆಳಗೆದ್ದು ಸ್ನಾನ ಮಾಡಿದರೆ ಆಯಿತು.

Leave a Reply

Your email address will not be published. Required fields are marked *