ಹೆಚ್ಚಿನ ಜನರ ನೆತ್ತಿಯ ಮೇಲೆ ಒಂದು ಬಿಂದುವಿನಲ್ಲಿ ಪ್ರದಕ್ಷಿಣಾಕಾರವಾಗಿ ಕೂದಲಿನ ಸುಳಿಯನ್ನು ಹೊಂದಿರುತ್ತಾರೆ. ಕೆಲವರಿಗೆ ತಲೆಯಲ್ಲಿ ಎರಡು ಸುಳಿಗಳು ಇರುತ್ತದೆ. NHGRI ಯ ಅಧ್ಯಯನವು ವಿಶ್ವದ ಜನಸಂಖ್ಯೆಯ 5% ರಷ್ಟು ಜನರು ಎರಡು ತಲೆಯಲ್ಲಿ ಎರಡು ಸುಳಿ ಹೊಂದಿದ್ದಾರೆ ಎಂದು ಕಂಡುಹಿಡಿದಿದೆ.

ವೈಜ್ಞಾನಿಕವಾಗಿ ಎರಡು ಸುಳಿ ಕೂದಲನ್ನು ರೂಪಿಸುವಲ್ಲಿ ಜೀನ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ತಜ್ಞರ ಪ್ರಕಾರ ಪುರುಷರು ಮತ್ತು ಮಹಿಳೆಯರು ತಮ್ಮ ಕುಟುಂಬದ ಸದಸ್ಯರಿಂದ ಅದನ್ನು ಆನುವಂಶಿಕವಾಗಿ ಪಡೆದಿರುತ್ತಾರೆ ಎಂದು ಹೇಳುತ್ತಾರೆ.

ಡಬಲ್ ಕಿರೀಟದ ಕೂದಲಿನ ಕಾರಣವನ್ನು ನಿಖರವಾಗಿ ಕಂಡುಹಿಡಿಯಲು ಸಾಕಷ್ಟು ಸಂಶೋಧನೆಗಳು ನಡೆದಿಲ್ಲ. ಹಾಗಾಗಿ ಅದಿನ್ನು ಪ್ರಶ್ನೆಯ ಗೊಂದಲದಲ್ಲೇ ಇದೆ. ಎರಡು ಸುಳಿ ಕೂದಲು ಅಪರೂಪ ಆದರೆ ಅದರಲ್ಲಿ ಅಸ್ವಾಭಾವಿಕ ಏನೂ ಇಲ್ಲ. ಅದೊಂದು ದೇಹದ ವಿಶಿಷ್ಟ ಲಕ್ಷಣ.

ಕೆಲ ಜನರು ತಲೆಯಲ್ಲಿ ಎರಡು ಸುಳಿ ಇದ್ದರೆ ಎರಡು ಮದುವೆಯಾಗುತ್ತದೆ. ಒಂದು ಮದುವೆ ನಿಶ್ಚಯವಾಗು ಸಮಯದಲ್ಲಾದರೂ ಮುರಿದು ಎರಡನೇ ಮದುವೆ ಆಗುತ್ತದೆ ಎಂದು ಹೇಳುತ್ತಾರೆ ನಂಬುತ್ತಾರೆ. ಆದರೆ ಇದಕ್ಕೆ ನಿಖರತೆ ಇಲ್ಲ.

ಕೆಲವರು ಎರಡು ಸುಳಿಇರುವ ಜನ ಅತಿ ಉತ್ತಮರಾಗಿರುತ್ತಾರೆ. ನೇರ ನಿಖರ ಮನುಷ್ಯರಾಗಿರುತ್ತಾರೆ. ಜನರೊಡನೆ ಬೇರೆಯುತ್ತಾರೆ. ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ ಎಂದು ಹೇಳುತ್ತಾರೆ.

Leave a Reply

Your email address will not be published. Required fields are marked *