ನಮಸ್ತೆ ಪ್ರಿಯ ಓದುಗರೇ, ಮಹಾವಿಷ್ಣುವು ಜಗತ್ತನ್ನು ದುಷ್ಟರಿಂದ ರಕ್ಷಿಸುವುದಕ್ಕೆ ದಶ ಅವತಾರಗಳನ್ನು ತಾಳಿದ ಎಂದು ಹೇಳಲಾಗುತ್ತದೆ. ಹೀಗಾಗಿ ಆತನನ್ನು ಅಚ್ಯುತ ನಾರಾಯಣ, ಗೋವಿಂದ, ಅನಂತಶಯನ, ಚನ್ನಕೇಶವ, ಲಕ್ಷ್ಮೀ ನಾರಾಯಣ, ನರಸಿಂಹ, ಮುಕುಂದ, ಗರುಡ ವಾಹನ ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತದೆ. ಈ ರೀತಿ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಶ್ರೀಮನ್ ನಾರಾಯಣನು ಈ ಕ್ಷೇತ್ರದಲ್ಲಿ ಚನ್ನಕೇಶವ ಆಗಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದನೆ. ಬನ್ನಿ ಇವತ್ತಿನ ಲೇಖನದಲ್ಲಿ ಇಡೀ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡದಾದ ಕಲ್ಲಿನ ಕಲಶವನ್ನು ಹೊಂದಿರುವ ಈ ದೇವಾಲಯವನ್ನು ಕಣ್ಣು ತುಂಬಿಕೊಂಡು ಬರೋಣ. ಹೊಯ್ಸಳ ವಾಸ್ತುಶಿಲ್ಪ ದ ಕಲಾ ಕೇಂದ್ರವಾಗಿ ಬಿಂಬಿತವಾಗಿರುವ ಆನೆಕೆರೆ ಯಲ್ಲಿ ಚನ್ನಕೇಶವನ ಭವ್ಯವಾದ ಆಲಯವನ್ನು ನಿರ್ಮಾಣ ಮಾಡಲಾಗಿದ್ದು, ಬಹಳ ಹಿಂದೆ ಈ ಸ್ಥಳದಲ್ಲಿ ಆನೆಗಳು ಜಲ ಕ್ರೀಡೆ ಆಡುತ್ತಾ ಇದ್ದರಿಂದ ಈ ಊರಿಗೆ ಆನೆಕೆರೆ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ.

 

ಸಂಪೂರ್ಣ ಕಲ್ಲಿನಿಂದ ಕೆತ್ತಿರುವ ಈ ಆಲಯವನ್ನು ಕ್ರಿಸ್ತ ಶಕ 1119 ರಲ್ಲೀ ಹೊಯ್ಸಳ ರಾಜರು ನಿರ್ಮಿಸಿದರು ಎಂದು ಉಲ್ಲೇಖವಿದ್ದು, ಈ ದೇಗುಲವು ಪ್ರಾಕೃತಿಕ ಅಲಂಕಾರ, ಗೋಪುರ, ಮುಖ ಮಂಟಪ, ಹಾಸೀನ, ಗರ್ಭ ಗೃಹಗಳನ್ನು ಒಳಗೊಂಡಿದೆ. ಈ ಕ್ಷೇತ್ರದ ಪ್ರಧಾನ ದೇವತೆಯಾಗಿ ಚನ್ನಕೇಶವ ದೇವರು ಆರಾಧಿಸಲ್ಪಡುವ ಈ ದೇವನ ಬಳಿ ಬಂದು ಭಕ್ತಿಯಿಂದ ಬೇಡಿಕೊಂದರೆ ಮನದ ಕ್ಲೇಶಗಳು ದೂರವಾಗುತ್ತಂತೆ. ಇಲ್ಲಿ ಚನ್ನಕೇಶವನ ಜೊತೆ ಗಣಪತಿ, ಭುವನೇಶ್ವರಿ ದೇವಿಯನ್ನು ಸಹ ಪ್ರತಿಷ್ಠಾಪಿಸಲಾಗಿದೆ. ದೇಗುಲದ ಹೊರ ಭಾಗದ ಗೋಪುರದ ಮೇಲೆ ಕಲಾತ್ಮಕ ಕುಸುರಿ ಇಂದ ಕೆತ್ತಿದ ಶಂಕದೋಪಾದೀಯ ದೊಡ್ಡ ಕಲ್ಲಿನ ಕಳಶವಿದ್ದು, ಈ ರೀತಿ ದೊಡ್ಡದಾದ ಕಲ್ಲಿನ ಕಲಶವನ್ನು ಹೊಂದಿರುವ ಕರ್ನಾಟಕದ ಅಪರೂಪದ ದೇಗುಲ ಎಂಬ ಖ್ಯಾತಿಗೆ ಈ ಆಲಯ ಭಾಜನವಾಗಿದೆ. ಇನ್ನೂ ಇಲ್ಲಿ ಕೆತ್ತಿರುವ ಕಂಬಗಳು ಶಿಖರ ಕಂಬದ ಪ್ರಭಾವಳಿಗಳು , ಹೊರ ಭಿತ್ತಿಯಲ್ಲಿ ಇರುವ ಉಬ್ಬು ಶಿಲ್ಪಗಳು ಒಳ ಭಾಗದಲ್ಲಿ ಇರುವ ನಕ್ಷತ್ರ ಆಕಾರದ ರಚನೆ ಪ್ರಾಂಗಣದಲ್ಲಿ ಇರುವ ಕಲಾತ್ಮಕ ಕೆತ್ತನೆಯಲ್ಲಿ ಇರುವ ಕಲ್ಲು ಕಂಬ ಇವೆಲ್ಲವೂ ನೋಡುಗರ ಮೈ ಮನದಲ್ಲಿ ರೋಮಾಂಚನ ಎಬ್ಬಿಸುತ್ತೆ.

 

ಆಲಯದ ಮುಖ್ಯ ಗರ್ಭ ಗುಡಿಯಲ್ಲಿರುವ ಚನ್ನಕೇಶವನ ಕಪ್ಪು ವರ್ಣದ ಮೂರ್ತಿಯನ್ನು ನೋಡ್ತಾ ಇದ್ರೆ ಮನಸ್ಸು ಪ್ರಫುಲ್ಲ ಆಗುತ್ತೆ. ಸುಮಾರು ನಾಲ್ಕು ಅಡಿಗಿಂತ ಎತ್ತ್ರವಾಗಿರುವ ಇಲ್ಲಿನ ಚನ್ನಕೇಶವ ನು ನಿಂತ ಭಂಗಿಯಲ್ಲಿ ಶಂಖ ಚಕ್ರ ಗದಾ ಹಸ್ತನಾಗಿ ಭಕ್ತರಿಗೆ ದರ್ಶನವನ್ನು ನೀಡ್ತಾ ಇದ್ದಾನೆ. ನಿತ್ಯವೂ ಇಲ್ಲಿನ ಸ್ವಾಮಿಗೆ ಅಭಿಷೇಕ ಸಹಿತ ಪೂಜೆಯನ್ನು ಮಾಡುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಇಷ್ಟಾನುಸಾರ ದೇವರಿಗೆ ಪೂಜೆಯನ್ನು ಸಲ್ಲಿಸಬಹುದು. ವೈಕುಂಠ ಏಕಾದಶಿಯಂದು ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಅದ್ಭುತ ಕಲಾ ಕುಸಿರಿಯಿಂದ ಕೆತ್ತಿರುವ ಈ ಭವ್ಯವಾದ ಆಲಯವು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ದ ಆನೆಕೆರೆ ಎಂಬ ಊರಿನಲ್ಲಿ ಇದೆ. ಈ ದೇಗುಲವು ಬೆಂಗಳೂರಿನಿಂದ 153 ಕಿಮೀ, ಹಾಸನದಿಂದ 39 ಕಿಮೀ, ಚನ್ನರಾಯಪಟ್ಟಣ ದಿಂದ 7 ಕಿಮೀ ದೂರದಲ್ಲಿದೆ. ಹಾಸನವೂ ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಆಲಯಕ್ಕೇ ಭೇಟಿ ನೀಡಿ ಇಲ್ಲಿನ ವಾಸ್ತು ಕಲಾ ಸೌಂದರ್ಯವನ್ನು ಕಣ್ಣು ತುಂಬಿಕೊಂಡು ಬನ್ನಿ. ಶುಭದಿನ.

Leave a Reply

Your email address will not be published. Required fields are marked *